ಜೈಲಿನಲ್ಲಿರೋ ದರ್ಶನ್​ ಭೇಟಿಗೆ ಹಿಂದೇಟು ಹಾಕಿದ್ರಾ ಚಿಕ್ಕಣ್ಣ? ಕಾಮಿಡಿ ಸ್ಟಾರ್ ಶಾಕಿಂಗ್ ಹೇಳಿಕೆ!!

ಜೈಲಿನಲ್ಲಿರೋ ದರ್ಶನ್​ ಭೇಟಿಗೆ ಹಿಂದೇಟು ಹಾಕಿದ್ರಾ ಚಿಕ್ಕಣ್ಣ? ಕಾಮಿಡಿ ಸ್ಟಾರ್ ಶಾಕಿಂಗ್ ಹೇಳಿಕೆ!!

ಇದೇ ನವೆಂಬರ್ 27ರಂದು ಲಕ್ಷ್ಮೀಪುತ್ರ ಸಿನಿಮಾ ರಿಲೀಸ್ ಹಿನ್ನಲೆ ಹೊಸಪೇಟೆಗೆ ಆಗಮಿಸಿ ಪುನೀತ್ ಅವರ​ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದ ನಟ ಚಿಕ್ಕಣ್ಣ, ದರ್ಶನ್ ಭೇಟಿ​​ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಬೇಲ್ ಪಡೆದು ಹೊರಬರೋಕೆ ಆಗದೆ ಪರದಾಡ್ತಿದ್ದಾರೆ. ದರ್ಶನ್​​ ಕೇಸ್​​ ಸಂಬಂಧ ಕೋರ್ಟ್​​ನಲ್ಲಿ ವಿಚಾರಣೆ ನಡೆದಿದ್ದು, ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಪ್ರಮುಖ ಸಾಕ್ಷಿಗಳಿಗೆ ನೋಟಿಸ್​ ನೀಡಿ ವಿಚಾರಣೆ ಕರೆಯಲಾಗ್ತಿದೆ. ಈ ಸಂಬಂಧ ನಟ ಚಿಕ್ಕಣ್ಣ ಅವರು ಕೂಡ ಸಾಕ್ಷಿ ನುಡಿಯಲು ಕಟಕಟೆಗೆ ಹಾಜರಾಗಿದ್ರು. ಆದ್ರೆ ಸಾಕ್ಷಿ ನುಡಿಯಲು ತಡವರಿಸಿ ಗಾಬರಿಗೊಂಡ ಘಟನೆ ನಡೆದಿತ್ತು. ಇದೀಗ ವಿಜಯನಗರ ಜಿಲ್ಲೆಗೆ ತೆರಳಿದ್ದ ನಟ ಚಿಕ್ಕಣ್ಣ, ನಟ ದರ್ಶನ್ ಅವರ ಭೇಟಿ ಬಗ್ಗೆ ಮಾತಾಡಿದ್ದಾರೆ.

ಸಿನಿಮಾ ಪ್ರಚಾರಕ್ಕೆ ಬಂದ ನಟ ಚಿಕ್ಕಣ್ಣ!
ಕನ್ನಡದ ಕಾಮಿಡಿ ಡ್ರಾಮಾ ಲಕ್ಷ್ಮೀಪುತ್ರ ಸಿನಿಮಾದಲ್ಲಿ ನಟ ಚಿಕ್ಕಣ್ಣ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಸಿನಿಮಾ ಪ್ರಮೋಷನ್​​ಗೆಂದು ನಟ ಚಿಕ್ಕಣ್ಣ ವಿಜಯನಗರ ಜಿಲ್ಲೆಗೆ ಆಗಮಿಸಿದ್ರು. ಇದೇ ನವೆಂಬರ್ 27ರಂದು ಲಕ್ಷ್ಮೀಪುತ್ರ ಸಿನಿಮಾ ರಿಲೀಸ್ ಹಿನ್ನಲೆ ಹೊಸಪೇಟೆಗೆ ಆಗಮಿಸಿ ಪುನೀತ್ ಅವರ​ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದ ನಟ ಚಿಕ್ಕಣ್ಣ, ದರ್ಶನ್​​ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

‘ದರ್ಶನ್​ ಅವರನ್ನ ಭೇಟಿಯಾಗಲ್ಲ’
ಇದೇ ವೇಳೆ ಮಾತಾಡಿದ ನಟ ಚಿಕ್ಕಣ್ಣ ಅವರು ನವೆಂಬರ್ 27 ರಂದು ಲಕ್ಷ್ಮೀಪುತ್ರ ಸಿನಿಮಾ ರಿಲೀಸ್ ಆಗ್ತಿದೆ. ನಾನು ಕೂಡಾ ಅಪ್ಪು ಸರ್​ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದ ಪಡೆಯಲು ಬಂದಿದ್ದೇನೆ ಎಂದ್ರು. ಈ ವೇಳೆ ದರ್ಶನ ಅವರನ್ನ ಭೇಟಿ ಆಗಿ ಆಶೀರ್ವಾದ ಪಡೆಯುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಚಿಕ್ಕಣ್ಣ, ಸದ್ಯಕ್ಕೆ ನಾನು ಹೋಗಿ ದರ್ಶನ ಅವರನ್ನ ಭೇಟಿ ಆಗೋಲ್ಲ ಎಂದಿದ್ದಾರೆ.

ನಾನು ಈಗ ಏನನ್ನೂ ಮಾತನಾಡುವ ಹಾಗಿಲ್ಲ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಜೈಲು ಸೇರಿರೋ ನಟ ದರ್ಶನ್​ ಅವರನ್ನು ಚಿಕ್ಕಣ್ಣ ಭೇಟಿ ಆಗಲ್ಲ ಎಂದಿದ್ದು, ಈ ವಿಚಾರವಾಗಿ ನಾನು ಈಗ ಏನನ್ನೂ ಮಾತನಾಡುವ ಹಾಗಿಲ್ಲ ಎಂದು ಹೇಳುವ ಮೂಲಕ ಅವರು ಈ ವಿಷಯದಿಂದ ದೂರ ಉಳಿಯಲು ಬಯಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಣ್ಣ ಅವರು ಈ ಹಿಂದೆ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್ ಭೇಟಿಯ ಕುರಿತು ಅವರು ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.

ಸದ್ಯಕ್ಕೆ ದರ್ಶನ್ ಭೇಟಿ ಮಾಡಲ್ಲ!
ನವೆಂಬರ್ 19ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಗೆ ‘ಲಕ್ಷ್ಮೀಪುತ್ರ’ ಸಿನಿಮಾದ ಪ್ರಚಾರಕ್ಕಾಗಿ ಚಿಕ್ಕಣ್ಣ ಆಗಮಿಸಿದ್ದರು. ನಗರದ ಡಾ. ಪುನೀತ್ ರಾಜ್‌ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರು ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತೀರಾ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಚಿಕ್ಕಣ್ಣ, “ಸದ್ಯಕ್ಕೆ ದರ್ಶನ್ ಅವರನ್ನು ಭೇಟಿಯಾಗುವುದಿಲ್ಲ ಮತ್ತು ಅವರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ

ದರ್ಶನ್ ಭೇಟಿಗೆ ಹಿಂದೇಟು ಹಾಕಿದ್ದು ಯಾಕೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಿಕ್ಕಣ್ಣ ಪ್ರಮುಖ ಸಾಕ್ಷಿದಾರರಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನೀಡಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಚಿಕ್ಕಣ್ಣ ಎಚ್ಚರಿಕೆಯ ನಡೆ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ದರ್ಶನ್ ಅವರನ್ನು ಭೇಟಿಯಾಗದಿರಲು ನಿರ್ದಿಷ್ಟ ಕಾರಣವೇನು ಎಂಬುದನ್ನು ಚಿಕ್ಕಣ್ಣ ಬಹಿರಂಗಪಡಿಸಿಲ್ಲ

ಈ ಹಿಂದೆ ಜೈಲಿಗೆ ತೆರಳಿದ್ದ ಚಿಕ್ಕಣ್ಣ
2024ರಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಚಿಕ್ಕಣ್ಣ ಭೇಟಿಯಾಗಿದ್ದರು.

ಪ್ರಕರಣದ ಸಾಕ್ಷಿದಾರರಾಗಿದ್ದ ಚಿಕ್ಕಣ್ಣ ಆರೋಪಿಯನ್ನು ಭೇಟಿಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಕರೆಸಿದ್ದರು.

ದರ್ಶನ್ ಅವರನ್ನು ಭೇಟಿಯಾಗಲು ಕಾರಣವೇನು? ಯಾರಾದರೂ ಒತ್ತಡ ಹೇರಿದ್ದರಾ? ಜೈಲಿನಲ್ಲಿ ಏನು ಮಾತುಕತೆ ನಡೆಯಿತು ಎಂಬಿತ್ಯಾದಿ ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದರು

ಸ್ನೇಹಕ್ಕಾಗಿ ದರ್ಶನ್ ಭೇಟಿಯಾಗಿದ್ದ ಚಿಕ್ಕಣ್ಣ
ದರ್ಶನ್ ಜೊತೆಗಿನ ಸ್ನೇಹದ ಹಿನ್ನೆಲೆಯಲ್ಲಿ ಜೈಲಿಗೆ ತೆರಳಿದ್ದಾಗಿ ಚಿಕ್ಕಣ್ಣ ಈ ಹಿಂದೆ ಸ್ಪಷ್ಟನೆ ನೀಡಿದ್ದರು. ಪ್ರಕರಣದ ಸಾಕ್ಷಿದಾರನಾಗಿ ಆರೋಪಿಯನ್ನು ಭೇಟಿಯಾಗಬಾರದು ಎಂಬ ವಿಚಾರ ತನಗೆ ತಿಳಿದಿರಲಿಲ್ಲ ಎಂದೂ ಹೇಳಿದ್ದರು.

ಮೊದಲೇ ಈ ವಿಚಾರ ತಿಳಿದಿದ್ದರೆ ಜೈಲಿಗೆ ಹೋಗುತ್ತಿರಲಿಲ್ಲ ಎಂದು ತಿಳಿಸಿದ್ದ ಚಿಕ್ಕಣ್ಣ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದರು.

ಅಪ್ಪು ಆಶೀರ್ವಾದ ಪಡೆಯಲು ಹೊಸಪೇಟೆಗೆ ಬಂದ ಚಿಕ್ಕಣ್ಣ
ಕನ್ನಡ ಸಿನಿಮಾಗಳ ಬಿಡುಗಡೆಗೂ ಮುನ್ನ ಹೊಸಪೇಟೆಗೆ ಬಂದು ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿಗೆ ಗೌರವ ಸಲ್ಲಿಸುವ ಸಂಪ್ರದಾಯವಿದೆ. ಅದೇ ರೀತಿ ತಮ್ಮ ಸಿನಿಮಾದ ಯಶಸ್ಸಿಗಾಗಿ ಅಪ್ಪು ಅವರ ಆಶೀರ್ವಾದ ಪಡೆಯಲು ಬಂದಿರುವುದಾಗಿ ಚಿಕ್ಕಣ್ಣ ಹೇಳಿದ್ದಾರೆ.

ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮಾನಸಿಕವಾಗಿ ಸದಾ ನಮ್ಮೊಂದಿಗಿದ್ದಾರೆ. ಅವರ ಆಶೀರ್ವಾದ ನಮ್ಮ ಮೇಲಿರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *