ನನ್ನ ಗೆಲ್ಲಿಸಿದ್ರೆ ಸಬ್ಸಿಡಿ ಮೂಲಕ ವಿಸ್ಕಿ, ಬಿಯರ್ ಸಿಗುತ್ತೆ! ವಿಚಿತ್ರ ಆಶ್ವಾಸನೆ ನೀಡಿದ ಲೋಕಸಭಾ ಚುನಾವಣಾ ಅಭ್ಯರ್ಥಿ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದೇ ತಡ ರಾಜಕಾರಣಿಗಳು ಮತಬೇಟೆ ಶುರುಮಾಡಿದ್ದಾರೆ. ಕೆಲವರು ಸಾರ್ವಜನಿಕ ಕಾರ್ಯಕ್ರಮ, ರ್ಯಾಲಿಯಲ್ಲಿ ಭಾಗವಹಿಸುವ ಮೂಲಕ ಪ್ರಚಾರ ಕಾರ್ಯಕೈಗೊಂಡರೆ. ಇನ್ನು ಕೆಲವರು ಆಶ್ವಾಸನೆ ಮೂಲಕ ಮತಗೆಲ್ಲಲು ಯತ್ನಿಸುತ್ತಿದ್ದಾರೆ. ಅದರಂತೆ ಇಲ್ಲೊಬ್ಬರು ಅಭ್ಯರ್ಥಿ ಓಟು ಗೆಲ್ಲಲು ಏನು ಮಾಡಿದ್ದಾರೆ ಗೊತ್ತಾ? ಮತದಾರರಿಗೆ ಅಭ್ಯರ್ಥಿ ಕೊಟ್ಟ ಆಶ್ವಾಸನೆ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಮಹಾರಾಷ್ಟ್ರ ಚಿಮುರ್ ಗ್ರಾಮದ ಸ್ವತಂತ್ರ ಅಭ್ಯರ್ಥಿ ವನಿತಾ ರಾವುತ್ ತಮ್ಮ ಭರವಸೆಯ ಮೂಲಕ ಎಲ್ಲರ ಕೆಂಗಣ್ಣಿಗೆ ಗುರುಯಾಗಿದ್ದಾರೆ. ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತದಾರ ಸಹಕರಿಸಿದರೆ ಸಬ್ಸಿಡಿ ಮೂಲಕ ವಿಸ್ಕಿ ಮತ್ತು ಬಿಯರ್ ನೀಡುವುದಾಗಿ ಭರವಸೆ ನೀಡಿದ್ದಾರೆ. ವನಿತಾ ರಾವುತ್ ಪ್ರತಿ ಹಳ್ಳಿಯಲ್ಲಿ ಬಾರ್ ತೆರೆಯುವುದಾಗಿ ಹೇಳಿದ್ದಾರೆ. ಜೊತೆಗೆ ಬಡವರಿಗೆ ಆಮದು ಮಾಡಿಕೊಳ್ಳುವ ವಿಸ್ಕಿಯನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ. ಸಂಸದರ ನಿಧಿಯಿಂದ ಈ ಸೌಲಭ್ಯ ಒದಗಿಸುತ್ತೇನೆ. ಆದರೆ ಈ ಬಾರಿ ನನ್ನನ್ನು ಬಹುಮತದಿಂದ ಗೆಲ್ಲಿಸಿಕೊಡಿ ಎಂದು ಭರವಸೆ ನೀಡಿದ್ದಾರೆ. ವನಿತಾ ರಾವುತ್ ಅಚ್ಚರಿಯ ಅಶ್ವಾಸನೆ ನೀಡಿದ್ದಲ್ಲದೆ, ಪಡಿತರ ವ್ಯವಸ್ಥೆ ಮೂಲಕ ಮದ್ಯವನ್ನು ನೀಡುತ್ತೇನೆ. ಕುಡಿಯುವವರು ಮತ್ತು ಮದ್ಯ ಮಾರಾಟಗಾರರು ಪರವಾನಗಿ ಹೊಂದಿರಬೇಕು ಎಂದು ಪ್ರಚಾರದ ವೇಳೆ ತಿಳಿಸಿದ್ದಾರೆ.
ನನ್ನ ಗೆಲ್ಲಿಸಿದ್ರೆ ಸಬ್ಸಿಡಿ ಮೂಲಕ ವಿಸ್ಕಿ, ಬಿಯರ್ ಸಿಗುತ್ತೆ!
No Ads
Log in to write reviews