‘ವಿಡಿಯೋ ಗೇಮ್‌ನಲ್ಲೂ ಹೀಗೆ ಆಡೋಕೆ ಆಗಲ್ಲ!’ 15ರ ವೈಭವ್ ಬ್ಯಾಟಿಂಗ್ ಸುನಾಮಿ ನೋಡಿ ನಗು ತಡೆಯಲಾಗದ ದಿನೇಶ್ ಕಾರ್ತಿಕ್!
ವಯಸ್ಸು ಕೇವಲ 15 ವರ್ಷ.. ಆದರೆ ಬ್ಯಾಟಿಂಗ್ ಅಬ್ಬರ ನೋಡಿದ್ರೆ ಘಟಾನುಘಟಿ ಕ್ರಿಕೆಟಿಗರೇ ಬೆರಗಾಗುತ್ತಿದ್ದಾರೆ! ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿರುವ ವೈಭವ್ ಸೂರ್ಯವಂಶಿ ಇದೀಗ ಕ್ರಿಕೆಟ್ ಜಗತ್ತಿನ ಹಾಟ್ ಟಾಪಿಕ್ ಆಗಿದ್ದಾರೆ.

ಅದರಲ್ಲೂ ವೈಭವ್ ಆಟಕ್ಕೆ ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ನೀಡಿರುವ ಹಾಸ್ಯಮಯ ಪ್ರತಿಕ್ರಿಯೆ ಅಭಿಮಾನಿಗಳ ಗಮನ ಸೆಳೆದಿದೆ.ಸ್ಕೋರ್‌ಕಾರ್ಡ್ ನೋಡಿ ನಗು ತಡೆಯಲಾಗಲಿಲ್ಲ!
ವೈಭವ್ ಅವರ ಸ್ಫೋಟಕ ಇನ್ನಿಂಗ್ಸ್ ಬಗ್ಗೆ ಮಾತನಾಡಿರುವ ದಿನೇಶ್ ಕಾರ್ತಿಕ್, ‘ಓ ದೇವರೇ, ನೀವು ಸ್ಕೋರ್‌ಕಾರ್ಡ್ ನೋಡಿದ್ದೀರಾ? ಕೇವಲ 53 ಎಸೆತಗಳಲ್ಲಿ ದ್ವಿಶತಕ! ಇದು ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
‘ವೈಭವ್ ಎದುರಿಸಿದ 53 ಎಸೆತಗಳಲ್ಲಿ 35 ಎಸೆತಗಳನ್ನು ಬೌಂಡರಿ ಅಥವಾ ಸಿಕ್ಸರ್‌ಗೆ ಅಟ್ಟಿದ್ದಾರೆ. ವಿಡಿಯೋ ಗೇಮ್‌ನಲ್ಲೂ ಈ ರೀತಿ ಆಡಲು ಸಾಧ್ಯವಿಲ್ಲ. ಯುಎಇ ಆಟಗಾರರ ಬಗ್ಗೆ ನನಗೆ ಕನಿಕರವಾಗುತ್ತಿದೆ. ಇಂತಹ ಪ್ರದರ್ಶನವನ್ನು ಹಿಂದೆಂದೂ ನೋಡಿಲ್ಲ, ಊಹಿಸಲೂ ಸಾಧ್ಯವಿಲ್ಲ’ ಎಂದು ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ.
ಸ್ಕೋರ್‌ಕಾರ್ಡ್ ನೋಡಿ ಇಷ್ಟೊಂದು ನಕ್ಕಿದ್ದು ಇದೇ ಮೊದಲು ಎಂದೂ ದಿನೇಶ್ ಕಾರ್ತಿಕ್ ಹೇಳಿದ್ದಾರೆ.ವೈಭವ್ ಬ್ಯಾಟ್‌ನಿಂದ ಸಿಕ್ಸರ್‌ಗಳ ಸುರಿಮಳೆ!ಯುಎಇ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ವೈಭವ್ ಸೂರ್ಯವಂಶಿ, ಒಂದರ ಹಿಂದೆ ಒಂದರಂತೆ ದಾಖಲೆಗಳನ್ನು ನಿರ್ಮಿಸಿದ್ದಾರೆ.

– 16 ಎಸೆತಗಳಲ್ಲಿ ಅರ್ಧಶತಕ
– 28 ಎಸೆತಗಳಲ್ಲಿ ಶತಕ
– 52 ಎಸೆತಗಳಲ್ಲಿ ದ್ವಿಶತಕ
– 53 ಎಸೆತಗಳಲ್ಲಿ 204 ರನ್
– 28 ಭರ್ಜರಿ ಸಿಕ್ಸರ್‌ಗಳು
– 7 ಬೌಂಡರಿಗಳು
– 28 ಎಸೆತಗಳಲ್ಲಿ ಶತಕ
– 52 ಎಸೆತಗಳಲ್ಲಿ ದ್ವಿಶತಕ
– 53 ಎಸೆತಗಳಲ್ಲಿ 204 ರನ್
– 28 ಭರ್ಜರಿ ಸಿಕ್ಸರ್‌ಗಳು
– 7 ಬೌಂಡರಿಗಳು
ವಿಶೇಷವೆಂದರೆ, ವೈಭವ್ ಗಳಿಸಿದ 204 ರನ್‌ಗಳಲ್ಲಿ 196 ರನ್‌ಗಳು ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳಿಂದಲೇ ಬಂದಿವೆ!
ವೈಭವ್ ಅವರ ಬ್ಯಾಟಿಂಗ್ ಅಬ್ಬರದಿಂದ ಭಾರತ ಎ ತಂಡ ಕೇವಲ 14.2 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
15ನೇ ವಯಸ್ಸಿನಲ್ಲೇ ವಿಶ್ವದಾಖಲೆಗಳನ್ನು ಪುಡಿಗಟ್ಟುತ್ತಿರುವ ವೈಭವ್ ಸೂರ್ಯವಂಶಿ ಮುಂದಿನ ದಿನಗಳಲ್ಲಿ ಇನ್ನೆಷ್ಟು ದಾಖಲೆಗಳನ್ನು ನಿರ್ಮಿಸಲಿದ್ದಾರೆ ಎಂಬ ಕುತೂಹಲ ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿದೆ.