ಕೇವಲ 6.86 ಸೆಕೆಂಡ್‌ನಲ್ಲಿ ವಿಶ್ವದಾಖಲೆ! 18ರ ಹರೆಯದ ಮಹಾರಾಷ್ಟ್ರದ ಯುವತಿ ಸಾಧನೆಗೆ ಫಿದಾ ಆದ ಸಿಎಂ ಫಡ್ನವೀಸ್!

ಕೇವಲ 6.86 ಸೆಕೆಂಡ್‌ನಲ್ಲಿ ವಿಶ್ವದಾಖಲೆ! 18ರ ಹರೆಯದ ಮಹಾರಾಷ್ಟ್ರದ ಯುವತಿ ಸಾಧನೆಗೆ ಫಿದಾ ಆದ ಸಿಎಂ ಫಡ್ನವೀಸ್!

51 ಕಂಬಗಳ ಕೆಳಗೆ ಸ್ಕೇಟಿಂಗ್ ಮಾಡಿ ಗಿನ್ನೆಸ್ ದಾಖಲೆ ಬರೆದ ಯುವತಿ! ತನ್ನದೇ ಹಳೆಯ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಸೃಷ್ಟಿ ಶರ್ಮಾ!

ಕೇವಲ 18 ವರ್ಷದ ಯುವತಿ. ಕಾಲಿಗೆ ರೋಲರ್ ಸ್ಕೇಟ್ಸ್ ಹಾಕಿಕೊಂಡು, ನೆಲಕ್ಕೆ ಅತಿ ಸಮೀಪವಾಗಿ ದೇಹವನ್ನು ಬಾಗಿಸಿ, ಅತ್ಯಂತ ಕಡಿಮೆ ಎತ್ತರದ ಕಂಬಗಳ ಕೆಳಗೆ ಸ್ಕೇಟಿಂಗ್ ಮಾಡುವುದು ಸಾಮಾನ್ಯ ಸಾಧನೆಯಲ್ಲ. ಆದರೆ ಮಹಾರಾಷ್ಟ್ರದ ಈ ಯುವತಿ ಅದನ್ನೇ ಸವಾಲಾಗಿ ಸ್ವೀಕರಿಸಿ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದ್ದಾಳೆ. ತನ್ನದೇ ಹಿಂದಿನ ವಿಶ್ವದಾಖಲೆಯನ್ನು ಮುರಿದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಮತ್ತೊಮ್ಮೆ ಸ್ಥಾನ ಪಡೆದಿದ್ದಾಳೆ. ಈ ಸಾಧನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ಹೌದು, ಮಹಾರಾಷ್ಟ್ರದ 18 ವರ್ಷದ ಸೃಷ್ಟಿ ಧರ್ಮೇಂದ್ರ ಶರ್ಮಾ (Shrishti Dharmendra Sharma) ಇದೀಗ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾಳೆ. ಲಿಂಬೋ ಸ್ಕೇಟಿಂಗ್‌ನಲ್ಲಿ 50 ಮೀಟರ್ ದೂರವನ್ನು ಕೇವಲ 6.86 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ತನ್ನದೇ ಹಿಂದಿನ ದಾಖಲೆಯನ್ನು ಮುರಿದಿದ್ದಾಳೆ. ಅಕ್ಟೋಬರ್ 8, 2026ರಂದು ಮಹಾರಾಷ್ಟ್ರದ ಉಮ್ರೆಡ್‌ನಲ್ಲಿ ಈ ವಿಶ್ವದಾಖಲೆಯನ್ನು ನಿರ್ಮಿಸಿದ್ದಾಳೆ.


ಏನಿದು ಸೃಷ್ಟಿ ಮಾಡಿದ ಲಿಂಬೋ ಸ್ಕೇಟಿಂಗ್ ಸಾಧನೆ?
ಲಿಂಬೋ ಸ್ಕೇಟಿಂಗ್ ಎಂದರೆ ರೋಲರ್ ಸ್ಕೇಟ್ಸ್ ಧರಿಸಿ, ದೇಹವನ್ನು ಸಾಧ್ಯವಾದಷ್ಟು ಕೆಳಕ್ಕೆ ಬಾಗಿಸಿಕೊಂಡು ಅತಿ ಕಡಿಮೆ ಎತ್ತರದಲ್ಲಿ ಇರಿಸಲಾದ ಅಡೆತಡೆಗಳ ಕೆಳಗೆ ಸ್ಕೇಟಿಂಗ್ ಮಾಡುವುದು. ಇದಕ್ಕೆ ಅದ್ಭುತ ದೇಹದ ನಮ್ಯತೆ, ಸಮತೋಲನ, ವೇಗ ಮತ್ತು ಏಕಾಗ್ರತೆ ಅಗತ್ಯ.
ಸೃಷ್ಟಿ ತನ್ನ ಈ ಸಾಹಸದ ವೇಳೆ 50 ಮೀಟರ್ ದೂರವನ್ನು ಕ್ರಮಿಸುವಾಗ ಕೆಳಕ್ಕೆ ಇಳಿಯುವ ಕಂಬಗಳ ಅಡಿಯಲ್ಲಿ ಸ್ಕೇಟಿಂಗ್ ಮಾಡಿದ್ದಾಳೆ. ಯಾವುದೇ ಅಡೆತಡೆಗೆ ತಾಗದಂತೆ ವೇಗವಾಗಿ ಸಾಗುವ ಮೂಲಕ ಕೇವಲ 6.86 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದಾಳೆ. ಈ ಮೂಲಕ ತನ್ನ ಹಿಂದಿನ ದಾಖಲೆಯನ್ನು ಹಿಂದಿಕ್ಕಿದ್ದಾಳೆ.

11ನೇ ವಯಸ್ಸಿನಲ್ಲೇ ಆರಂಭವಾಗಿತ್ತು ದಾಖಲೆಗಳ ಬೇಟೆ!
ಸೃಷ್ಟಿಗೆ ಇದು ಮೊದಲ ವಿಶ್ವದಾಖಲೆಯಲ್ಲ. ಕೇವಲ 11 ವರ್ಷದವಳಿದ್ದಾಗಲೇ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಳು. 2015ರಲ್ಲಿ 25 ಮೀಟರ್ ದೂರದಲ್ಲಿ ಕೇವಲ 17 ಸೆಂಟಿಮೀಟರ್ ಎತ್ತರದಲ್ಲಿ ಇರಿಸಲಾಗಿದ್ದ 25 ಕಂಬಗಳ ಕೆಳಗೆ ಸ್ಕೇಟಿಂಗ್ ಮಾಡಿ ದಾಖಲೆ ಬರೆದಿದ್ದಳು.
2017ರಲ್ಲಿ ಐಸ್ ಸ್ಕೇಟಿಂಗ್‌ನಲ್ಲೂ ಮತ್ತೊಂದು ದಾಖಲೆ ನಿರ್ಮಿಸಿದ್ದಳು. ಬಳಿಕ 2020 ಮತ್ತು 2021ರಲ್ಲಿ ಲಿಂಬೋ ಸ್ಕೇಟಿಂಗ್‌ನಲ್ಲಿ ತನ್ನದೇ ದಾಖಲೆಗಳನ್ನು ಮುರಿದು ಸಾಧನೆ ಮಾಡಿದ್ದಳು. ಇದೀಗ 2026ರಲ್ಲಿ ಮತ್ತೊಮ್ಮೆ ತನ್ನ ಪ್ರತಿಭೆ ಮತ್ತು ಪರಿಶ್ರಮವನ್ನು ಸಾಬೀತುಪಡಿಸಿದ್ದಾಳೆ.

Leave a Reply

Your email address will not be published. Required fields are marked *