1970ರಲ್ಲೇ ಅರಮನೆಯಂತಹ ಬಂಗಲೆ ಕಟ್ಟಿಸಿದ್ದ ಮಿನುಗುತಾರೆ ಕಲ್ಪನಾ! ಮನೆಯೊಳಗಿನ ಆ ವ್ಯವಸ್ಥೆ ನೋಡಿದ್ರೆ ಬೆರಗಾಗ್ತೀರಾ!
ಅರ್ಧ ಶತಮಾನದ ಹಿಂದೆಯೇ ಐಷಾರಾಮಿ ಜೀವನಶೈಲಿಗೆ ಹೆಸರಾಗಿದ್ದ ನಟಿ ಕಲ್ಪನಾ! ಬೆಂಗಳೂರಿನಲ್ಲಿ ಕಟ್ಟಿಸಿದ್ದ ‘ಅನುಗ್ರಹ’ ಬಂಗಲೆಯ ಪ್ರತಿಯೊಂದು ಮೂಲೆಯಲ್ಲೂ ಇತ್ತು ವಿಶೇಷತೆ. ಅಷ್ಟಕ್ಕೂ ಆ ಮನೆಯೊಳಗೆ ಏನೇನಿತ್ತು? ಕಲ್ಪನಾ ಅಗಲಿಕೆಯ ಬಳಿಕ ಆ ಬಂಗಲೆ ಏನಾಯ್ತು?
ಕನ್ನಡ ಚಿತ್ರರಂಗದ ಮಿನುಗುತಾರೆ ಕಲ್ಪನಾ ಎಂದರೆ ಇಂದಿಗೂ ಸಿನಿಪ್ರಿಯರಿಗೆ ವಿಶೇಷ ಅಭಿಮಾನ. ತಮ್ಮ ಅದ್ಭುತ ಅಭಿನಯ, ಸೌಂದರ್ಯ ಹಾಗೂ ವಿಭಿನ್ನ ವ್ಯಕ್ತಿತ್ವದಿಂದ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ ಕಲ್ಪನಾ, ಜೀವನಶೈಲಿಯಲ್ಲೂ ಎಲ್ಲರಿಗಿಂತ ಭಿನ್ನವಾಗಿದ್ದರು.
ಇಂದು ಸಿನಿಮಾ ತಾರೆಯರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಐಷಾರಾಮಿ ಬಂಗಲೆ ಕಟ್ಟಿಸುವುದು ಸಾಮಾನ್ಯ. ಆದರೆ 1970ರಲ್ಲೇ ಕಲ್ಪನಾ ಬೆಂಗಳೂರಿನಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಬಂಗಲೆ ನಿರ್ಮಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಐಷಾರಾಮಿ ಬಂಗಲೆ ಕಟ್ಟಿಸಿದ್ದ ಮೊದಲ ನಟಿ ಎಂಬ ಹೆಗ್ಗಳಿಕೆಯೂ ಅವರಿಗಿತ್ತು ಎನ್ನಲಾಗಿದೆ.

ಕನಸಿನ ಬಂಗಲೆಗೆ ‘ಅನುಗ್ರಹ’ ಎಂದು ಹೆಸರಿಟ್ಟಿದ್ದ ಕಲ್ಪನಾ!
ಬೆಂಗಳೂರಿನ ಫ್ರೇಜರ್ ಟೌನ್‌ನ ಡೇವಿಸ್ ರಸ್ತೆಯಲ್ಲಿ ಕಲ್ಪನಾ ತಮ್ಮ ಕನಸಿನ ಬಂಗಲೆ ನಿರ್ಮಿಸಿದ್ದರು. ಅದಕ್ಕೆ ಪ್ರೀತಿಯಿಂದ ‘ಅನುಗ್ರಹ’ ಎಂದು ಹೆಸರಿಟ್ಟಿದ್ದರು.
ಮನೆಯ ಮುಖ್ಯ ದ್ವಾರ ದಾಟುತ್ತಿದ್ದಂತೆ ವಿಶಾಲವಾದ ಅಂಗಳ, ಸುಂದರ ಉದ್ಯಾನವನ, ನೀರಿನ ಚಿಲುಮೆಗಳು ಹಾಗೂ ಅಲಂಕಾರಿಕ ಕಲ್ಲುಗಳು ಕಣ್ಮನ ಸೆಳೆಯುತ್ತಿದ್ದವಂತೆ.
ವಿಕ್ಟೋರಿಯನ್ ಶೈಲಿಯ ಮೊಗಸಾಲೆ, ಎತ್ತರವಾದ ದೀಪಗಳು, ಊಟದ ಕೋಣೆಯಲ್ಲಿ ರಕ್ತಚಂದನದ ಮರದ ಬಳಕೆ ಸೇರಿದಂತೆ ಮನೆಯ ಪ್ರತಿಯೊಂದು ಭಾಗಕ್ಕೂ ಕಲ್ಪನಾ ವಿಶೇಷ ಆದ್ಯತೆ ನೀಡಿದ್ದರು ಎನ್ನಲಾಗಿದೆ.
ಮನೆಗೆ ಬಂದವರಿಗೆ ಇತ್ತು ವಿಚಿತ್ರ ನಿಯಮ!

ಕಲ್ಪನಾ ಅವರ ಬಂಗಲೆಯಲ್ಲಿದ್ದ ಚಪ್ಪಲಿ ಸ್ಟ್ಯಾಂಡ್ ಕೂಡ ವಿಶೇಷವಾಗಿತ್ತು. ಮನೆಗೆ ಭೇಟಿ ನೀಡುತ್ತಿದ್ದ ಅತಿಥಿಗಳು ತಮ್ಮ ಚಪ್ಪಲಿಗಳನ್ನು ಹೊರಗಡೆ ಬಿಟ್ಟು, ಕಲ್ಪನಾ ವ್ಯವಸ್ಥೆ ಮಾಡಿದ್ದ ಚಪ್ಪಲಿಗಳನ್ನು ಧರಿಸಿ ಮನೆಯೊಳಗೆ ಪ್ರವೇಶಿಸಬೇಕಿತ್ತಂತೆ.
ಅದಕ್ಕಾಗಿಯೇ ವಿವಿಧ ಅಳತೆಯ ಚಪ್ಪಲಿಗಳನ್ನು ಸ್ಟ್ಯಾಂಡ್‌ನಲ್ಲಿ ಇಡಲಾಗುತ್ತಿತ್ತು. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಕಾಣಸಿಗುವ ಇಂತಹ ವ್ಯವಸ್ಥೆಯನ್ನು ಕಲ್ಪನಾ ಅಂದಿನ ಕಾಲದಲ್ಲೇ ಅಳವಡಿಸಿಕೊಂಡಿದ್ದರು.
ಸಾಕುನಾಯಿಗೂ ಪ್ರತ್ಯೇಕ ಮನೆ ಕಟ್ಟಿಸಿದ್ದ ಮಿನುಗುತಾರೆ!

ಕಲ್ಪನಾ ಅವರಿಗೆ ಸಾಕುಪ್ರಾಣಿಗಳ ಮೇಲೂ ವಿಶೇಷ ಪ್ರೀತಿಯಿತ್ತು. 1970ರಲ್ಲೇ ತಮ್ಮ ಸಾಕುನಾಯಿಗಾಗಿ ಪ್ರತ್ಯೇಕ ಮನೆ ನಿರ್ಮಿಸಿದ್ದರು ಎನ್ನಲಾಗಿದೆ.
ಅಷ್ಟೇ ಅಲ್ಲದೆ, ಮನೆಯೊಳಗೆ ಅಕ್ವೇರಿಯಂ ಸೇರಿದಂತೆ ಹಲವು ವಿಶೇಷ ಅಲಂಕಾರಿಕ ವಸ್ತುಗಳನ್ನು ಇಟ್ಟಿದ್ದರು. ಉದ್ಯಾನವನದಲ್ಲಿದ್ದ ನೀರಿನ ಚಿಲುಮೆಗಳು ಬಂಗಲೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದವು.

ಒಂದೇ ಒಂದು ಲೈಟ್ ಹೇಳುತ್ತಿತ್ತು ಕಲ್ಪನಾ ಮನೆಯಲ್ಲಿದ್ದಾರಾ ಇಲ್ವಾ ಅಂತ!ಕಲ್ಪನಾ ಅವರ ಬಂಗಲೆಯಲ್ಲಿದ್ದ ಮತ್ತೊಂದು ಕುತೂಹಲಕಾರಿ ವ್ಯವಸ್ಥೆ ಎಂದರೆ ವಿದ್ಯುತ್ ದೀಪ.
ಕಲ್ಪನಾ ಮನೆಯಲ್ಲಿದ್ದರೆ ನಿರ್ದಿಷ್ಟ ದೀಪ ಉರಿಯುತ್ತಿತ್ತಂತೆ. ಅವರು ಹೊರಗೆ ಹೋಗಿದ್ದರೆ ಆ ದೀಪ ಆರಿರುತ್ತಿತ್ತು. ಹೀಗಾಗಿ ದೀಪವನ್ನು ನೋಡಿಯೇ ಕಲ್ಪನಾ ಮನೆಯಲ್ಲಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದಾಗಿತ್ತು.
ಕಲ್ಪನಾ ಅವರ ಕುರಿತು ಪುಸ್ತಕ ಬರೆದಿರುವ ಶ್ರೀಧರ್ ಅವರು ಸಂದರ್ಶನವೊಂದರಲ್ಲಿ ಈ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಕಲ್ಪನಾ ಅಗಲಿಕೆಯ ಬಳಿಕ ಕನಸಿನ ಬಂಗಲೆ ಏನಾಯ್ತು?ತಮ್ಮ ಅಭಿರುಚಿಗೆ ತಕ್ಕಂತೆ ಪ್ರತಿಯೊಂದು ಮೂಲೆಯನ್ನೂ ರೂಪಿಸಿದ್ದ ಕಲ್ಪನಾ ಅವರ ಬದುಕು ಮಾತ್ರ ದುರಂತ ಅಂತ್ಯ ಕಂಡಿತ್ತು. ಅವರ ನಿಧನದ ಬಳಿಕ ಸಹೋದರ ‘ಅನುಗ್ರಹ’ ಬಂಗಲೆಯನ್ನು ಮಾರಾಟ ಮಾಡಿದ್ದರು ಎನ್ನಲಾಗಿದೆ.
ಕಲ್ಪನಾ ತಮ್ಮ ಮನೆಗಾಗಿ ವಿಶೇಷ ವಿದ್ಯುತ್ ಟ್ರಾನ್ಸ್‌ಫಾರ್ಮರ್ ವ್ಯವಸ್ಥೆಯನ್ನೂ ಮಾಡಿಸಿಕೊಂಡಿದ್ದರಂತೆ. ಅದರ ಮೇಲೆ ಕಲ್ಪನಾ ಅವರ ಹೆಸರು ಈಗಲೂ ಇದೆ ಎಂದು ಹೇಳಲಾಗುತ್ತದೆ. ಡೇವಿಸ್ ರಸ್ತೆಯಲ್ಲಿ ನೆರಳು ನೀಡುತ್ತಿರುವ ಮರಗಳನ್ನು ಬೆಳೆಸುವಲ್ಲಿಯೂ ಕಲ್ಪನಾ ಅವರ ಪಾತ್ರವಿತ್ತು ಎನ್ನಲಾಗಿದೆ.
ಮಿನುಗುತಾರೆ ಕಲ್ಪನಾ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳು, ವಿಶಿಷ್ಟ ಜೀವನಶೈಲಿ ಹಾಗೂ ‘ಅನುಗ್ರಹ’ ಬಂಗಲೆಯ ನೆನಪುಗಳು ಇಂದಿಗೂ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿವೆ.