ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯವನ್ನು ವಿಭಜಿಸುವ ಅಥವಾ ಹೊಸ ಆಡಳಿತ ಘಟಕಗಳನ್ನು ರಚಿಸುವ ಪ್ರಸ್ತಾಪಕ್ಕೆ ಸಿಂಧ್ ರಾಷ್ಟ್ರೀಯತಾವಾದಿ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಜನಮತಗಣನೆ ಪ್ರಸ್ತಾಪವನ್ನೂ ತಿರಸ್ಕರಿಸಿರುವ ಪಕ್ಷಗಳು, ಸರ್ಕಾರ ಯೋಜನೆಯನ್ನು ಮುಂದುವರಿಸಿದರೆ ಪ್ರಾಂತ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿವೆ.
ಕರಾಚಿಯಲ್ಲಿ ಜೆ ಆಯ್ ಸಿಂಧ್ ರಹಬರ್ ಸಮಿತಿ ಆಯೋಜಿಸಿದ್ದ ರ್ಯಾಲಿಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು. ಸಿಂಧ್ನ ಗಡಿಗಳಲ್ಲಿ ಬದಲಾವಣೆ ಮಾಡಬಾರದು ಹಾಗೂ ಜನರ ಒಪ್ಪಿಗೆಯಿಲ್ಲದೆ ಆಡಳಿತಾತ್ಮಕ ಬದಲಾವಣೆ ಹೇರಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಿಂಧ್ನ ಅಸ್ತಿತ್ವವು ಅದರ ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯನ್ನು ಆಧರಿಸಿದೆ ಎಂದು ನಾಯಕರು ಹೇಳಿದರು.

ನವೆಂಬರ್ 17ರಂದು PPP ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಕೂಡ ಬಲವಂತದ ವಿಭಜನೆ ರಕ್ತಪಾತಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದರು. ಸಂವಿಧಾನ ಮತ್ತು ಕಾನೂನಿನ ಪ್ರಕಾರ ಹೊಸ ಪ್ರಾಂತ್ಯಗಳ ರಚನೆಗೆ ಬೆಂಬಲವಿದೆ, ಆದರೆ ಬಲವಂತದ ವಿಭಜನೆಯನ್ನು ವಿರೋಧಿಸುವುದಾಗಿ ಅವರು ಸ್ಪಷ್ಟಪಡಿಸಿದ್ದರು.
