**ಸಾವಿರಾರು ಅಡಿ ಎತ್ತರದಲ್ಲಿ ವಿಮಾನದ ಬಾಗಿಲು ತೆರೆಯಲು ಮುಂದಾದ ಪ್ರಯಾಣಿಕ!ಆಕಾಶದಲ್ಲೇ ಹೈಡ್ರಾಮಾ; ಮುಂದೇನಾಯ್ತು ಗೊತ್ತಾ?**
**ಆಕಾಶದಲ್ಲಿ ಹಾರುತ್ತಿದ್ದ ವಿಮಾನ, ಗಮ್ಯಸ್ಥಾನ ತಲುಪುವ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರು. ಆದರೆ ಇದ್ದಕ್ಕಿದ್ದಂತೆ ಆಸನದಿಂದ ಎದ್ದ ವ್ಯಕ್ತಿಯೊಬ್ಬ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದಾನೆ! ಕ್ಷಣಾರ್ಧದಲ್ಲಿ ವಿಮಾನದೊಳಗೆ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೊನೆಗೆ ವಿಮಾನವನ್ನು ತುರ್ತಾಗಿ ಬೇರೆ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ.**
ಅಮೆರಿಕ: ವಿಮಾನ ಪ್ರಯಾಣದ ವೇಳೆ ಕೆಲವೊಮ್ಮೆ ಪ್ರಯಾಣಿಕರ ಅಶಿಸ್ತಿನ ವರ್ತನೆಯಿಂದ ಇತರರಿಗೆ ತೊಂದರೆಯಾಗುವ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಅಮೆರಿಕದಲ್ಲಿ ನಡೆದಿರುವ ಈ ಘಟನೆ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ.
ಸ್ಯಾನ್ ಡಿಯಾಗೋದಿಂದ ಚಿಕಾಗೋಗೆ ತೆರಳುತ್ತಿದ್ದ ಅಮೆರಿಕನ್ ಏರ್ಲೈನ್ಸ್ನ ಫ್ಲೈಟ್ 1494ರಲ್ಲಿ ಪ್ರಯಾಣಿಕನೊಬ್ಬ ವಿಮಾನ ಆಕಾಶದಲ್ಲಿ ಹಾರುತ್ತಿರುವಾಗಲೇ ನಿರ್ಗಮನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಈ ವೇಳೆ ಸಹ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಸಮಯಪ್ರಜ್ಞೆ ಮೆರೆದಿದ್ದಾರೆ. **ಇದ್ದಕ್ಕಿದ್ದಂತೆ ಸೀಟಿನಿಂದ ಎದ್ದ ವ್ಯಕ್ತಿ!**
ಎಲ್ಲವೂ ಸಹಜವಾಗಿಯೇ ನಡೆಯುತ್ತಿತ್ತು. ಪ್ರಯಾಣಿಕರು ತಮ್ಮ ತಮ್ಮ ಆಸನಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಇದೇ ವೇಳೆ ವ್ಯಕ್ತಿಯೊಬ್ಬ ತನ್ನ ಆಸನದಿಂದ ಎದ್ದು ವಿಮಾನದ ಮುಂಭಾಗಕ್ಕೆ ತೆರಳಿದ್ದಾನೆ.
ಆತನ ವರ್ತನೆಯನ್ನು ಗಮನಿಸಿದ ವಿಮಾನ ಸಿಬ್ಬಂದಿ ತಮ್ಮ ಆಸನಕ್ಕೆ ಮರಳುವಂತೆ ಸೂಚಿಸಿದ್ದಾರೆ. ಆದರೆ ಸಿಬ್ಬಂದಿಯ ಸೂಚನೆಯನ್ನು ಪಾಲಿಸಲು ಆತ ನಿರಾಕರಿಸಿದ್ದಾನೆ.
ಅಷ್ಟಕ್ಕೇ ಸುಮ್ಮನಾಗದ ವ್ಯಕ್ತಿ ವಿಮಾನದ ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. **ಆಕಾಶದಲ್ಲೇ ಆತಂಕ! ನೆರವಿಗೆ ಧಾವಿಸಿದ ಪ್ರಯಾಣಿಕರು**
ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಗಮನಿಸಿದ ಕೆಲವು ಪ್ರಯಾಣಿಕರು ವಿಮಾನ ಸಿಬ್ಬಂದಿಯ ನೆರವಿಗೆ ಧಾವಿಸಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿ ಪ್ರತಿರೋಧ ತೋರಿದ್ದು, ವಾಗ್ವಾದವೂ ನಡೆದಿದೆ.
ಕೊನೆಗೆ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಒಟ್ಟಾಗಿ ಆತನನ್ನು ನೆಲಕ್ಕೆ ಒತ್ತಿ ಹಿಡಿದು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಸಿಬ್ಬಂದಿ ಮತ್ತು ಪ್ರಯಾಣಿಕರ ಸಮಯಪ್ರಜ್ಞೆಯಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಿದೆ. **ವಿಮಾನದೊಳಗಿನ ವಿಡಿಯೋ ವೈರಲ್!**
ವಿಮಾನದಲ್ಲಿದ್ದ ಸೀನ್ ಬೆನೆಟ್ ಎಂಬ ಪ್ರಯಾಣಿಕರು ಈ ಘಟನೆಯನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವಿಮಾನವನ್ನು ವಶಪಡಿಸಿಕೊಳ್ಳಲು ಯಾರೋ ಪ್ರಯತ್ನಿಸಿದಂತೆ ಕಂಡುಬಂದಿದ್ದು, ಧೈರ್ಯಶಾಲಿ ಪ್ರಯಾಣಿಕರು ಆತನನ್ನು ನಿಯಂತ್ರಿಸಿದ್ದಾರೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.
ಆದರೆ ವಿಮಾನವನ್ನು ವಶಪಡಿಸಿಕೊಳ್ಳುವುದು ಆ ವ್ಯಕ್ತಿಯ ಉದ್ದೇಶವಾಗಿತ್ತೇ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ. **ಚಿಕಾಗೋಗೆ ಹೊರಟ ವಿಮಾನ ಫೀನಿಕ್ಸ್ನಲ್ಲಿ ಲ್ಯಾಂಡಿಂಗ್!**
ಘಟನೆಯ ಗಂಭೀರತೆಯನ್ನು ಪರಿಗಣಿಸಿದ ಪೈಲಟ್, ವಿಮಾನದ ಮಾರ್ಗವನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.ಚಿಕಾಗೋಗೆ ತೆರಳಬೇಕಿದ್ದ ವಿಮಾನವನ್ನು ಅರಿಜೋನಾದ ಫೀನಿಕ್ಸ್ನಲ್ಲಿರುವ ಸ್ಕೈ ಹಾರ್ಬರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಲಾಗಿದೆ.
ನವೆಂಬರ್ 26ರ ಬೆಳಗಿನ ಜಾವ ಸುಮಾರು ಒಂದು ಗಂಟೆಗೆ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ವಿಮಾನ ಇಳಿಯುತ್ತಿದ್ದಂತೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ವ್ಯಕ್ತಿಯನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ.
ಘಟನೆಯಲ್ಲಿ ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. **ಹಾರುತ್ತಿರುವ ವಿಮಾನದ ಬಾಗಿಲು ತೆರೆಯಲು ಸಾಧ್ಯವೇ?**
ಈ ಘಟನೆ ನೋಡಿದವರಿಗೆ ಸಹಜವಾಗಿಯೇ ಒಂದು ಪ್ರಶ್ನೆ ಮೂಡಬಹುದು. ಸಾವಿರಾರು ಅಡಿ ಎತ್ತರದಲ್ಲಿ ಹಾರುತ್ತಿರುವ ವಿಮಾನದ ಬಾಗಿಲನ್ನು ನಿಜಕ್ಕೂ ತೆರೆಯಲು ಸಾಧ್ಯವೇ?
ಸಾಮಾನ್ಯವಾಗಿ ವಿಮಾನವು ಹೆಚ್ಚಿನ ಎತ್ತರದಲ್ಲಿ ಹಾರುತ್ತಿರುವಾಗ ವಿಮಾನದ ಒಳಗಿನ ಮತ್ತು ಹೊರಗಿನ ವಾಯು ಒತ್ತಡದಲ್ಲಿ ವ್ಯತ್ಯಾಸವಿರುತ್ತದೆ. ಆಧುನಿಕ ಪ್ರಯಾಣಿಕ ವಿಮಾನಗಳಲ್ಲಿ ಹಲವು ಸುರಕ್ಷತಾ ವ್ಯವಸ್ಥೆಗಳೂ ಇರುತ್ತವೆ.
ಹೀಗಾಗಿ ಸಾಮಾನ್ಯ ಹಾರಾಟದ ಪರಿಸ್ಥಿತಿಯಲ್ಲಿ ವಿಮಾನದ ಪ್ರಯಾಣಿಕರ ಬಾಗಿಲನ್ನು ತೆರೆಯುವುದು ಅತ್ಯಂತ ಕಷ್ಟಕರ. ಆದರೂ ಇಂತಹ ಪ್ರಯತ್ನಗಳು ವಿಮಾನಯಾನದ ಸುರಕ್ಷತೆಗೆ ಗಂಭೀರ ತೊಂದರೆ ಉಂಟುಮಾಡಬಹುದು. **ಘಟನೆ ಬಗ್ಗೆ ಅಮೆರಿಕನ್ ಏರ್ಲೈನ್ಸ್ ಹೇಳಿದ್ದೇನು?**
ಪ್ರಯಾಣಿಕನೊಬ್ಬನ ಅಶಿಸ್ತಿನ ವರ್ತನೆಯಿಂದ ವಿಮಾನವನ್ನು ಫೀನಿಕ್ಸ್ಗೆ ತಿರುಗಿಸಲಾಗಿತ್ತು. ಅಲ್ಲಿನ ಕಾನೂನು ಜಾರಿ ಅಧಿಕಾರಿಗಳು ಆತನನ್ನು ವಿಮಾನದಿಂದ ಕೆಳಗಿಳಿಸಲು ನೆರವಾದರು. ನಂತರ ವಿಮಾನ ತನ್ನ ಗಮ್ಯಸ್ಥಾನದತ್ತ ಪ್ರಯಾಣ ಮುಂದುವರಿಸಿತು ಎಂದು ಅಮೆರಿಕನ್ ಏರ್ಲೈನ್ಸ್ ತಿಳಿಸಿದೆ.
ಬಳಿಕ ವಿಮಾನ ಚಿಕಾಗೋದ ಒ’ಹೇರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುರಕ್ಷಿತವಾಗಿ ತಲುಪಿದೆ. **ವ್ಯಕ್ತಿ ಹೀಗೆ ವರ್ತಿಸಿದ್ದೇಕೆ?**
ಅಷ್ಟಕ್ಕೂ ಆ ಪ್ರಯಾಣಿಕ ವಿಮಾನದ ಬಾಗಿಲು ತೆರೆಯಲು ಯಾಕೆ ಪ್ರಯತ್ನಿಸಿದ? ಆತನ ಉದ್ದೇಶವೇನಾಗಿತ್ತು? ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಆತನ ವಿಚಿತ್ರ ವರ್ತನೆಯ ಹಿಂದಿನ ಕಾರಣದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಒಟ್ಟಿನಲ್ಲಿ, ವಿಮಾನ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಸಹ ಪ್ರಯಾಣಿಕರ ಸಹಕಾರದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಎಲ್ಲರೂ ಸುರಕ್ಷಿತವಾಗಿ ಗಮ್ಯಸ್ಥಾನ ತಲುಪಿದ್ದಾರೆ.