ಪುನೀತ್ ರಾಜ್ಕುಮಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿ ಸಂತೋಷ್ ಆನಂದ್ರಾಮ್ ಭೇಷ್ ಎನಿಸಿಕೊಂಡಿದ್ದಾರೆ. ಅದೇ ರೀತಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿ ಹೊಂಬಾಳೆ ಫಿಲ್ಮ್ಸ್ ಹೆಸರು ಮಾಡಿದೆ ಯುವ. ನಿರ್ಮಾಣ: ಹೊಂಬಾಳೆ ಫಿಲ್ಮ್ಸ್. ನಿರ್ದೇಶನ: ಸಂತೋಷ್ ಆನಂದ್ರಾಮ್. ಪಾತ್ರವರ್ಗ:, ಯುವ ರಾಜ್ಕುಮಾರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಮುಂತಾದವರು ‘ಯುವ’ ಸಿನಿಮಾ ಟ್ರೇಲರ್ ಮೂಲಕ ನಿರೀಕ್ಷೆ ಮೂಡಿಸಿತ್ತು. ಈಗ ಸಿನಿಮಾ ತೆರೆಗೆ ಬಂದಿದೆ ‘ಯುವ’ ಸಿನಿಮಾದ ಮೊದಲಾರ್ಧದಲ್ಲಿ ಯಥೇಚ್ಚವಾಗಿ ಹೊಡಿಬಡಿ ದೃಶ್ಯಗಳು ಕಾಣಿಸುತ್ತವೆ. ಕುಂತಿದ್ದಕ್ಕೆ, ನಿಂತಿದ್ದಕ್ಕೆ ಕಿರಿಕ್ ಆಗುತ್ತವೆ. ಆ ಬಳಿಕ ಶುರುವಾಗೋದು ಫೈಟಿಂಗ್. ಮೊದಲಾರ್ಧ ಬಹುತೇಕ ಕಾಲೇಜಿನಲ್ಲಿ ನಡೆಯೋ ಗ್ಯಾಂಗ್ವಾರ್ಗಳಲ್ಲೇ ಸಾಗುತ್ತದೆ. ದ್ವಿತೀಯಾರ್ಧವನ್ನು ಸಂಪೂರ್ಣವಾಗಿ ಭಾವಾನ್ಮಕವಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಓರ್ವ ತಂದೆಯ ಮಗನಾಗಿ, ಮಧ್ಯಮವರ್ಗದ ಹುಡುಗನಾಗಿ ಅವರು ಗಮನ ಸೆಳೆಯುತ್ತಾರೆ. ಡೆಲಿವರಿ ಬಾಯ್ ಆಗಿ, ಕಾಲೇಜು ಹುಡುಗನಾಗಿ ಹೀಗೆ ಹಲವು ಶೇಡ್ಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಡ್ಯಾನ್ಸ್ಗಳಲ್ಲಿ ಅವರು ಸಖತ್ ಸ್ಟೆಪ್ ಹಾಕಿದ್ದಾರೆ. ಅವರು ಭರವಸೆಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ ಯುವ ತಂದೆಯಾಗಿ ಅಚ್ಯುತ್ ಕುಮಾರ್ ನಟನೆ ಪ್ರಬುದ್ಧವಾಗಿದೆ. ನಾಯಕಿ ಪಾತ್ರದಲ್ಲಿರುವ ಸಪ್ತಮಿ ಗೌಡ ಅವರು ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸುಧಾರಾಣಿ, ಹಿತಾ ಚಂದ್ರಶೇಖರ್ ಉತ್ತಮ ನಟನೆ ತೋರಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಎಲ್ಲಿಯೂ ಕಾಂಪ್ರಮೈಸ್ ಆಗದೆ ಸಿನಿಮಾ ಅದ್ದೂರಿಯಾಗಿ ಮೂಡಿ ಬರವಂತೆ ಮಾಡಿದೆ.
ಧೂಳೆಬ್ಬಿಸಿದ ಯುವ
No Ads
Log in to write reviews