ಮದ್ಯದಂಗಡಿ ಮುಂದೆ ವೈದ್ಯರ ತಂಡ! ಎಣ್ಣೆ ಖರೀದಿಸಲು ಬಂದವರಿಗೆ ಆರೋಗ್ಯ ತಪಾಸಣೆ; ಸರ್ಕಾರದ ವಿನೂತನ ಅಭಿಯಾನ!
ಮದ್ಯ ಖರೀದಿಸಲು ವೈನ್ ಶಾಪ್ಗೆ ಹೋದರೆ ಅಲ್ಲಿ ವೈದ್ಯರೇ ಎದುರಾದರೆ ಹೇಗಿರುತ್ತೆ? ಮದ್ಯ ಖರೀದಿಸಲು ಬಂದವರಿಗೆ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ ಹಾಗೂ ಕೌನ್ಸೆಲಿಂಗ್ ನಡೆಸಿದರೆ ಹೇಗಿರುತ್ತೆ? ಅಚ್ಚರಿ ಎನಿಸಿದರೂ ಮಧ್ಯಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಇಂತಹದ್ದೊಂದು ವಿನೂತನ ಅಭಿಯಾನ ಆರಂಭವಾಗಿದೆ.
ಮದ್ಯಪಾನದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ಅತಿಯಾದ ಮದ್ಯ ಸೇವನೆಯಿಂದ ಅಪಾಯದಲ್ಲಿರುವವರನ್ನು ಗುರುತಿಸಲು ಜಿಲ್ಲಾಡಳಿತ ಈ ವಿಶೇಷ ಕ್ರಮಕ್ಕೆ ಮುಂದಾಗಿದೆ.
ಮದ್ಯದಂಗಡಿ ಎದುರೇ ವೈದ್ಯರ ತಂಡ!
ಮದ್ಯಪಾನದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ಅತಿಯಾದ ಮದ್ಯ ಸೇವನೆಯಿಂದ ಅಪಾಯದಲ್ಲಿರುವವರನ್ನು ಗುರುತಿಸಲು ಜಿಲ್ಲಾಡಳಿತ ಈ ವಿಶೇಷ ಕ್ರಮಕ್ಕೆ ಮುಂದಾಗಿದೆ.
ಮದ್ಯದಂಗಡಿ ಎದುರೇ ವೈದ್ಯರ ತಂಡ!
ಮಧ್ಯಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಮದ್ಯದಂಗಡಿಗಳ ಹೊರಗೆ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ. ಮದ್ಯ ಖರೀದಿಸಲು ಬರುವವರ ಆರೋಗ್ಯ ತಪಾಸಣೆ ನಡೆಸುವುದರ ಜೊತೆಗೆ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ.
ಅತಿಯಾದ ಮದ್ಯ ಸೇವನೆಯಿಂದ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳು, ಆರೋಗ್ಯ ಸಮಸ್ಯೆಗಳು ಹಾಗೂ ಮದ್ಯಪಾನವನ್ನು ಕಡಿಮೆ ಮಾಡಿಕೊಳ್ಳುವ ಕುರಿತು ವೈದ್ಯರು ಕೌನ್ಸೆಲಿಂಗ್ ನೀಡುತ್ತಿದ್ದಾರೆ.
ನಿತ್ಯ ಮದ್ಯ ಖರೀದಿಸುವವರ ಪಟ್ಟಿ ಸಿದ್ಧಪಡಿಸಲು ಸೂಚನೆ!
ಅತಿಯಾದ ಮದ್ಯ ಸೇವನೆಯಿಂದ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳು, ಆರೋಗ್ಯ ಸಮಸ್ಯೆಗಳು ಹಾಗೂ ಮದ್ಯಪಾನವನ್ನು ಕಡಿಮೆ ಮಾಡಿಕೊಳ್ಳುವ ಕುರಿತು ವೈದ್ಯರು ಕೌನ್ಸೆಲಿಂಗ್ ನೀಡುತ್ತಿದ್ದಾರೆ.
ನಿತ್ಯ ಮದ್ಯ ಖರೀದಿಸುವವರ ಪಟ್ಟಿ ಸಿದ್ಧಪಡಿಸಲು ಸೂಚನೆ!
ಮಧ್ಯಪ್ರದೇಶದ ಸಾಗರ್ ಜಿಲ್ಲಾಡಳಿತ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಪ್ರತಿನಿತ್ಯ ಮದ್ಯ ಖರೀದಿಸಲು ಬರುವ ಗ್ರಾಹಕರನ್ನು ಗುರುತಿಸಿ, ಅವರ ಪಟ್ಟಿಯನ್ನು ಸಿದ್ಧಪಡಿಸುವಂತೆ ಮದ್ಯದಂಗಡಿ ಮಾಲೀಕರಿಗೆ ಸೂಚಿಸಿದೆ.
ಅಂಗಡಿ ತೆರೆಯುವ ಮುನ್ನವೇ ಬಂದು ಕಾಯುವವರು ಹಾಗೂ ಪದೇ ಪದೇ ಮದ್ಯ ಖರೀದಿಸುವವರನ್ನು ಗುರುತಿಸಿ, ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವುದು ಈ ಕ್ರಮದ ಉದ್ದೇಶವಾಗಿದೆ.
ಅಷ್ಟಕ್ಕೂ ಇಂತಹ ನಿರ್ಧಾರ ಕೈಗೊಂಡಿದ್ದೇಕೆ?
ಅಂಗಡಿ ತೆರೆಯುವ ಮುನ್ನವೇ ಬಂದು ಕಾಯುವವರು ಹಾಗೂ ಪದೇ ಪದೇ ಮದ್ಯ ಖರೀದಿಸುವವರನ್ನು ಗುರುತಿಸಿ, ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವುದು ಈ ಕ್ರಮದ ಉದ್ದೇಶವಾಗಿದೆ.
ಅಷ್ಟಕ್ಕೂ ಇಂತಹ ನಿರ್ಧಾರ ಕೈಗೊಂಡಿದ್ದೇಕೆ?
ಸಾಗರ್ ಜಿಲ್ಲೆಯಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ವಿಷಕಾರಿ ಮದ್ಯ ಸೇವನೆಯಿಂದ ಸುಮಾರು 20 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಸಾವುಗಳ ಹಿನ್ನೆಲೆಯಲ್ಲಿ ಆಡಳಿತವು ಈ ವಿಶೇಷ ಆರೋಗ್ಯ ಅಭಿಯಾನವನ್ನು ಆರಂಭಿಸಿದೆ.
ಅತಿಯಾದ ಮದ್ಯ ಸೇವನೆಯಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಸೂಕ್ತ ಸಲಹೆ ನೀಡುವ ಮೂಲಕ ಜೀವಹಾನಿಯನ್ನು ತಡೆಯುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಜಿಲ್ಲಾಧಿಕಾರಿ ಹೇಳಿದ್ದೇನು?
ಅತಿಯಾದ ಮದ್ಯ ಸೇವನೆಯಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಸೂಕ್ತ ಸಲಹೆ ನೀಡುವ ಮೂಲಕ ಜೀವಹಾನಿಯನ್ನು ತಡೆಯುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಜಿಲ್ಲಾಧಿಕಾರಿ ಹೇಳಿದ್ದೇನು?
ದೀರ್ಘಕಾಲದಿಂದ ಹಾಗೂ ಅತಿಯಾಗಿ ಮದ್ಯ ಸೇವಿಸುತ್ತಿರುವವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಈ ಅಭಿಯಾನದ ಉದ್ದೇಶ ಎಂದು ಸಾಗರ್ ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಬೆಳಗ್ಗೆಯಿಂದ ಸಂಜೆಯವರೆಗೂ ಮದ್ಯ ಸೇವಿಸುವವರು, ಸರಿಯಾಗಿ ಆಹಾರ ಸೇವಿಸದವರು ಹಾಗೂ ಈಗಾಗಲೇ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಹೆಚ್ಚಿನ ಅಪಾಯಕ್ಕೆ ಒಳಗಾಗಬಹುದು. ಇಂತಹವರನ್ನು ಗುರುತಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಕರ್ನಾಟಕದಲ್ಲೂ ಇಂತಹ ಅಭಿಯಾನ ಆರಂಭವಾಗುತ್ತಾ?ಸದ್ಯ ಈ ವಿಶೇಷ ಅಭಿಯಾನ ಮಧ್ಯಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಮಾತ್ರ ನಡೆಯುತ್ತಿದೆ. ಕರ್ನಾಟಕದಲ್ಲಿ ಇಂತಹ ಕ್ರಮ ಜಾರಿಗೊಳಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಮದ್ಯದಂಗಡಿಗಳ ಬಳಿಯೇ ಆರೋಗ್ಯ ತಪಾಸಣೆ ನಡೆಸುವ ಈ ವಿನೂತನ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ? ಅತಿಯಾದ ಮದ್ಯ ಸೇವನೆಯನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಲಿದೆಯೇ? ಇತರ ರಾಜ್ಯಗಳೂ ಇದೇ ಮಾದರಿಯನ್ನು ಅನುಸರಿಸಲಿವೆಯೇ ಎಂಬ ಕುತೂಹಲ ಮೂಡಿದೆ.