ಗಂಡನನ್ನೇ ‘ನೀನು ಯಾರು?’ ಅಂತ ಕೇಳಿದ ವಿದ್ಯಾ! ‘ಮುದ್ದು ಸೊಸೆ’ಗೆ ಗೌತಮಿ ಜಾದವ್ ಎಂಟ್ರಿ; ಕಥೆಗೆ ಬಿಗ್ ಟ್ವಿಸ್ಟ್!
ಮದುವೆ, ಮಗು, ಗಂಡ ಎಲ್ಲವನ್ನೂ ಮರೆತ ವಿದ್ಯಾ! ಭದ್ರನಿಗೆ ಎದುರಾಯ್ತು ದೊಡ್ಡ ಆಘಾತ! ಡಾಕ್ಟರ್ ಆಗಿ ಎಂಟ್ರಿ ಕೊಟ್ಟ ಗೌತಮಿ ಜಾದವ್ ಕಥೆಯ ದಿಕ್ಕನ್ನೇ ಬದಲಿಸುತ್ತಾರಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ಇದೀಗ ರೋಚಕ ತಿರುವು ಎದುರಾಗಿದೆ. ಒಂದರ ಮೇಲೊಂದು ಟ್ವಿಸ್ಟ್ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿರುವ ಧಾರಾವಾಹಿಗೆ ಇದೀಗ ಜನಪ್ರಿಯ ನಟಿ ಗೌತಮಿ ಜಾದವ್ ಎಂಟ್ರಿ ಕೊಟ್ಟಿದ್ದಾರೆ. ಅವರ ಆಗಮನದೊಂದಿಗೆ ಕಥೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಭದ್ರನ ಎರಡನೇ ಮದುವೆ ಹೊತ್ತಲ್ಲೇ ಬಿಗ್ ಟ್ವಿಸ್ಟ್!ಇಷ್ಟು ದಿನ ವಿದ್ಯಾ ಮತ್ತು ಭದ್ರನ ನಡುವಿನ ಜಗಳ, ಮುನಿಸು, ದೂರವಾಗುವುದು, ಮತ್ತೆ ಒಂದಾಗುವುದನ್ನು ನೋಡಿದ್ದ ಪ್ರೇಕ್ಷಕರಿಗೆ ಇದೀಗ ಹೊಸ ತಿರುವು ಎದುರಾಗಿದೆ. ವಿದ್ಯಾ ಗರ್ಭಿಣಿಯಾಗಿದ್ದಾಗಲೇ ವಿಚ್ಛೇದನ ನೀಡಿದ್ದ ಭದ್ರ ಮತ್ತೊಂದು ಮದುವೆಗೆ ಸಿದ್ಧವಾಗಿದ್ದ.
ಇನ್ನೇನು ಮದುವೆ ನಡೆಯಬೇಕು ಎನ್ನುವಷ್ಟರಲ್ಲಿ ವಿದ್ಯಾಗೆ ಅಪಘಾತವಾಗಿರುವ ಸುದ್ದಿ ಭದ್ರನಿಗೆ ತಿಳಿದಿದೆ. ಆತಂಕದಿಂದ ಆಸ್ಪತ್ರೆಗೆ ಓಡೋಡಿ ಬಂದ ಭದ್ರನಿಗೆ ಅಲ್ಲಿ ಕಾದಿದ್ದು ದೊಡ್ಡ ಆಘಾತ!
ಗಂಡನನ್ನೇ ಗುರುತು ಹಿಡಿಯದ ವಿದ್ಯಾ!
ಇನ್ನೇನು ಮದುವೆ ನಡೆಯಬೇಕು ಎನ್ನುವಷ್ಟರಲ್ಲಿ ವಿದ್ಯಾಗೆ ಅಪಘಾತವಾಗಿರುವ ಸುದ್ದಿ ಭದ್ರನಿಗೆ ತಿಳಿದಿದೆ. ಆತಂಕದಿಂದ ಆಸ್ಪತ್ರೆಗೆ ಓಡೋಡಿ ಬಂದ ಭದ್ರನಿಗೆ ಅಲ್ಲಿ ಕಾದಿದ್ದು ದೊಡ್ಡ ಆಘಾತ!
ಗಂಡನನ್ನೇ ಗುರುತು ಹಿಡಿಯದ ವಿದ್ಯಾ!
ಅಪಘಾತದಿಂದ ನೆನಪು ಕಳೆದುಕೊಂಡಿರುವ ವಿದ್ಯಾ, ತನ್ನ ಎದುರಿಗೆ ನಿಂತಿದ್ದ ಭದ್ರನನ್ನೇ ‘ನೀನು ಯಾರು?’ ಎಂದು ಪ್ರಶ್ನಿಸಿದ್ದಾಳೆ. ಮದುವೆ, ಮಗು, ದಾಂಪತ್ಯ ಜೀವನದ ನೆನಪುಗಳು ಸೇರಿದಂತೆ ಎಲ್ಲವನ್ನೂ ಮರೆತಿದ್ದಾಳೆ. ವಿದ್ಯಾಳ ಈ ಸ್ಥಿತಿ ಕಂಡು ಭದ್ರ ಮಾತ್ರವಲ್ಲ, ಇಡೀ ಕುಟುಂಬವೇ ಆಘಾತಕ್ಕೊಳಗಾಗಿದೆ.ಡಾಕ್ಟರ್ ಆಗಿ ಗೌತಮಿ ಜಾದವ್ ಎಂಟ್ರಿ!
‘ಸತ್ಯ’ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಗೌತಮಿ ಜಾದವ್, ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಬಳಿಕ ಯಾವುದೇ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರದ ಗೌತಮಿ ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ.
‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ಮನೋವಿಜ್ಞಾನಿಯ ಪಾತ್ರದಲ್ಲಿ ಗೌತಮಿ ಕಾಣಿಸಿಕೊಂಡಿದ್ದು, ನೆನಪು ಕಳೆದುಕೊಂಡಿರುವ ವಿದ್ಯಾಗೆ ಚಿಕಿತ್ಸೆ ನೀಡಲಿದ್ದಾರೆ. ಈಗಾಗಲೇ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೋ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ವಿದ್ಯಾಳ ನೆನಪು ಮರಳಿ ಬರುತ್ತಾ?

ಗೌತಮಿ ನೀಡುವ ಚಿಕಿತ್ಸೆಯಿಂದ ವಿದ್ಯಾಗೆ ಹಳೆಯ ನೆನಪುಗಳು ಮರುಕಳಿಸುತ್ತವಾ? ಭದ್ರನ ಎರಡನೇ ಮದುವೆಯ ಕಥೆ ಏನಾಗುತ್ತೆ? ವಿದ್ಯಾ ಮತ್ತೆ ಭದ್ರನನ್ನು ಒಪ್ಪಿಕೊಳ್ಳುತ್ತಾಳಾ? ಗೌತಮಿ ಎಂಟ್ರಿಯಿಂದ ಭದ್ರ-ವಿದ್ಯಾ ಬದುಕಿನಲ್ಲಿ ಮತ್ತೊಂದು ಹೊಸ ಅಧ್ಯಾಯ ಆರಂಭವಾಗುತ್ತಾ?ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಬೇಕಿದೆ.