ಕಿಂಗ್ ಕಿಚ್ಚ: ಸುದೀಪ್ಗೆ ಹೊಸ ಬಿರುದು ಕೊಟ್ಟ ಪ್ರೇಮ್, ಕಾರಣವೇನು?
ಸುದೀಪ್ ಅವರಿಗೆ ‘ಕಿಂಗ್ ಕಿಚ್ಚ’ ಎಂಬ ಹೊಸ ಬಿರುದನ್ನು ಪ್ರೇಮ್ ನೀಡಿದ್ದಾರೆ. ‘ದಾದಾ ಆನ್ ಹಾಲಿಡೇ’ ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ಸುದೀಪ್ ಅವರ ಹೆಸರು ಕಿಂಗ್ ಕಿಚ್ಚ ಸುದೀಪ್ ಎಂದೇ ಇರಲಿದೆ. ಸುದೀಪ್ ಅವರ ವ್ಯಕ್ತಿತ್ವ ನೋಡಿ ತಾವು ಈ ಹೆಸರು ಅವರಿಗೆ ನೀಡಿದ್ದು ಎಂದು ಪ್ರೇಮ್ ಹೇಳಿದರು. ಸುದೀಪ್ ರಾಜ, ಮಹಾರಾಜ ಎಂದೇನೂ ಈ ಹೆಸರನ್ನು ನೀಡಿಲ್ಲ. ಅವರ ಗುಣಗಳಿಂದ ಪ್ರೇರಿತರಾಗಿ ಈ ಹೆಸರು ನೀಡಿದ್ದಾಗಿ ಹೇಳಿದರು.
ನಟ ಸುದೀಪ್ ಅವರಿಗೆ ಅವರ ಅಭಿಮಾನಿಗಳು ಹಲವು ಬಿರುದುಗಳನ್ನು ನೀಡಿದ್ದಾರೆ. ‘ಬಾದ್ಷಾ’, ‘ಕಿಚ್ಚ’, ‘ಕರುನಾಡ ಚಕ್ರವರ್ತಿ’ ಇನ್ನೂ ಏನೇನೋ. ಆದರೆ ಇದೀಗ ನಿರ್ದೇಶಕ ಪ್ರೇಮ್ ಅವರು ಸುದೀಪ್ ಅವರಿಗಾಗಿ ಹೊಸ ಬಿರುದೊಂದನ್ನು ನೀಡಿದ್ದಾರೆ. ಪ್ರೇಮ್ ನಿರ್ದೇಶನದ ‘ದಾದಾ ಆನ್ ಹಾಲಿಡೇ’ ಸಿನಿಮಾದಲ್ಲಿ ಸುದೀಪ್ ನಟನೆ ಮಾಡುತ್ತಿದ್ದು, ಇಂದು (ನವೆಂಬರ್ 27) ಸಿನಿಮಾದ ಟೈಟಲ್ ಟೀಸರ್ ಲಾಂಚ್ ಮಾಡಲಾಯಿತು. ಈ ವೇಳೆ ಹಾಕಲಾಗಿದ್ದ ಪೋಸ್ಟರ್ಗಳಲ್ಲಿ ಸುದೀಪ್ ಅವರ ಹೆಸರನ್ನು ಅವರ ಹೊಸ ಬಿರುದಿನೊಂದಿಗೆ ಸೇರಿಸಿ ಹಾಕಲಾಗಿತ್ತು.

‘ಸುದೀಪ್ ಅವರು ಎಂದಿಗೂ ಹೇಳಿಕೊಟ್ಟವರ ಮಾತು ಕೇಳುವವರಲ್ಲ. ಅವರ ಬಳಿಗೆ ಸಹಾಯ ಎಂದು ಹೋಗುವ ಯಾರನ್ನೇ ಆಗಲಿ ಬರಿಗೈಲಿ ಕಳಿಸಿದವರಲ್ಲ. ವ್ಯಕ್ತಿತ್ವ, ಸ್ವಾಭಿಮಾನ ಎಲ್ಲದರಲ್ಲೂ ಅವರದ್ದು ವಿಶೇಷವಾದ ನಿಲುವು, ಇದೇ ಕಾರಣಕ್ಕೆ ಅವರಿಗೆ ಈ ಹೆಸರು ಕೊಟ್ಟಿದ್ದೇನೆ. ಅಷ್ಟು ಮಾತ್ರವೇ ಅಲ್ಲ, ‘ದಾದಾ ಆನ್ ಹಾಲಿಡೇ’ ಸಿನಿಮಾದ ಕಥೆಗೂ ಸಹ ಸುದೀಪ್ ಅವರ ವ್ಯಕ್ತಿತ್ವವೇ ಸ್ಫೂರ್ತಿ. ಅವರ ವ್ಯಕ್ತಿತ್ವದಿಂದ ಗುಣಗಳನ್ನು ಆರಿಸಿ ಈ ಕಥೆ ಹೆಣೆಯಲಾಗಿದೆ’ ಎಂದರು.
‘ಸುದೀಪ್ ಅವರ ವ್ಯಕ್ತಿತ್ವವನ್ನು ಗಮನಿಸಿಯೇ ಈ ಸಿನಿಮಾದಲ್ಲಿ ಹಾಡೊಂದನ್ನು ಸಹ ಬರೆದಿದ್ದೇನೆ, ‘ಹೋಲಿಕೆ ಯಾರೂ ಇಲ್ಲ ಇವನ ಸಮ’ ಎಂದು. ಅವರು ನಿಜ ಜೀವನದಲ್ಲಿ ಇರುವ ಗುಣಗಳನ್ನೇ ಪೋಣಿಸಿ ಹಾಡು ಮಾಡಿದ್ದೇನೆ. ಆ ಹಾಡು ಜನವರಿಯಲ್ಲಿ ರಿಲೀಸ್ ಆಗಲಿದೆ. ‘ದಾದಾ ಆನ್ ಹಾಲಿಡೇ’ ಸಿನಿಮಾ ಮ್ಯೂಸಿಕ್, ಫ್ಯಾಮಿಲಿ, ಎಮೋಷನ್, ಮನೆ-ಮನಗಳಿಗೆ ಮುಟ್ಟುವ ಕಥೆಯನ್ನು ಒಳಗೊಂಡಿರಲಿದೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಮಾಡುತ್ತೇವೆ. ಆದಷ್ಟು ಬೇಗ ಸಿನಿಮಾ ಮುಗಿಸುವ ಪ್ರಯತ್ನ ಮಾಡುತ್ತೇನೆ. ಮುಂದಿನ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುತ್ತೇವೆ’ ಎಂದರು ಪ್ರೇಮ್.
‘ಸುದೀಪ್ ಅವರು ಸಿನಿಮಾವನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿ. ಅವರನ್ನು ಭೇಟಿ ಆದಾಗೆಲ್ಲ ನಾವು ಸಿನಿಮಾ ಬಗ್ಗೆ ಮಾತನಾಡುತ್ತೇವೆ. ಅವರಿಂದ ಬೈಸಿಕೊಂಡಿದ್ದೇನೆ, ಅವರನ್ನು ಖುಷಿ ಪಡಿಸಿದ್ದೇನೆ, ಒಟ್ಟಾರೆ ಅವರೊಟ್ಟಿಗೆ ಕೆಲಸ ಮಾಡುವುದು ಬಹಳ ಖುಷಿ. ಸಿನಿಮಾಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳುವ ವ್ಯಕ್ತಿ ಅವರು. ನಟನೆಯಲ್ಲಿ ನಂಬರ್ 1, ನಟನೆಯಲ್ಲಿ ಕಮಲ್ ಹಾಸನ್ ಎದುರು ನಿಲ್ಲಬೇಕು ಎಂದರೆ ಸುದೀಪ್ ಒಬ್ಬರೇ ಅಂತಹ ಅದ್ಭುತ ನಟ ಅವರು’ ಎಂದು ಸುದೀಪ್ ನಟನೆಯನ್ನು ಕೊಂಡಾಡಿದರು.
‘ಕಿಂಗ್ ಕಿಚ್ಚ’ ಹೆಸರಿನ ಹಿಂದಿನ ರಹಸ್ಯವೇನು?ಸುದೀಪ್ ಅವರ ಜನಪ್ರಿಯತೆ ಅಥವಾ ಸ್ಟಾರ್ಡಮ್ಗಿಂತಲೂ ಅವರ ಮಾನವೀಯ ಗುಣಗಳು, ಸ್ವಾಭಿಮಾನ ಹಾಗೂ ವ್ಯಕ್ತಿತ್ವವೇ ಈ ಬಿರುದು ನೀಡಲು ಕಾರಣ ಎಂದು ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ.
ಸಹಾಯ ಕೇಳಿಕೊಂಡು ಬರುವವರಿಗೆ ನೆರವಾಗುವ ಗುಣ, ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸ್ವಭಾವ ಹಾಗೂ ತಮ್ಮದೇ ಆದ ನಿಲುವು ಹೊಂದಿರುವ ಸುದೀಪ್ ಅವರ ವ್ಯಕ್ತಿತ್ವದಿಂದ ಪ್ರೇರಿತರಾಗಿ ಈ ಹೆಸರನ್ನು ಆಯ್ಕೆ ಮಾಡಿರುವುದಾಗಿ ಪ್ರೇಮ್ ಹೇಳಿದ್ದಾರೆ.
ಸುದೀಪ್ ವ್ಯಕ್ತಿತ್ವವೇ ಸಿನಿಮಾಗೆ ಸ್ಫೂರ್ತಿ!‘ದಾದಾ ಆನ್ ಹಾಲಿಡೇ’ ಸಿನಿಮಾದ ಮತ್ತೊಂದು ವಿಶೇಷ ಸಂಗತಿ ಏನೆಂದರೆ, ಸುದೀಪ್ ಅವರ ನಿಜ ಜೀವನದ ಕೆಲವು ಗುಣಗಳನ್ನು ಆಧರಿಸಿ ಸಿನಿಮಾದ ಕಥೆಯನ್ನು ರೂಪಿಸಲಾಗಿದೆ ಎಂದು ಪ್ರೇಮ್ ತಿಳಿಸಿದ್ದಾರೆ.
ಹೀಗಾಗಿ ಈ ಸಿನಿಮಾದಲ್ಲಿ ಸುದೀಪ್ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.ಮಾಸ್ ಆಕ್ಷನ್ ಜೊತೆಗೆ ಹಾಸ್ಯ, ಸಂಗೀತ, ಕೌಟುಂಬಿಕ ಸಂಬಂಧಗಳು ಹಾಗೂ ಭಾವನಾತ್ಮಕ ಅಂಶಗಳನ್ನು ಒಳಗೊಂಡ ಮನರಂಜನಾತ್ಮಕ ಸಿನಿಮಾವಾಗಿ ಇದನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
ಎಂಟು ವರ್ಷಗಳ ಬಳಿಕ ಮತ್ತೆ ಒಂದಾದ ಜೋಡಿ!2018ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಸಿನಿಮಾವನ್ನು ಪ್ರೇಮ್ ನಿರ್ದೇಶಿಸಿದ್ದರು.
ಇದಾದ ಬಳಿಕ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ಇದೀಗ ಸುಮಾರು ಎಂಟು ವರ್ಷಗಳ ನಂತರ ಸುದೀಪ್ ಅವರನ್ನು ಪೂರ್ಣ ಪ್ರಮಾಣದ ನಾಯಕನನ್ನಾಗಿಸಿಕೊಂಡು ಪ್ರೇಮ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದು ಪ್ರೇಮ್ ಅವರ ನಿರ್ದೇಶನದ ಹತ್ತನೇ ಸಿನಿಮಾವಾಗಿದೆ
ಕಮಲ್ ಹಾಸನ್ಗೆ ಹೋಲಿಸಿದ ಪ್ರೇಮ್!ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸುದೀಪ್ ಅವರ ಅಭಿನಯ ಸಾಮರ್ಥ್ಯವನ್ನು ಪ್ರೇಮ್ ವಿಶೇಷವಾಗಿ ಪ್ರಶಂಸಿಸಿದ್ದಾರೆ.
ಕಮಲ್ ಹಾಸನ್ ಅವರಂತಹ ದಿಗ್ಗಜ ನಟರ ಎದುರು ಸಮರ್ಥವಾಗಿ ಅಭಿನಯಿಸಬಲ್ಲ ಪ್ರತಿಭೆ ಸುದೀಪ್ ಅವರಲ್ಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಮೇಲಿನ ಅವರ ಪ್ರೀತಿ ಮತ್ತು ಕೆಲಸದ ಮೇಲಿನ ಬದ್ಧತೆಯನ್ನೂ ಕೊಂಡಾಡಿದ್ದಾರೆ.