ಬಿಹಾರದಲ್ಲಿ ಸಿನಿಮೀಯ ಶೈಲಿಯ ದರೋಡೆ! ಕ್ಯಾಮೆರಾ ಮುಂದೆಯೇ ₹40 ಕೋಟಿ ಮೌಲ್ಯದ ಆಭರಣ ಲೂಟಿ; ಮತ್ತೆ ಬರ್ತೀವಿ ಎಂದ ಖದೀಮರು!
‘ಇದು ಸಿನಿಮಾ, ಮತ್ತೆ ಬರ್ತೀವಿ’ ಎಂದು ಹೇಳಿ ₹40 ಕೋಟಿ ಆಭರಣ ದೋಚಿದ ದರೋಡೆಕೋರರು!
ಬಿಹಾರದಲ್ಲಿ ನಡೆದ ಭೀಕರ ದರೋಡೆ ಪ್ರಕರಣವೊಂದು ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸಿನಿಮಾದಲ್ಲಿ ನಡೆಯುವಂತಹ ದೃಶ್ಯವೇ ನಿಜ ಜೀವನದಲ್ಲಿ ನಡೆದಿದ್ದು, ಹಾಡಹಗಲೇ ಆಭರಣ ಮಳಿಗೆಯೊಂದಕ್ಕೆ ನುಗ್ಗಿದ ದರೋಡೆಕೋರರು ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಇನ್ನೂ ಆಘಾತಕಾರಿ ಸಂಗತಿಯೆಂದರೆ, ಈ ಇಡೀ ಕೃತ್ಯ ಮಳಿಗೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದರೋಡೆಕೋರರು ಮಳಿಗೆಗೆ ನುಗ್ಗಿ ಅಲ್ಲಿದ್ದ ಆಭರಣಗಳನ್ನು ದೋಚುವಾಗ ಒಳಗಿದ್ದವರು ಆತಂಕಗೊಂಡಿದ್ದಾರೆ. ಕ್ಷಣಾರ್ಧದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿದ ಖದೀಮರು, ಅಲ್ಲಿಂದ ಹೊರಡುವಾಗ ಹೇಳಿದ ಮಾತು ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಮಳಿಗೆಯಲ್ಲಿದ್ದ ಮಹಿಳೆಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ದರೋಡೆಕೋರರು ಹೊರಡುವ ಸಂದರ್ಭದಲ್ಲಿ “ನಾವು ಮತ್ತೆ ಬರುತ್ತೇವೆ, ಇದು ಕೇವಲ ಸಿನಿಮಾ” ಎಂದು ಹೇಳಿ ಹೋಗಿದ್ದಾರೆ ಎನ್ನಲಾಗಿದೆ.
ದರೋಡೆಕೋರರ ಈ ಮಾತು ಪ್ರಕರಣದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇಷ್ಟೊಂದು ದೊಡ್ಡ ಮೊತ್ತದ ಆಭರಣಗಳನ್ನು ದೋಚಲು ಅವರು ಮೊದಲೇ ಸಂಚು ರೂಪಿಸಿದ್ದರೇ? ಈ ಕೃತ್ಯದ ಹಿಂದೆ ದೊಡ್ಡ ಗ್ಯಾಂಗ್ ಇದೆಯೇ? ಮತ್ತೆ ಬರುತ್ತೇವೆ ಎಂದು ಸವಾಲು ಹಾಕಿರುವ ಖದೀಮರನ್ನು ಪೊಲೀಸರು ಪತ್ತೆಹಚ್ಚುತ್ತಾರೆಯೇ ಎಂಬ ಪ್ರಶ್ನೆಗಳು ಇದೀಗ ಮೂಡಿವೆ.