ಕರ್ನಾಟಕಕ್ಕೆ ಮತ್ತೆ 48 ಗಂಟೆಗಳ ಮಳೆ ಅಲರ್ಟ್! ಬೆಂಗಳೂರಿನಲ್ಲಿ ಸಂಜೆ ಮಳೆ ಆರ್ಭಟ? 16 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ!
ಬೆಂಗಳೂರು (ನ.25): ಚಳಿಗಾಲದಲ್ಲೂ ರಾಜ್ಯದಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದೆ. ನಿನ್ನೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಮಳೆಗೆ ಜನರು ಹೈರಾಣಾಗಿದ್ದಾರೆ.
ಬೆಂಗಳೂರು (ನ.25): ಚಳಿಗಾಲದಲ್ಲೂ ರಾಜ್ಯದಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದೆ. ನಿನ್ನೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಮಳೆಗೆ ಜನರು ಹೈರಾಣಾಗಿದ್ದಾರೆ.
ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮತ್ತೊಂದು ಮಳೆ ಮುನ್ಸೂಚನೆ ನೀಡಿದ್ದು, ಮುಂದಿನ 48 ಗಂಟೆಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಇಂದು ರಾಜ್ಯದ ಬರೋಬ್ಬರಿ 16 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹಾಗಾದ್ರೆ ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ ಶುರುವಾಗಲಿದೆಯಾ? ಇನ್ನೆಷ್ಟು ದಿನ ಈ ಮಳೆ ಮುಂದುವರಿಯಲಿದೆ?

ಬೆಂಗಳೂರಿನಲ್ಲಿ ಸಂಜೆ ಮತ್ತೆ ಮಳೆ ಸಾಧ್ಯತೆ!ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ 9 ಗಂಟೆಯವರೆಗೂ ನಗರದ ಕೆಲವೆಡೆ ತುಂತುರು ಮಳೆಯಾಗಿದೆ.
ಬಳಿಕ ಮೋಡಗಳು ಸರಿದು ಸೂರ್ಯನ ದರ್ಶನವಾಗಿದ್ದರೂ, ಸಂಜೆ ವೇಳೆಗೆ ಮತ್ತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿನ್ನೆ ಸುರಿದ ಮಳೆಯಿಂದಾಗಿ ತೊಂದರೆ ಅನುಭವಿಸಿದ್ದ ಬೆಂಗಳೂರಿಗರಿಗೆ ಇಂದು ಕೂಡ ಮಳೆ ಎದುರಾಗುವ ಸಾಧ್ಯತೆ ಇದೆ.
ನಿನ್ನೆ ಸುರಿದ ಮಳೆಯಿಂದಾಗಿ ತೊಂದರೆ ಅನುಭವಿಸಿದ್ದ ಬೆಂಗಳೂರಿಗರಿಗೆ ಇಂದು ಕೂಡ ಮಳೆ ಎದುರಾಗುವ ಸಾಧ್ಯತೆ ಇದೆ.
ಹೀಗಾಗಿ ಸಂಜೆ ಕಚೇರಿಯಿಂದ ಮನೆಗೆ ತೆರಳುವವರು ಹಾಗೂ ಹೊರಗಡೆ ಓಡಾಡುವವರು ಛತ್ರಿ, ರೈನ್ಕೋಟ್ ಜೊತೆಯಲ್ಲಿಟ್ಟುಕೊಳ್ಳುವುದು ಉತ್ತಮ.ಇಂದು ಯಾವ 16 ಜಿಲ್ಲೆಗಳಲ್ಲಿ ಮಳೆ?
ನವೆಂಬರ್ 25ರಂದು ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ದಕ್ಷಿಣ ಒಳನಾಡಿನ ಈ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
– ಬೆಂಗಳೂರು ನಗರ
– ಬೆಂಗಳೂರು ಗ್ರಾಮಾಂತರ
– ಚಾಮರಾಜನಗರ
– ಚಿಕ್ಕಬಳ್ಳಾಪುರ
– ಚಿಕ್ಕಮಗಳೂರು
– ಕೊಡಗು
– ಹಾಸನ
– ಕೋಲಾರ
– ಮಂಡ್ಯ
– ಮೈಸೂರು
– ರಾಮನಗರ
– ಶಿವಮೊಗ್ಗ
– ತುಮಕೂರು
– ಬೆಂಗಳೂರು ಗ್ರಾಮಾಂತರ
– ಚಾಮರಾಜನಗರ
– ಚಿಕ್ಕಬಳ್ಳಾಪುರ
– ಚಿಕ್ಕಮಗಳೂರು
– ಕೊಡಗು
– ಹಾಸನ
– ಕೋಲಾರ
– ಮಂಡ್ಯ
– ಮೈಸೂರು
– ರಾಮನಗರ
– ಶಿವಮೊಗ್ಗ
– ತುಮಕೂರು
ಮತ್ತೊಂದೆಡೆ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ನವೆಂಬರ್ 26ಕ್ಕೂ ತಪ್ಪಲ್ಲ ಮಳೆ ಕಾಟ!
ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಕಾಲ ಮಳೆಯ ಮುನ್ಸೂಚನೆ ನೀಡಿರುವುದರಿಂದ ನವೆಂಬರ್ 26ರಂದು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳ ಜೊತೆಗೆ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ಆದರೆ ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ರಾಜ್ಯದ ಒಂದೆಡೆ ಮಳೆ, ಮತ್ತೊಂದೆಡೆ ಒಣಹವೆ ಇರುವಂತಹ ವಿಭಿನ್ನ ಹವಾಮಾನ ಪರಿಸ್ಥಿತಿ ಮುಂದುವರಿಯಲಿದೆ.ಬೆಂಗಳೂರಿನಲ್ಲಿ ನಿನ್ನೆ ಮಳೆರಾಯನ ಅಬ್ಬರ!

ನವೆಂಬರ್ 24ರಂದು ಬೆಂಗಳೂರಿನಲ್ಲಿ ಮಧ್ಯಾಹ್ನ 3 ಗಂಟೆಯಾಗುತ್ತಿದ್ದಂತೆ ದಟ್ಟವಾದ ಮೋಡಗಳು ಆವರಿಸಿದ್ದವು. ಸಂಜೆ 4 ಗಂಟೆಯಿಂದ ಮಳೆ ಆರಂಭವಾಗಿದ್ದು, ನಗರದ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಸಂಜೆಯ ವೇಳೆಯೇ ಮಳೆ ಸುರಿದಿದ್ದರಿಂದ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು.ಸುರಿಯುವ ಮಳೆಯಲ್ಲೂ ಜಗ್ಗದ ಆಶಾ ಕಾರ್ಯಕರ್ತೆಯರು!
ಸಂಜೆಯ ವೇಳೆಯೇ ಮಳೆ ಸುರಿದಿದ್ದರಿಂದ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು.ಸುರಿಯುವ ಮಳೆಯಲ್ಲೂ ಜಗ್ಗದ ಆಶಾ ಕಾರ್ಯಕರ್ತೆಯರು!
ಇತ್ತ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಸುರಿಯುವ ಮಳೆಯಲ್ಲೂ ತಮ್ಮ ಹೋರಾಟ ಮುಂದುವರಿಸಿದ್ದರು. ಚಳಿ ಹಾಗೂ ಮಳೆಯ ನಡುವೆಯೂ ಪ್ರತಿಭಟನೆಯಿಂದ ಹಿಂದೆ ಸರಿಯದೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ, ಚಳಿಗಾಲದಲ್ಲೂ ರಾಜ್ಯದಲ್ಲಿ ಮಳೆಯ ಆಟ ಮುಂದುವರಿದಿದ್ದು, ನವೆಂಬರ್ 26ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಬೆಂಗಳೂರಿಗರು ಸಂಜೆ ಹೊರಗೆ ತೆರಳುವ ಮುನ್ನ ಹವಾಮಾನದ ಬಗ್ಗೆ ಗಮನಹರಿಸುವುದು ಉತ್ತಮ.
ಒಟ್ಟಿನಲ್ಲಿ, ಚಳಿಗಾಲದಲ್ಲೂ ರಾಜ್ಯದಲ್ಲಿ ಮಳೆಯ ಆಟ ಮುಂದುವರಿದಿದ್ದು, ನವೆಂಬರ್ 26ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಬೆಂಗಳೂರಿಗರು ಸಂಜೆ ಹೊರಗೆ ತೆರಳುವ ಮುನ್ನ ಹವಾಮಾನದ ಬಗ್ಗೆ ಗಮನಹರಿಸುವುದು ಉತ್ತಮ.