*ಸಣ್ಣ ಜಗಳಕ್ಕೆ ಇಬ್ಬರು ಪತ್ನಿಯರ ಜೀವವನ್ನೇ ತೆಗೆದ ಸಹೋದರರು!ಆಂಬ್ಯುಲೆನ್ಸ್ನಲ್ಲಿ ಶವ ಸಾಗಿಸಿ ಕಾಡಿನಲ್ಲಿ ಹೂತರು!**
**ಇಬ್ಬರು ಮಹಿಳೆಯರ ನಡುವಿನ ಮನಸ್ತಾಪಕ್ಕೆ ಭೀಕರ ಅಂತ್ಯ ಸಿಕ್ಕಿದೆ. ತಮ್ಮ ಪತ್ನಿಯರನ್ನೇ ಹತ್ಯೆ ಮಾಡಿದ ಆರೋಪದ ಮೇಲೆ ಇಬ್ಬರು ಸಹೋದರರು ಹಾಗೂ ಅವರ ತಂದೆ, ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ನಲ್ಲಿ ನಡೆದ ಈ ಘಟನೆ ಬೆಚ್ಚಿಬೀಳಿಸಿದೆ.**
ಜಾರ್ಖಂಡ್, ನವೆಂಬರ್ 27: ಗಂಡ-ಹೆಂಡತಿ ನಡುವೆ, ಕುಟುಂಬದ ಸದಸ್ಯರ ನಡುವೆ ಸಣ್ಣಪುಟ್ಟ ಜಗಳಗಳು ನಡೆಯುವುದು ಸಹಜ. ಆದರೆ ಇಲ್ಲೊಂದು ಕುಟುಂಬದಲ್ಲಿ ನಡೆದ ಮನಸ್ತಾಪ ಇಬ್ಬರು ಮಹಿಳೆಯರ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಜಾರ್ಖಂಡ್ನ ಗುಮ್ಲಾ ಜಿಲ್ಲೆಯಲ್ಲಿ ಇಬ್ಬರು ಸಹೋದರರು ತಮ್ಮ ಪತ್ನಿಯರನ್ನೇ ಹತ್ಯೆ ಮಾಡಿ, ಮೃತದೇಹಗಳನ್ನು ಕಾಡಿನಲ್ಲಿ ಹೂತುಹಾಕಿರುವ ಆರೋಪ ಕೇಳಿಬಂದಿದೆ.
**ಒಂದೇ ಕುಟುಂಬದ ಇಬ್ಬರು ಸೊಸೆಯರ ಹತ್ಯೆ!**ಶಿವಶಂಕರ್ ಸಾಹು ಮತ್ತು ನವೀನ್ ಸಾಹು ಎಂಬ ಸಹೋದರರ ವಿರುದ್ಧ ಹತ್ಯೆ ಆರೋಪ ಕೇಳಿಬಂದಿದೆ. ಮಿನಿ ಪ್ರಿಯಾ (28) ಹಾಗೂ ರಾಧಿಕಾ ಕುಮಾರಿ (20) ಮೃತ ದುರ್ದೈವಿಗಳು.
ಪೊಲೀಸರ ಮಾಹಿತಿ ಪ್ರಕಾರ, ಇಬ್ಬರು ಮಹಿಳೆಯರ ನಡುವೆ ಬಹಳ ದಿನಗಳಿಂದ ಮನಸ್ತಾಪವಿತ್ತು. ಇದೇ ವಿಚಾರಕ್ಕೆ ಸಹೋದರರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ, ಹತ್ಯೆ ನಡೆಯುವುದಕ್ಕೂ ಎರಡು ದಿನಗಳ ಹಿಂದಷ್ಟೇ ಇಬ್ಬರು ಮಹಿಳೆಯರು ಪರಸ್ಪರ ರಾಜಿ ಮಾಡಿಕೊಂಡಿದ್ದರು.
ಹೀಗಿದ್ದರೂ ಈ ಭೀಕರ ಕೃತ್ಯ ನಡೆದಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ.**ಜೀವ ಉಳಿಸುವ ಆಂಬ್ಯುಲೆನ್ಸ್ನಲ್ಲೇ ಶವ ಸಾಗಣೆ!**
ಆರೋಪಿ ಶಿವಶಂಕರ್ ಸಾಹು ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸೋಮವಾರ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಿದ ಬಳಿಕ ಮೃತದೇಹಗಳನ್ನು ಸಾಗಿಸಲು ಆಂಬ್ಯುಲೆನ್ಸ್ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಮ್ಲಾ ಜಿಲ್ಲೆಯಿಂದ ನೆರೆಯ ಸಿಮ್ಡೆಗಾ ಜಿಲ್ಲೆಗೆ ಮೃತದೇಹಗಳನ್ನು ಸಾಗಿಸಿ, ಅಲ್ಲಿನ ಕಾಡಿನಲ್ಲಿ ಹೂತುಹಾಕಲಾಗಿದೆ ಎನ್ನಲಾಗಿದೆ.**ಬೆಳಗ್ಗೆ ಕುಟುಂಬದವರ ಜೊತೆ ಮಾತನಾಡಿದ್ದ ಮಹಿಳೆಯರು!**
ಸೋಮವಾರ ಬೆಳಗ್ಗೆ ಸುಮಾರು 9 ಗಂಟೆಗೆ ಇಬ್ಬರು ಮಹಿಳೆಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದರು. ಆ ಸಂದರ್ಭದಲ್ಲಿ ಯಾವುದೇ ಆತಂಕಕಾರಿ ಪರಿಸ್ಥಿತಿ ಕಂಡುಬಂದಿರಲಿಲ್ಲ ಎಂದು ಗುಮ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಸ್ ಬಿನ್ ಜಮಾ ತಿಳಿಸಿದ್ದಾರೆ.
ಆದರೆ ಬಳಿಕ ಇಬ್ಬರೂ ಕಾಣೆಯಾಗಿದ್ದು ಕುಟುಂಬದವರಲ್ಲಿ ಆತಂಕ ಮೂಡಿಸಿತ್ತು. **ಪತ್ನಿಯರು ಮನೆ ಬಿಟ್ಟು ಹೋಗಿದ್ದಾರೆ ಎಂದಿದ್ದ ಸಹೋದರರು!**
ಮಹಿಳೆಯರು ಕಾಣೆಯಾಗಿರುವ ಕುರಿತು ಪೊಲೀಸರು ವಿಚಾರಣೆ ಆರಂಭಿಸಿದ್ದರು. ಈ ವೇಳೆ ತಮ್ಮ ಪತ್ನಿಯರು ಯಾರಿಗೂ ಹೇಳದೆ ಮನೆಯಿಂದ ಹೊರಟು ಹೋಗಿದ್ದಾರೆ ಎಂದು ಸಹೋದರರು ಹೇಳಿದ್ದರು ಎನ್ನಲಾಗಿದೆ.
ಆದರೆ ಪೊಲೀಸರ ನಿರಂತರ ವಿಚಾರಣೆ ವೇಳೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇಬ್ಬರೂ ತಮ್ಮ ಪತ್ನಿಯರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. **ಕಾಡಿನಲ್ಲಿ ಇಬ್ಬರು ಮಹಿಳೆಯರ ಮೃತದೇಹ ಪತ್ತೆ!**
ತನಿಖೆ ಮುಂದುವರಿಸಿದ ಪೊಲೀಸರು ಸಿಮ್ಡೆಗಾ ಜಿಲ್ಲೆಯ ಕಾಡಿನಲ್ಲಿ ಹೂತುಹಾಕಲಾಗಿದ್ದ ಇಬ್ಬರು ಮಹಿಳೆಯರ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಹತ್ಯೆಗೆ ಬಳಸಲಾಗಿದೆ ಎನ್ನಲಾದ ಕೊಡಲಿ ಹಾಗೂ ಮೃತದೇಹಗಳನ್ನು ಸಾಗಿಸಲು ಬಳಸಿದ್ದ ಆಂಬ್ಯುಲೆನ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. **ತಂದೆ, ತಾಯಿ ಸೇರಿದಂತೆ ನಾಲ್ವರ ಬಂಧನ!**
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರ್ ಸಾಹು, ನವೀನ್ ಸಾಹು ಹಾಗೂ ಅವರ ತಂದೆ ಸಮೇಶ್ವರ ಸಾಹು ಮತ್ತು ತಾಯಿ ತಿಲೇಶ್ವರಿ ದೇವಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯಲ್ಲಿ ತಂದೆ-ತಾಯಿಯ ಪಾತ್ರವೇನು? ಇಬ್ಬರು ಮಹಿಳೆಯರು ರಾಜಿ ಮಾಡಿಕೊಂಡಿದ್ದರೂ ಹತ್ಯೆ ನಡೆದಿದ್ದು ಏಕೆ? ಕುಟುಂಬದ ಮನಸ್ತಾಪವಷ್ಟೇ ಈ ಕೃತ್ಯಕ್ಕೆ ಕಾರಣವೇ ಅಥವಾ ಇದರ ಹಿಂದೆ ಬೇರೆ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೇಲ್ನೋಟಕ್ಕೆ ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದ್ದರೂ, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ನಿಖರ ಕಾರಣ ಬಹಿರಂಗವಾಗಬೇಕಿದೆ.