**ಕ್ಯಾಪ್ಟನ್ಸಿಗಾಗಿ ಗಗನ್ ಸೀಕ್ರೆಟ್ ಬಿಚ್ಚಿಟ್ಟ ಗಾನವಿ! ‘ಇನ್ಮೇಲೆ ಆಟ ಶುರು’ ಎಂದ ಚಿನ್ನಪ್ಪ!**
**ಬಿಗ್ ಬಾಸ್ ಮನೆಯಲ್ಲಿ ಸೀಕ್ರೆಟ್ ಟಾಸ್ಕ್ನಿಂದ ಹೊಸ ಕಿಡಿ ಹೊತ್ತಿಕೊಂಡಿದೆ. ಕ್ಯಾಪ್ಟನ್ ಆಗುವ ಆಸೆಯಲ್ಲಿ ಗಗನ್ ಚಿನ್ನಪ್ಪ ಅವರ ವೈಯಕ್ತಿಕ ರಹಸ್ಯವನ್ನು ಗಾನವಿ ಬಯಲು ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಗಗನ್, ಗಾನವಿಗೆ ನೇರವಾಗಿಯೇ ಸವಾಲು ಹಾಕಿದ್ದಾರೆ.**
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಫಿನಾಲೆ ಹತ್ತಿರವಾಗುತ್ತಿದ್ದಂತೆ ಆಟದ ಕಾವು ಹೆಚ್ಚಾಗುತ್ತಿದೆ. ಕ್ಯಾಪ್ಟನ್ಸಿ ಗಿಟ್ಟಿಸಿಕೊಳ್ಳಲು ಸ್ಪರ್ಧಿಗಳು ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇದೀಗ ಬಿಗ್ ಬಾಸ್ ನೀಡಿರುವ ಸೀಕ್ರೆಟ್ ಟಾಸ್ಕ್ ಗಗನ್ ಮತ್ತು ಗಾನವಿ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
**ಬಿಗ್ ಬಾಸ್ ಮನೆಯಲ್ಲಿ ಸೀಕ್ರೆಟ್ ಆಟ!**
ಯಾರ ಬಳಿಯೂ ಹೇಳಿಕೊಳ್ಳದ ವೈಯಕ್ತಿಕ ರಹಸ್ಯವೊಂದನ್ನು ಹಂಚಿಕೊಳ್ಳಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಅವಕಾಶ ನೀಡಿದ್ದರು. ಅದರಂತೆ ಸ್ಪರ್ಧಿಗಳು ಸೀಕ್ರೆಟ್ ರೂಮ್ಗೆ ತೆರಳಿ ತಮ್ಮ ರಹಸ್ಯಗಳನ್ನು ರೆಕಾರ್ಡ್ ಮಾಡಿದ್ದರು. ಆದರೆ ಇದೇ ರಹಸ್ಯ ಕ್ಯಾಪ್ಟನ್ಸಿ ಟಾಸ್ಕ್ಗೆ ಬಳಕೆಯಾಗಲಿದೆ ಎಂಬ ಟ್ವಿಸ್ಟ್ ಎದುರಾಗಿದೆ.
**ಕ್ಯಾಪ್ಟನ್ಸಿಗಾಗಿ ಗಾನವಿ ದಿಟ್ಟ ನಿರ್ಧಾರ!**
ಕ್ಯಾಪ್ಟನ್ಸಿ ಓಟಕ್ಕೆ ನೇರವಾಗಿ ಆಯ್ಕೆಯಾಗಬೇಕಾದರೆ ಸಹ ಸ್ಪರ್ಧಿಯೊಬ್ಬರ ರಹಸ್ಯವನ್ನು ಇಡೀ ಮನೆಯ ಮುಂದೆ ಬಹಿರಂಗಪಡಿಸಬೇಕಿತ್ತು. ಈ ಅವಕಾಶವನ್ನು ಬಳಸಿಕೊಂಡ ಗಾನವಿ, ಗಗನ್ ಚಿನ್ನಪ್ಪ ಅವರ ಸೀಕ್ರೆಟ್ ಎಕ್ಸ್ಪೋಸ್ ಮಾಡುವುದಾಗಿ ಹೇಳಿ ಬಜರ್ ಒತ್ತಿದ್ದಾರೆ.
ಗಾನವಿ ಅವರ ಈ ನಿರ್ಧಾರ ಗಗನ್ ಚಿನ್ನಪ್ಪ ಅವರ ಕೋಪಕ್ಕೆ ಕಾರಣವಾಗಿದೆ.
**‘ಎಲ್ಲಿ ಇಡಬೇಕು ಅಲ್ಲಿ ಇಡ್ತೀನಿ ನೋಡು!’**
ತಮ್ಮ ವೈಯಕ್ತಿಕ ರಹಸ್ಯವನ್ನು ಬಹಿರಂಗಪಡಿಸಿದ್ದಕ್ಕೆ ಗಗನ್ ಕೆಂಡಾಮಂಡಲವಾಗಿದ್ದಾರೆ.
**‘ಎಲ್ಲಿ ಇಡಬೇಕು ಅಲ್ಲಿ ಇಡ್ತೀನಿ ನೋಡು, ಇನ್ಮೇಲಿಂದ ಗೇಮ್ ಇವಾಗ ಸ್ಟಾರ್ಟ್, ತಗೋ’** ಎಂದು ಗಾನವಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
**ಗಗನ್ ಮುಂದಿನ ಆಟ ಹೇಗಿರಲಿದೆ?**
ಅಷ್ಟಕ್ಕೂ ಗಾನವಿ ಬಯಲು ಮಾಡಿದ ಗಗನ್ ಅವರ ಆ ರಹಸ್ಯವೇನು? ಕ್ಯಾಪ್ಟನ್ಸಿಗಾಗಿ ಗಾನವಿ ತೆಗೆದುಕೊಂಡ ನಿರ್ಧಾರ ಅವರಿಗೇ ಮುಳುವಾಗುತ್ತಾ? ಗಗನ್ ಮುಂದಿನ ಆಟದಲ್ಲಿ ಗಾನವಿಯನ್ನು ಟಾರ್ಗೆಟ್ ಮಾಡ್ತಾರಾ?
ಈ ಎಲ್ಲ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗುವ ನಿರೀಕ್ಷೆಯಿದೆ.