ಪಬ್ನಲ್ಲಿ ಕಿರಿಕ್ ಬೆನ್ನಲ್ಲೇ ಪಕ್ಕದ ಮನೆಯವರ ಜೊತೆ ಗಲಾಟೆ! ಅಮುಕು ಡುಮುಕು ಮಂಜನ ವಿರುದ್ಧ ಮತ್ತೊಂದು FIR!
ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ ನೆರೆಹೊರೆಯವರು! ಅಷ್ಟಕ್ಕೂ ಗಲಾಟೆಗೆ ಕಾರಣವಾಗಿದ್ದೇನು?
ಬೆಂಗಳೂರು: ಪಬ್ನಲ್ಲಿ ನಡೆದ ಗಲಾಟೆಯಿಂದ ಸುದ್ದಿಯಾಗಿದ್ದ ಯೂಟ್ಯೂಬರ್ ಅಮುಕು ಡುಮುಕು ಮಂಜ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಈ ಬಾರಿ ಪಕ್ಕದ ಮನೆಯವರೊಂದಿಗೆ ನಡೆದ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಮಂಜುನಾಥ್ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.

ಪಬ್ ಗಲಾಟೆ ಬೆನ್ನಲ್ಲೇ ಮತ್ತೊಂದು ಕಿರಿಕ್!
ಈ ಹಿಂದೆ ಪಬ್ನಲ್ಲಿ ನಡೆದ ಗಲಾಟೆ ವಿಚಾರವಾಗಿ ಸುದ್ದಿಯಾಗಿದ್ದ ಅಮುಕು ಡುಮುಕು ಮಂಜ ಅಲಿಯಾಸ್ ಮಂಜುನಾಥ್, ಇದೀಗ ನೆರೆಹೊರೆಯವರೊಂದಿಗಿನ ಜಗಳದ ವಿಚಾರವಾಗಿ ಸುದ್ದಿಯಾಗಿದ್ದಾರೆ.
ಪಕ್ಕದ ಮನೆಯ ನಿವಾಸಿ ವಿಕ್ರಂ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಯಶವಂತಪುರ ಪೊಲೀಸರು ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ತಮ್ಮನ ವಿಚಾರಕ್ಕೆ ಶುರುವಾಯ್ತು ಗಲಾಟೆ!

ದೂರುದಾರ ವಿಕ್ರಂ ಹಾಗೂ ಮಂಜುನಾಥ್ ಅಕ್ಕಪಕ್ಕದ ಮನೆಯವರಾಗಿದ್ದಾರೆ. ಮಂಜುನಾಥ್ ಅವರ ತಮ್ಮ ಸಿದ್ದ ಎಂಬಾತನ ವಿಚಾರವಾಗಿ ಎರಡು ಮನೆಯವರ ನಡುವೆ ಕಿರಿಕ್ ಶುರುವಾಗಿದೆ.
ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಎರಡೂ ಕಡೆಯವರು ಕೈ ಕೈ ಮಿಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಕ್ರಂ ವಿರುದ್ಧ ಮಂಜನಿಂದಲೂ ದೂರು!

ಇತ್ತ ವಿಕ್ರಂ ನೀಡಿದ ದೂರಿನ ಬೆನ್ನಲ್ಲೇ ಮಂಜುನಾಥ್ ಕೂಡ ಯಶವಂತಪುರ ಪೊಲೀಸ್ ಠಾಣೆಗೆ ತೆರಳಿ ವಿಕ್ರಂ ವಿರುದ್ಧ ದೂರು ನೀಡಿದ್ದಾರೆ. ಹೀಗಾಗಿ ಎರಡೂ ಕಡೆಯವರ ವಿರುದ್ಧ ದೂರು-ಪ್ರತಿದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಷ್ಟಕ್ಕೂ ಸಿದ್ದನ ವಿಚಾರವಾಗಿ ಶುರುವಾದ ಜಗಳಕ್ಕೆ ನಿಜವಾದ ಕಾರಣವೇನು? ಮೊದಲು ಗಲಾಟೆ ಶುರು ಮಾಡಿದ್ದು ಯಾರು? ಪೊಲೀಸ್ ತನಿಖೆಯ ಬಳಿಕ ಘಟನೆಯ ಅಸಲಿಯತ್ತು ಹೊರಬರಬೇಕಿದೆ.