ಮುಂಬೈ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ನಲ್ಲಿನ ವೀರ್ ಸಾವರ್ಕರ್ ಕುರಿತ ಬರಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪ್ರತಿಭಟನೆ ನಡೆಸಿದೆ.
ಶಿವಸೇನೆ ನಾಯಕರಾದ ಶೈನಾ ಎನ್ಸಿ, ಸಂಜಯ್ ನಿರುಪಮ್ ಮತ್ತು ಆನಂದ್ ದುಬೆ ಪತ್ರಿಕಾಗೋಷ್ಠಿಯಲ್ಲಿ ಪುಸ್ತಕದ ಪುಟಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು. 201 ಮತ್ತು 443ನೇ ಪುಟಗಳಲ್ಲಿನ ವಿವಾದಾತ್ಮಕ ಅಂಶಗಳನ್ನು ತೆಗೆದುಹಾಕುವಂತೆ ಪ್ರಕಾಶಕ ಹಾರ್ಪರ್ಕಾಲಿನ್ಸ್ಗೆ ಒತ್ತಾಯಿಸಿದರು.

ಸಾವರ್ಕರ್ ಅವರನ್ನು ತ್ಯಾಗ, ತಪಸ್ಸು ಮತ್ತು ಶೌರ್ಯದ ಪ್ರತೀಕ ಎಂದು ಬಣ್ಣಿಸಿದ ದುಬೆ, ಅವರ ಕುರಿತ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಸಾವರ್ಕರ್ 11 ವರ್ಷ ಸೆಲ್ಯುಲಾರ್ ಜೈಲಿನಲ್ಲಿ ಕಠಿಣ ಹಿಂಸೆ ಅನುಭವಿಸಿದ್ದರು ಎಂದು ತಿಳಿಸಿದರು.
ಸಾವರ್ಕರ್ ಅವರನ್ನು ಪದೇಪದೇ ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಅವರ ತ್ಯಾಗ ಮತ್ತು ಹೋರಾಟದ ಇತಿಹಾಸವನ್ನು ತಿಳಿದುಕೊಳ್ಳುವಂತೆ ಆಗ್ರಹಿಸಿದರು.
ಸೋನಿಯಾ ಗಾಂಧಿ ಅವರ ಆತ್ಮಕಥನ ನವೆಂಬರ್ 10ರಂದು ಬಿಡುಗಡೆಯಾಗಿದ್ದು, ನವೆಂಬರ್ 16ರಂದು ನವದೆಹಲಿಯಲ್ಲಿ ಅಧಿಕೃತ ಬಿಡುಗಡೆ ಸಮಾರಂಭ ನಡೆದಿತ್ತು.
