ಭಾರತದ ಆರ್ಥಿಕತೆ ಹಿಯಾಳಿಸಿದ್ದ ಟ್ರಂಪ್ ಈಗ ಏಕಾಏಕಿ ಹೊಗಳಿದ್ದೇಕೆ?

ಭಾರತದ ಆರ್ಥಿಕತೆ ಹಿಯಾಳಿಸಿದ್ದ ಟ್ರಂಪ್ ಈಗ ಏಕಾಏಕಿ ಹೊಗಳಿದ್ದೇಕೆ?

ಒಂದು ಕಾಲದಲ್ಲಿ ಭಾರತದ ಆರ್ಥಿಕತೆಯನ್ನು ಟೀಕಿಸಿದ್ದ ನಾಯಕ ಈಗ ಅದನ್ನೇ ಅಮೆರಿಕಕ್ಕೆ ಮಾದರಿಯಾಗಿ ತೋರಿಸುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಹಾಗಾದರೆ ಟ್ರಂಪ್ ಅವರ ಮಾತಿನಲ್ಲಿನ ಈ ಬದಲಾವಣೆಗೆ ಕಾರಣಗಳೇನು?

ಕೆಲವು ತಿಂಗಳ ಹಿಂದೆ ಭಾರತದ ಆರ್ಥಿಕತೆಯನ್ನು ‘ಡೆಡ್ ಎಕಾನಮಿ’ (ಸತ್ತ ಆರ್ಥಿಕತೆ) ಎಂದು ಟೀಕಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಭಾರತದ ಆರ್ಥಿಕ ಬೆಳವಣಿಗೆಯನ್ನು ಹೊಗಳಿದ್ದಾರೆ. ಭಾರತದ ಜಿಡಿಪಿ ಬೆಳವಣಿಗೆ ಮತ್ತು ಕಡಿಮೆ ಬಡ್ಡಿದರಗಳನ್ನು ಉದಾಹರಣೆಯಾಗಿ ನೀಡಿರುವ ಅವರು, ಅಮೆರಿಕದಲ್ಲೂ ಬಡ್ಡಿದರ ಕಡಿಮೆಯಾದರೆ ಆರ್ಥಿಕ ಬೆಳವಣಿಗೆ ಇನ್ನಷ್ಟು ವೇಗ ಪಡೆಯಬಹುದು ಎಂದು ಹೇಳಿದ್ದಾರೆ.

ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ಭಾರತದಲ್ಲಿ ಸುಮಾರು ಶೇ.7ರಷ್ಟು ಜಿಡಿಪಿ ಬೆಳವಣಿಗೆ ದಾಖಲಾಗುತ್ತಿದೆ. ಅಲ್ಲಿನ ಬಡ್ಡಿದರಗಳೂ ಕಡಿಮೆ ಇವೆ. ಅಮೆರಿಕದಲ್ಲೂ ಇಂತಹ ಪರಿಸ್ಥಿತಿ ಇದ್ದರೆ ಜಿಡಿಪಿ ಬೆಳವಣಿಗೆ ಶೇ.14ರಿಂದ 20ರವರೆಗೂ ತಲುಪಬಹುದು ಎಂದು ಹೇಳಿದ್ದಾರೆ. ಒಂದು ಕಾಲದಲ್ಲಿ ಭಾರತದ ಆರ್ಥಿಕತೆಯನ್ನು ಟೀಕಿಸಿದ್ದ ನಾಯಕ ಈಗ ಅದನ್ನೇ ಅಮೆರಿಕಕ್ಕೆ ಮಾದರಿಯಾಗಿ ತೋರಿಸುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಹಾಗಾದರೆ ಟ್ರಂಪ್ ಅವರ ಮಾತಿನಲ್ಲಿನ ಈ ಬದಲಾವಣೆಗೆ ಕಾರಣಗಳೇನು?

1. ಭಾರತದ ಆರ್ಥಿಕ ಬೆಳವಣಿಗೆಯ ವೇಗ
ಭಾರತದ ಆರ್ಥಿಕತೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಸುಮಾರು ಶೇ.7ರಷ್ಟು ಜಿಡಿಪಿ ಬೆಳವಣಿಗೆಯನ್ನು ಉಲ್ಲೇಖಿಸಿರುವ ಟ್ರಂಪ್, ಅಮೆರಿಕದ ಆರ್ಥಿಕತೆಯ ಸಾಮರ್ಥ್ಯವನ್ನು ವಿವರಿಸಲು ಭಾರತದ ಉದಾಹರಣೆ ನೀಡಿದ್ದಾರೆ. ಹಿಂದೆ ಭಾರತದ ಆರ್ಥಿಕತೆಯನ್ನು ಟೀಕಿಸಿದ್ದರೂ, ಈಗ ಅದರ ಬೆಳವಣಿಗೆಯ ವೇಗವನ್ನು ಒಪ್ಪಿಕೊಂಡಿರುವುದು ಅವರ ಹೇಳಿಕೆಯಲ್ಲಿ ಕಾಣಿಸುತ್ತದೆ.

2. ಅಮೆರಿಕಾದ ಫೆಡರಲ್ ರಿಸರ್ವ್ ಮೇಲಿನ ಅಸಮಾಧಾನ
ಟ್ರಂಪ್ ಅವರ ಇತ್ತೀಚಿನ ಹೇಳಿಕೆಯ ಪ್ರಮುಖ ಉದ್ದೇಶ ಅಮೆರಿಕದ ಕೇಂದ್ರ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್‌ನ ಬಡ್ಡಿದರ ನೀತಿಯನ್ನು ಟೀಕಿಸುವುದಾಗಿದೆ. ಅಮೆರಿಕದ ಆರ್ಥಿಕತೆಯಲ್ಲಿ ಉತ್ತಮ ಅಂಕಿಅಂಶಗಳು ಬಂದಾಗಲೂ ಫೆಡ್ ಬಡ್ಡಿದರ ಹೆಚ್ಚಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ. ಆರ್ಥಿಕ ಬೆಳವಣಿಗೆ ಉತ್ತಮವಾಗಿರುವಾಗ ಬಡ್ಡಿದರ ಕಡಿಮೆ ಮಾಡಬೇಕು ಎಂಬುದು ಅವರ ವಾದ. ಭಾರತದ ಕಡಿಮೆ ಬಡ್ಡಿದರ ಮತ್ತು ಜಿಡಿಪಿ ಬೆಳವಣಿಗೆಯನ್ನು ಉಲ್ಲೇಖಿಸುವ ಮೂಲಕ ತಮ್ಮ ವಾದಕ್ಕೆ ಉದಾಹರಣೆ ನೀಡಿದ್ದಾರೆ.

3. ಭಾರತ-ಅಮೆರಿಕಾ ವ್ಯಾಪಾರ ಸಂಬಂಧಗಳ ಮಹತ್ವ
ಭಾರತ ಮತ್ತು ಅಮೆರಿಕಾ ಎರಡೂ ದೇಶಗಳ ನಡುವೆ ದೊಡ್ಡ ಪ್ರಮಾಣದ ವ್ಯಾಪಾರ ವಹಿವಾಟು ನಡೆಯುತ್ತಿದೆ. ಅಮೆರಿಕಕ್ಕೆ ಭಾರತ ಪ್ರಮುಖ ಮಾರುಕಟ್ಟೆಯಾಗಿದೆ. ತಂತ್ರಜ್ಞಾನ, ಔಷಧ, ಎಲೆಕ್ಟ್ರಾನಿಕ್ಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿಯೂ ಎರಡೂ ದೇಶಗಳ ಸಹಕಾರವಿದೆ.
2025ರಲ್ಲಿ ಸುಂಕದ ವಿಚಾರವಾಗಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಟ್ರಂಪ್ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಸುಂಕ ವಿಧಿಸುವುದಾಗಿ ಘೋಷಿಸಿದ್ದರು. ರಷ್ಯಾದಿಂದ ತೈಲ ಖರೀದಿಸುವ ಭಾರತದ ನಿರ್ಧಾರವನ್ನೂ ಟೀಕಿಸಿದ್ದರು.

Leave a Reply

Your email address will not be published. Required fields are marked *