ತಿರುಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಅಸ್ತು! ನವೆಂಬರ್ 24ಕ್ಕೆ ಗ್ರೀನ್ ಸಿಗ್ನಲ್, ಆದ್ರೆ ಕಠಿಣ ಷರತ್ತುಗಳು!
ವಿವಾದದ ಬೆಟ್ಟದಲ್ಲಿ ಕಾರ್ತಿಗೈ ದೀಪಂ ಬೆಳಗಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ – ಸಾರ್ವಜನಿಕರಿಗೆ ಮಾತ್ರ ನೋ ಎಂಟ್ರಿ!
ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಗೈ ದೀಪಂ ಬೆಳಗಿಸುವ ವಿಚಾರವಾಗಿ ನಡೆಯುತ್ತಿದ್ದ ವಿವಾದಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ. ನವೆಂಬರ್ 24ರಂದು ಬೆಟ್ಟದ ಮೇಲಿರುವ ‘ದೀಪತ್ತೂನ್’ (Deepathoon) ಎಂಬ ಕಲ್ಲಿನ ಕಂಬದ ಬಳಿ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದರೆ ಈ ಅನುಮತಿಯ ಹಿಂದೆ ಹಲವು ಕಠಿಣ ಷರತ್ತುಗಳನ್ನು ವಿಧಿಸಿದೆ.
ಅಷ್ಟಕ್ಕೂ ಈ ದೀಪ ಬೆಳಗಿಸುವ ವಿಚಾರಕ್ಕೆ ವಿವಾದ ಶುರುವಾಗಿದ್ದು ಯಾಕೆ?
ತಿರುಪರಂಕುಂದ್ರಂ ಬೆಟ್ಟದಲ್ಲಿರುವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಸಾಂಪ್ರದಾಯಿಕ ದೀಪ ಬೆಳಗಿಸುವ ಸ್ಥಳದ ಬದಲಿಗೆ, ದರ್ಗಾ ಸಮೀಪದಲ್ಲಿರುವ ದೀಪತ್ತೂನ್ ಕಲ್ಲಿನ ಕಂಬದ ಬಳಿ ಕಾರ್ತಿಗೈ ದೀಪಂ ಬೆಳಗಿಸಬೇಕೆಂದು ಕೆಲವರು ಒತ್ತಾಯಿಸಿದ್ದರು. ಈ ವಿಚಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಕೂಡ ದೀಪ ಬೆಳಗಿಸಲು ಅನುಮತಿ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಇದೀಗ ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದ್ದು, ಈ ವರ್ಷದ ಕಾರ್ತಿಗೈ ದೀಪಂ ಸಂದರ್ಭದಲ್ಲಿ ಮಾತ್ರ ದೀಪತ್ತೂನ್ ಬಳಿ ದೀಪ ಬೆಳಗಿಸಲು ಅವಕಾಶ ಕಲ್ಪಿಸಿದೆ.
ಆದರೆ ದೀಪ ಬೆಳಗಿಸುವ ಕಾರ್ಯವನ್ನು ಯಾರು ಬೇಕಾದರೂ ಮಾಡುವಂತಿಲ್ಲ. ದೇವಸ್ಥಾನದ ಆಡಳಿತ ಮಂಡಳಿ ಅನುಮೋದಿಸಿದ ತಂಡ ಹಾಗೂ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸ್ಥಳಕ್ಕೆ ತೆರಳಲು ಅವಕಾಶವಿರಲಿದೆ. ಮಧುರೈ ಜಿಲ್ಲಾಧಿಕಾರಿಗಳು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ತಂಡದ ಗಾತ್ರ ಹಾಗೂ ವ್ಯವಸ್ಥೆ ನಿರ್ಧರಿಸಲಿದ್ದಾರೆ.
ಇನ್ನು ಸ್ಥಳದಲ್ಲಿ ಯಾವುದೇ ಸಾರ್ವಜನಿಕ ಸಭೆ, ಮೆರವಣಿಗೆ, ಪ್ರತಿಭಟನೆ ಅಥವಾ ಘೋಷಣೆ ಕೂಗುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಪೊಲೀಸ್ ಭದ್ರತೆಯೊಂದಿಗೆ ಅಗತ್ಯವಿದ್ದರೆ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ನೆರವನ್ನೂ ಪಡೆಯಬಹುದು ಎಂದು ತಿಳಿಸಿದೆ. ದರ್ಗಾ ಮತ್ತು ಮಸೀದಿಗೆ ಸಾರ್ವಜನಿಕರ ಕಾನೂನುಬದ್ಧ ಪ್ರವೇಶಕ್ಕೂ ಯಾವುದೇ ಅಡ್ಡಿಯಾಗಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇನ್ನೊಂದು ಪ್ರಮುಖ ಅಂಶವೆಂದರೆ, ಈ ವರ್ಷದ ದೀಪ ಬೆಳಗಿಸುವುದಕ್ಕೆ ನೀಡಿರುವ ಅನುಮತಿಯನ್ನು ಮುಂದಿನ ವರ್ಷಗಳಲ್ಲೂ ಇದೇ ರೀತಿ ದೀಪ ಬೆಳಗಿಸುವ ಹಕ್ಕು ಅಥವಾ ಸಂಪ್ರದಾಯಕ್ಕೆ ಸಾಕ್ಷಿಯಾಗಿ ಬಳಸುವಂತಿಲ್ಲ. ದೀಪತ್ತೂನ್‌ನ ಸ್ವರೂಪ, ಜಾಗದ ಮಾಲೀಕತ್ವ ಹಾಗೂ ಅಲ್ಲಿ ದೀಪ ಬೆಳಗಿಸುವುದು ಸ್ಥಾಪಿತ ಧಾರ್ಮಿಕ ಸಂಪ್ರದಾಯವೇ ಎಂಬ ವಿಚಾರಗಳ ಬಗ್ಗೆ ಸುಪ್ರೀಂ ಕೋರ್ಟ್ ಇನ್ನೂ ಅಂತಿಮ ತೀರ್ಪು ನೀಡಿಲ್ಲ.
ಈ ಪ್ರಕರಣದ ಮುಂದಿನ ವಿಚಾರಣೆ 2027ರ ಜನವರಿ ಎರಡನೇ ವಾರದಲ್ಲಿ ನಡೆಯಲಿದೆ.
ಹೀಗಾಗಿ ನವೆಂಬರ್ 24ರಂದು ತಿರುಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗುವ ಕ್ಷಣದ ಮೇಲೆ ಎಲ್ಲರ ಗಮನ ನೆಟ್ಟಿದೆ. ವಿವಾದದ ನಡುವೆ ಸುಪ್ರೀಂ ಕೋರ್ಟ್ ನೀಡಿರುವ ಈ ಮಧ್ಯಂತರ ಅನುಮತಿ ಮುಂದಿನ ಕಾನೂನು ಹೋರಾಟಕ್ಕೆ ಯಾವ ತಿರುವು ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.