ವಿದೇಶಿ ಬಾಯ್​​ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡ ನಟಿ ಅನನ್ಯಾ ಪಾಂಡೆ!!

ವಿದೇಶಿ ಬಾಯ್​​ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡ ನಟಿ ಅನನ್ಯಾ ಪಾಂಡೆ!!

ಅನನ್ಯಾ ಪಾಂಡೆ, ತಮ್ಮ ಸಾಧಾರಣ ನಟನೆ, ವಿದೇಶಿ ಆಕ್ಸೆಂಟ್ ಭರಿತ ಸಂಭಾಷಣೆ ಹೇಳುವ ಶೈಲಿ, ಪದೇ ಪದೇ ಬಾಯ್​​ಫ್ರೆಂಡ್ ಬದಲಾವಣೆ ಮಾಡುವುದು ಇನ್ನಿತರೆ ಕಾರಣಗಳಿಗಾಗಿ ಪದೇ ಪದೇ ಟ್ರೋಲ್ ಆಗುತ್ತಲೇ ಇರುವ ಅನನ್ಯಾ ಪಾಂಡೆ. ಇದೀಗ ಕಾಫಿ ವಿತ್ ಕರಣ್ ಶೋಗೆ ಆಗಮಿಸಿದ್ದರು. ಈ ವೇಳೆ ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಿದ್ದು, ತಾವು ಮತ್ತೊಮ್ಮೆ ಸಿಂಗಲ್ ಆಗಿರುವುದಾಗಿ ಹೇಳಿದ್ದಾರೆ. ಆ ಮೂಲಕ ತಮ್ಮ ವಿದೇಶಿ ಬಾಯ್​​ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ.

ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ತಮ್ಮ ಸಿನಿಮಾಗಳಿಗಿಂತಲೂ ಖಾಸಗಿ ಜೀವನದಿಂದಾಗಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ತಮ್ಮ ಸಾಧಾರಣ ನಟನೆ, ವಿದೇಶಿ ಆಕ್ಸೆಂಟ್ ಭರಿತ ಸಂಭಾಷಣೆ ಹೇಳುವ ಶೈಲಿ, ಪದೇ ಪದೇ ಬಾಯ್​​ಫ್ರೆಂಡ್ ಬದಲಾವಣೆ ಮಾಡುವುದು ಇನ್ನಿತರೆ ಕಾರಣಗಳಿಗಾಗಿ ಪದೇ ಪದೇ ಟ್ರೋಲ್ ಆಗುತ್ತಲೇ ಇರುವ ಅನನ್ಯಾ ಪಾಂಡೆ. ಇದೀಗ ಕಾಫಿ ವಿತ್ ಕರಣ್ ಶೋಗೆ ಆಗಮಿಸಿದ್ದರು. ಈ ವೇಳೆ ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಿದ್ದು, ತಾವು ಮತ್ತೊಮ್ಮೆ ಸಿಂಗಲ್ ಆಗಿರುವುದಾಗಿ ಹೇಳಿದ್ದಾರೆ. ಆ ಮೂಲಕ ತಮ್ಮ ವಿದೇಶಿ ಬಾಯ್​​ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ.

ಅನನ್ಯಾ ಪಾಂಡೆ ಮತ್ತು ಬಿರ್ಲಾ ಸಮೂಹ ಹಾಗೂ ಇದೀಗ ಆರ್​​ಸಿಬಿ ತಂಡದ ಹೊಸ ಮಾಲಕಿ, ಯುವ ಉದ್ಯಮಿ ಅನನ್ಯಾ ಬಿರ್ಲಾ ಇಬ್ಬರೂ ಒಟ್ಟಿಗೆ ‘ಕಾಫಿ ವಿತ್ ಕರಣ್’ಶೋಗೆ ಆಗಮಿಸಿದ್ದರು. ಶೋನಲ್ಲಿ ಕರಣ್ ಜೋಹರ್, ಇಬ್ಬರು ಯುವತಿಯರಿಗೆ ಹಲವಾರು ಖಾಸಗಿ ಪ್ರಶ್ನೆಗಳನ್ನು ಕೇಳಿದರು. ಅನನ್ಯಾ ಪಾಂಡೆ ಮತ್ತು ಅನನ್ಯಾ ಬಿರ್ಲಾ ಇಬ್ಬರೂ ಸಹ ತಮ್ಮ ಲವ್ ಲೈಫ್ ಹಾಗೂ ಇನ್ನಿತರೆ ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ.

ಈ ವೇಳೆ ಅನನ್ಯಾ ಪಾಂಡೆ, ತಾವು ಮತ್ತೆ ಸಿಂಗಲ್ ಆಗಿರುವುದಾಗಿಯೂ, ಜೋಡಿ ಆಗಲು ರೆಡಿ ಇರುವುದಾಗಿಯೂ ಹೇಳಿದ್ದಾರೆ. ಅಲ್ಲದೆ, ತಾವು ಈಗ ಸಿಂಗಲ್ ಆಗಿರುವುದನ್ನು ಎಂಜಾಯ್ ಮಾಡುತ್ತಿರುವುದಾಗಿಯೂ ಹೇಳಿದ್ದಾರೆ. ನಾನು ಮತ್ತೊಬ್ಬರನ್ನು ಪ್ರೀತಿಸಿ ಅವರನ್ನು ಜೀವನಕ್ಕೆ ಕರೆದುಕೊಳ್ಳುವ ಮೊದಲು, ನನ್ನನ್ನು ನಾನು ಪ್ರೀತಿಸಬೇಕಿದೆ. ಅದಕ್ಕಾಗಿ ನಾನು ಸ್ವಲ್ಪ ಸಮಯ ತೆಗೆದುಕೊಳ್ಳಲಿದ್ದೇನೆ’ ಎಂದಿದ್ದಾರೆ ಅನನ್ಯಾ ಪಾಂಡೆ.

ಅಸಲಿಗೆ ಅನನ್ಯಾ ಪಾಂಡೆ, ವಿದೇಶಿ ಪ್ರಜೆ ವಾಲ್ಟರ್ ಬ್ಲಾಂಕೊ ಜೊತೆಗೆ ಪ್ರೀತಿಯಲ್ಲಿದ್ದು, ಇಬ್ಬರು ಕಳೆದ ಎರಡು ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಆದರೆ ಇತ್ತೀಚೆಗಷ್ಟೆ ಈ ಜೋಡಿ ಬ್ರೇಕಪ್ ಮಾಡಿಕೊಂಡ ಸುದ್ದಿ ಹರಿದಾಡಿತ್ತು. ಆದರೆ ಈಗ ಅನನ್ಯಾ ಪಾಂಡೆ ಆ ಸುದ್ದಿಯನ್ನು ಖಾತ್ರಿ ಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮದುವೆಯ ಬಗ್ಗೆಯೂ ಮಾತನಾಡಿರುವ ಅನನ್ಯಾ, ‘ನಾನು ಪಕ್ಕಾ ಮದುವೆ ಮೆಟಿರಿಯಲ್, ನನಗೆ ಮದುವೆ ಆಸೆ ಇದೆ. ನಾನು ಖಂಡಿತ ಭವಿಷ್ಯದಲ್ಲಿ ಮದುವೆ ಆಗುತ್ತೀನಿ’ ಎಂದಿದ್ದಾರೆ.

ಇದೇ ಶೋನಲ್ಲಿ ಅನನ್ಯಾ ಪಾಂಡೆ, ಗೇಮ್​ ಒಂದಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಆರ್ಯನ್ ಅವರಿಗೆ ಕರೆ ಮಾಡಿದರು. ಅದಕ್ಕೆ ಮುಂಚೆ ಇನ್ನೂ ಕೆಲವರಿಗೆ ಕರೆ ಮಾಡಿದ್ದರು. ಆಗ ಮತ್ತೊಬ್ಬ ಅತಿಥಿ ಅನನ್ಯಾ ಬಿರ್ಲಾ, ‘ನೀನು ನಿನ್ನ ಎಲ್ಲ ಹಳೆಯ ಬಾಯ್​​ಫ್ರೆಂಡ್​’ಗಳಿಗೆ ಕರೆ ಮಾಡಿಬಿಟ್ಟಿದ್ದೀಯ’ ಎಂದರು. ಆ ಮೂಲಕ ಅನನ್ಯಾ ಪಾಂಡೆ ಪದೇ ಪದೇ ಬಾಯ್​​ಫ್ರೆಂಡ್ ಬದಲಿಸುವ ಚಾಳಿ ಹೊಂದಿರುವ ನಟಿ ಎಂದರು ಪರೋಕ್ಷವಾಗಿ ಹೇಳಿದರು. ಕರಣ್ ಜೋಹರ್ ಸಹ ಇದನ್ನೇ ಹೇಳಿದರು. ‘ಅನನ್ಯಾ ಶುಕ್ರವಾರ ಬ್ರೇಕಪ್ ಮಾಡಿಕೊಂಡು ಒಂದೆರಡು ದಿನ ಬೇಜಾರಿನಲ್ಲಿರುತ್ತಾರೆ, ಸೋಮವಾರದ ಹೊತ್ತಿಗೆ ಮತ್ತೆ ಸರಿ ಹೋಗಿರುತ್ತಾರೆ’ ಎಂದರು. ಒಟ್ಟಾರೆ ಅನನ್ಯಾ ಪಾಂಡೆ ಮತ್ತೆ ಬ್ರೇಕಪ್ ಮಾಡಿಕೊಂಡು ಈಗ ಸಿಂಗಲ್ ಆಗಿದ್ದಾರೆ.

ಬಾಲಿವುಡ್‌ನ ಯುವ ನಟಿ ಅನನ್ಯಾ ಪಾಂಡೆ ಇದೀಗ ಮತ್ತೊಮ್ಮೆ ತಮ್ಮ ಪ್ರೇಮ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಮೆರಿಕ ಮೂಲದ ವಾಕರ್ ಬ್ಲಾಂಕೊ ಜೊತೆ ಪ್ರೀತಿಯಲ್ಲಿದ್ದರು ಎನ್ನಲಾದ ಅನನ್ಯಾ ಪಾಂಡೆ, ಇದೀಗ ತಾವು ಸಿಂಗಲ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಇಬ್ಬರ ಬ್ರೇಕಪ್ ಕುರಿತ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.

ಇತ್ತೀಚೆಗೆ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಒಂಬತ್ತನೇ ಸೀಸನ್‌ನಲ್ಲಿ ಭಾಗವಹಿಸಿದ್ದ ಅನನ್ಯಾ ಪಾಂಡೆ, ತಮ್ಮ ಪ್ರೀತಿ, ಬ್ರೇಕಪ್ ಹಾಗೂ ಮದುವೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ

ಎರಡು ವರ್ಷಗಳ ಪ್ರೀತಿಗೆ ಗುಡ್‌ಬೈ!
2024ರಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಸಂಭ್ರಮದ ವೇಳೆ ಅನನ್ಯಾ ಪಾಂಡೆ ಮತ್ತು ವಾಕರ್ ಬ್ಲಾಂಕೊ ನಡುವೆ ಪರಿಚಯವಾಗಿತ್ತು ಎನ್ನಲಾಗಿದೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು ಎಂದು ವರದಿಯಾಗಿತ್ತು.

ಇಬ್ಬರೂ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅನನ್ಯಾ ಹುಟ್ಟುಹಬ್ಬದಂದು ವಾಕರ್ ಬ್ಲಾಂಕೊ ಪ್ರೀತಿಯಿಂದ ಶುಭಾಶಯ ತಿಳಿಸಿದ್ದರು. ಆದರೆ 2026ರ ಆಗಸ್ಟ್‌ನಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ದೂರವಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು

ಮತ್ತೆ ಸಿಂಗಲ್ ಆಗಿರುವುದಕ್ಕೆ ಖುಷಿಯಿದೆ!
‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಹಾಗೂ ಗಾಯಕಿ ಅನನ್ಯಾ ಬಿರ್ಲಾ ಅವರೊಂದಿಗೆ ಭಾಗವಹಿಸಿದ್ದ ಅನನ್ಯಾ ಪಾಂಡೆ, ಸದ್ಯ ತಾವು ಒಂಟಿಯಾಗಿರುವುದನ್ನು ಆನಂದಿಸುತ್ತಿರುವುದಾಗಿ ತಿಳಿಸಿದ್ದಾರೆ.

ಈ ಹಿಂದೆ ಪ್ರೀತಿ ಮತ್ತು ಸಂಬಂಧಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೆ. ಆದರೆ ಈಗ ನನ್ನ ಬಗ್ಗೆ ಹೆಚ್ಚು ಗಮನ ಹರಿಸಲು ಬಯಸುತ್ತಿದ್ದೇನೆ. ಮತ್ತೊಬ್ಬ ವ್ಯಕ್ತಿಯನ್ನು ಪ್ರೀತಿಸುವ ಮೊದಲು ನನ್ನನ್ನು ನಾನು ಪ್ರೀತಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಹೊಸ ಸಂಬಂಧಕ್ಕೆ ಆತುರಪಡದೆ, ತಮಗಾಗಿ ಸಮಯ ಮೀಸಲಿಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಶುಕ್ರವಾರ ಬ್ರೇಕಪ್, ಸೋಮವಾರ ನಾರ್ಮಲ್!
ಇದೇ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಅನನ್ಯಾ ಪಾಂಡೆ ಅವರ ಪ್ರೇಮ ಜೀವನದ ಬಗ್ಗೆ ತಮಾಷೆ ಮಾಡಿದ್ದಾರೆ. ಶುಕ್ರವಾರ ಬ್ರೇಕಪ್ ಮಾಡಿಕೊಂಡು ಬೇಸರದಲ್ಲಿರುವ ಅನನ್ಯಾ, ಸೋಮವಾರದ ವೇಳೆಗೆ ಸಹಜ ಸ್ಥಿತಿಗೆ ಮರಳುತ್ತಾರೆ ಎಂದು ಕಾಲೆಳೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅನನ್ಯಾ, ತಾವು ಈ ಹಿಂದೆ ಕೆಲವು ಪ್ರೇಮ ಸಂಬಂಧಗಳಲ್ಲಿದ್ದಿದ್ದು ನಿಜ. ಆದರೆ ಅದರಲ್ಲಿ ತಪ್ಪೇನೂ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮದುವೆಯಾಗುವ ಆಸೆ ಇನ್ನೂ ಇದೆ!
ಪ್ರೀತಿಯಲ್ಲಿ ಹಿನ್ನಡೆಯಾದರೂ ಮದುವೆಯ ಮೇಲಿನ ನಂಬಿಕೆಯನ್ನು ಅನನ್ಯಾ ಕಳೆದುಕೊಂಡಿಲ್ಲ. ಒಬ್ಬ ವ್ಯಕ್ತಿಯೊಂದಿಗೆ ಜೀವನಪೂರ್ತಿ ಜೊತೆಯಾಗಿ ಬದುಕುವ ಕನಸು ತಮಗಿದೆ ಎಂದಿದ್ದಾರೆ.

ಆದರೆ ಸಂಬಂಧದಲ್ಲಿ ಇಬ್ಬರಿಗೂ ಸಂತೋಷವಿಲ್ಲದಿದ್ದರೆ ಬಲವಂತವಾಗಿ ಜೊತೆಯಲ್ಲಿ ಮುಂದುವರಿಯುವ ಅಗತ್ಯವಿಲ್ಲ. ಅಂತಹ ಸಂಬಂಧದಿಂದ ಹೊರಬರುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *