ಆಸ್ಕರ್ ಅಂಗಳಕ್ಕೆ ಭಾರತದ ‘ಗೊಂದಲ್’ಎಂಟ್ರಿ! 104 ಸಿನಿಮಾಗಳ ನಡುವೆ ಕುತೂಹಲ ಹೆಚ್ಚಿಸಿದ ಭಾರತದ ಸಿನಿಮಾ!
ವಿಶ್ವದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಯಾದ ಆಸ್ಕರ್ ಅಂಗಳದಲ್ಲಿ ಭಾರತ ಮತ್ತೊಮ್ಮೆ ಗಮನ ಸೆಳೆದಿದೆ. 2027ರ 99ನೇ ಅಕಾಡೆಮಿ ಪ್ರಶಸ್ತಿಗಳ ಸ್ಪರ್ಧೆಗೆ ಭಾರತದ ಅಧಿಕೃತ ಪ್ರವೇಶವಾಗಿರುವ ಮರಾಠಿ ಸಿನಿಮಾ ‘ಗೊಂದಲ್’ (Gondhal) ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದಲ್ಲಿ ಸ್ಪರ್ಧಿಸಲು ಚಿತ್ರಕ್ಕೆ ಅವಕಾಶ ಸಿಕ್ಕಿದೆ.
ಅಮೆರಿಕದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಪ್ರಕಟಿಸಿರುವ ಪಟ್ಟಿಯಲ್ಲಿ ಒಟ್ಟು 104 ಅಂತಾರಾಷ್ಟ್ರೀಯ ಸಿನಿಮಾಗಳು ಸ್ಥಾನ ಪಡೆದಿವೆ. ವಿಶೇಷವೆಂದರೆ, ಇದು ಈ ವಿಭಾಗದ ಇತಿಹಾಸದಲ್ಲೇ ದಾಖಲೆಯ ಸಂಖ್ಯೆಯಾಗಿದೆ. ಈ ಪೈಪೋಟಿಯಲ್ಲಿ ಭಾರತದ ‘ಗೊಂದಲ್’ ಸಿನಿಮಾ ಯಾವ ಹಂತದವರೆಗೆ ಮುನ್ನಡೆಯಲಿದೆ ಎಂಬ ಕುತೂಹಲ ಈಗ ಹೆಚ್ಚಾಗಿದೆ.

ನಿರ್ದೇಶಕ ಸಂತೋಷ್ ದಾವಖರ್ ನಿರ್ದೇಶನದ ‘ಗೊಂದಲ್’ ಸಿನಿಮಾ ಮಹಾರಾಷ್ಟ್ರದ ಸಾಂಪ್ರದಾಯಿಕ ಜನಪದ ಆಚರಣೆಯ ಹಿನ್ನೆಲೆಯ ಕಥೆಯನ್ನು ಹೊಂದಿದೆ. ಗ್ರಾಮೀಣ ಮಹಾರಾಷ್ಟ್ರದ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ಪ್ರೀತಿ, ವಂಚನೆ, ಕೊಲೆ ಮತ್ತು ಬದುಕುಳಿಯುವ ಹೋರಾಟದಂತಹ ಅಂಶಗಳಿವೆ.
ಇನ್ನು ಈ ಬಾರಿಯ ಆಸ್ಕರ್ ಸ್ಪರ್ಧೆಯಲ್ಲಿ ಮತ್ತೊಂದು ವಿಶೇಷ ದಾಖಲೆ ನಿರ್ಮಾಣವಾಗಿದೆ. ಅನಿಮೇಟೆಡ್ ಫೀಚರ್ ಫಿಲ್ಮ್ ವಿಭಾಗದಲ್ಲಿ ದಾಖಲೆಯ 38 ಸಿನಿಮಾಗಳು ಅರ್ಹತೆ ಪಡೆದಿವೆ. ಅದೇ ರೀತಿ ಡಾಕ್ಯುಮೆಂಟರಿ ವಿಭಾಗದಲ್ಲಿ ಬರೋಬ್ಬರಿ 190 ಸಿನಿಮಾಗಳು ಸ್ಪರ್ಧೆಯಲ್ಲಿವೆ.

ಆದರೆ, ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದ ಮಾತ್ರಕ್ಕೆ ಆಸ್ಕರ್ ಪ್ರಶಸ್ತಿ ಅಥವಾ ಅಂತಿಮ ನಾಮನಿರ್ದೇಶನ ಖಚಿತವಾಗುವುದಿಲ್ಲ. ಮುಂದಿನ ಹಂತದ ಮತದಾನದ ಬಳಿಕ ಡಿಸೆಂಬರ್ 15ರಂದು ಶಾರ್ಟ್ಲಿಸ್ಟ್ ಪ್ರಕಟವಾಗಲಿದೆ. 2027ರ ಜನವರಿ 21ರಂದು ಆಸ್ಕರ್ ನಾಮನಿರ್ದೇಶನಗಳನ್ನು ಘೋಷಿಸಲಾಗುತ್ತದೆ.
2027ರ ಮಾರ್ಚ್ 14ರಂದು 99ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೀಗ 104 ಸಿನಿಮಾಗಳ ಕಠಿಣ ಸ್ಪರ್ಧೆಯಲ್ಲಿ ಭಾರತದ ‘ಗೊಂದಲ್’ ಅಂತಿಮ 15 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾ? ಕೊನೆಗೆ ಆಸ್ಕರ್ ವೇದಿಕೆಯಲ್ಲಿ ಭಾರತದ ಕೀರ್ತಿ ಹೆಚ್ಚಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.