ರೇಸಿಂಗ್ ಟ್ರ್ಯಾಕ್ನಲ್ಲಿ ಕಿಚ್ಚನ ಹೊಸ ಅವತಾರ! ಸೌರವ್ ಗಂಗೂಲಿ ಜೊತೆ ಸುದೀಪ್ ಮುಖಾಮುಖಿ; ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ!
ಸಿನಿಮಾದಲ್ಲಿ ಆ್ಯಕ್ಷನ್, ಬಿಗ್ಬಾಸ್ನಲ್ಲಿ ನಿರೂಪಣೆ, ಕ್ರಿಕೆಟ್ ಮೈದಾನದಲ್ಲಿ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನಗೆದ್ದಿರುವ ಕಿಚ್ಚ ಸುದೀಪ್ ಇದೀಗ ರೇಸಿಂಗ್ ಟ್ರ್ಯಾಕ್ನಲ್ಲೂ ಮಿಂಚುತ್ತಿದ್ದಾರೆ. ಫಾರ್ಮುಲಾ ರೇಸಿಂಗ್ ಕಾರಿನ ಸ್ಟೀರಿಂಗ್ ಹಿಡಿದು ವೇಗದ ಸವಾರಿ ನಡೆಸಿರುವ ಕಿಚ್ಚ, ಇದೀಗ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನೂ ಭೇಟಿಯಾಗಿದ್ದಾರೆ. ಅಷ್ಟಕ್ಕೂ ಈ ಇಬ್ಬರು ದಿಗ್ಗಜರ ಭೇಟಿಯ ಹಿಂದಿನ ವಿಶೇಷತೆ ಏನು ಗೊತ್ತಾ?
ಒಂದೇ ವೇದಿಕೆಯಲ್ಲಿ ಸಿನಿಮಾ ಹಾಗೂ ಕ್ರಿಕೆಟ್ ಲೋಕದ ದಿಗ್ಗಜರು!ಇಂಡಿಯನ್ ರೇಸಿಂಗ್ ಲೀಗ್ನಲ್ಲಿ ಕಿಚ್ಚ ಸುದೀಪ್ ಹಾಗೂ ಸೌರವ್ ಗಂಗೂಲಿ ಎರಡು ವಿಭಿನ್ನ ತಂಡಗಳ ಮಾಲೀಕರಾಗಿದ್ದಾರೆ.
ಸುದೀಪ್ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಮಾಲೀಕರಾಗಿದ್ದರೆ, ಸೌರವ್ ಗಂಗೂಲಿ ‘ಕೋಲ್ಕತ್ತಾ ರಾಯಲ್ ಟೈಗರ್ಸ್’ ತಂಡದ ಮಾಲೀಕರಾಗಿದ್ದಾರೆ. ಪ್ರತಿಷ್ಠಿತ ರೇಸಿಂಗ್ ಸ್ಪರ್ಧೆಗೂ ಮುನ್ನ ಇಬ್ಬರೂ ಭೇಟಿಯಾಗಿದ್ದು, ಈ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ರೇಸಿಂಗ್ ಕಾಸ್ಟ್ಯೂಮ್ನಲ್ಲಿ ಮಿಂಚಿದ ಕಿಚ್ಚ–ಪ್ರಿಯಾ ಜೋಡಿ!ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಸಹ ಮಾಲೀಕರಾಗಿರುವ ಪ್ರಿಯಾ ಸುದೀಪ್ ಕೂಡ ಈ ವಿಶೇಷ ಭೇಟಿಯಲ್ಲಿ ಭಾಗಿಯಾಗಿದ್ದರು.
ಸುದೀಪ್ ಹಾಗೂ ಪ್ರಿಯಾ ಇಬ್ಬರೂ ಸ್ಟೈಲಿಶ್ ರೇಸಿಂಗ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಕ್ರಿಕೆಟ್ ಲೋಕದ ‘ದಾದಾ’ ಸೌರವ್ ಗಂಗೂಲಿ ಹಾಗೂ ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಫಾರ್ಮುಲಾ ರೇಸಿಂಗ್ ಕಾರಿನ ಸ್ಟೀರಿಂಗ್ ಹಿಡಿದ ಕಿಚ್ಚ!ಕಿಚ್ಚ ಸುದೀಪ್ ಕೇವಲ ರೇಸಿಂಗ್ ತಂಡದ ಮಾಲೀಕರಾಗಿ ಉಳಿದಿಲ್ಲ. ಸ್ವತಃ ರೇಸಿಂಗ್ ಟ್ರ್ಯಾಕ್ಗೆ ಇಳಿದು ಸಿಂಗಲ್ ಸೀಟರ್ ಫಾರ್ಮುಲಾ ರೇಸಿಂಗ್ ಕಾರು ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.
ಬಿಳಿ ಬಣ್ಣದ ಹೆಲ್ಮೆಟ್ ಹಾಗೂ ರೇಸಿಂಗ್ ಸುರಕ್ಷತಾ ಸಾಧನಗಳನ್ನು ಧರಿಸಿ ಕಾರಿನ ಕಾಕ್ಪಿಟ್ನಲ್ಲಿ ಕುಳಿತಿರುವ ಸುದೀಪ್ ಅವರ ಫೋಟೋಗಳು ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿವೆ.
ಕಾರು ಚಲಾಯಿಸುವ ಮುನ್ನ ತಜ್ಞರಿಂದ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದ ಸುದೀಪ್, ಬಳಿಕ ರೇಸಿಂಗ್ ಟ್ರ್ಯಾಕ್ನಲ್ಲಿ ವೇಗದ ಸವಾರಿಯ ಅನುಭವ ಪಡೆದಿದ್ದಾರೆ.
ಇದೊಂದು ತಮ್ಮ ಜೀವನದ ಅಪರೂಪದ ಹಾಗೂ ಮರೆಯಲಾಗದ ಡ್ರೈವಿಂಗ್ ಅನುಭವ ಎಂದು ಕಿಚ್ಚ ಸಂತಸ ಹಂಚಿಕೊಂಡಿದ್ದಾರೆ.ಕಿಚ್ಚನ ತಂಡಕ್ಕೂ ಗಂಗೂಲಿ ತಂಡಕ್ಕೂ ರೋಚಕ ಪೈಪೋಟಿ!

ಸಿನಿಮಾ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸುದೀಪ್ ಹಾಗೂ ಕ್ರಿಕೆಟ್ ಲೋಕದಲ್ಲಿ ಸಾಧನೆ ಮಾಡಿರುವ ಸೌರವ್ ಗಂಗೂಲಿ ಇದೀಗ ಮೋಟಾರ್ಸ್ಪೋರ್ಟ್ನಲ್ಲಿ ತಂಡಗಳ ಮಾಲೀಕರಾಗಿ ಗಮನ ಸೆಳೆಯುತ್ತಿದ್ದಾರೆ.
ಇಂಡಿಯನ್ ರೇಸಿಂಗ್ ಲೀಗ್ನಲ್ಲಿ ಈ ಇಬ್ಬರ ತಂಡಗಳ ಪ್ರದರ್ಶನ ಹೇಗಿರಲಿದೆ? ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಗೆಲುವಿನ ನಗೆ ಬೀರಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಒಟ್ಟಿನಲ್ಲಿ, ಸಿನಿಮಾ, ಬಿಗ್ಬಾಸ್ ಹಾಗೂ ಕ್ರಿಕೆಟ್ ನಡುವೆಯೂ ಮೋಟಾರ್ಸ್ಪೋರ್ಟ್ನತ್ತ ಆಸಕ್ತಿ ತೋರಿಸುತ್ತಿರುವ ಕಿಚ್ಚ ಸುದೀಪ್, ಇದೀಗ ಅಭಿಮಾನಿಗಳಿಗೆ ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.