ಚಿಕ್ಕಮಗಳೂರು: ಆರು ಮಂದಿ ನಕ್ಸಲರು ಶರಣಾಗತಿ ಆಗಲು ಕಾಡಿನಿಂದ ಹೊರಬಂದಿದ್ದಾರೆ.. ಸಮಾಜದ ಮುಖ್ಯವಾಹಿನಿ ಹೆಸರಲ್ಲಿ ಶರಣಾಗತಿ ಆಗುತ್ತಿದ್ದು, ಶರಣಾಗುವಂತಹ ನಕ್ಸಲರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಕೂಡ ಇದೆ.
ಕೆಟಗರಿ ಅಡಿಯಲ್ಲಿ ಪ್ಯಾಕೇಜ್ ನೀಡಲು ಸರ್ಕಾರದ ಪ್ಲಾನ್ ಮಾಡಿದೆ. A,B,C ಕೆಟಗರಿ ಅಡಿಯಲ್ಲಿ ನಕ್ಸಲರ ವಿಭಜಿಸಿ ಪ್ಯಾಕೇಜ್ ನೀಡಲಾಗುತ್ತಿದೆ. ಎರಡು ವರ್ಷದ ಬಳಿಕ ಮೂರು ಭಾಗಗಳಾಗಿ ಹಣ ನೀಡಲಾಗುತ್ತದೆ.
A ಕೆಟಗರಿ
- ರಾಜ್ಯದ ನಕ್ಸಲರಾಗಿ ಆ್ಯಕ್ಟಿವ್ ಆಗಿರಬೇಕು
- ಪ್ರಕರಣ ಇದ್ರೆ 7 ಲಕ್ಷದ 50 ಸಾವಿರ ಹಣ
- ಆಯುಧಗಳನ್ನ ಹಾಜರುಪಡಿಸಿದ್ರೆ ಹಣ
- ವ್ಯಾಪಾರಕ್ಕಾಗಿ ತರಬೇತಿಗೆ ಸೇರಿದ್ರೆ ತಿಂಗಳಿಗೆ 5000 ಹಣ
B ಕೆಟಗರಿ
- ಹೊರರಾಜ್ಯವರಾಗಿ ಆ್ಯಕ್ಟಿವ್ ಆಗಿರಬೇಕು
- ಒಂದಕ್ಕಿಂತ ಹೆಚ್ಚು ಪ್ರಕರಣ ಇದ್ರೆ 4 ಲಕ್ಷ ಹಣ
- ಆಯುಧಗಳನ್ನ ಹಾಜರುಪಡಿಸಿದ್ರೆ ಹಣ
- ವ್ಯಾಪಾರಕ್ಕಾಗಿ ತರಬೇತಿಗೆ ಸೇರಿದ್ರೆ ತಿಂಗಳಿಗೆ 5000 ಹಣ
C ಕೆಟಗರಿ
- ಎಡಪಂಥೀಯ ಭಯೋತ್ಪಾದನಾ ಚಟುಟಿಕೆ ಬೆಂಬಲಿಸುವವರು
- ನಕ್ಸಲರ ಸಂಪರ್ಕ ಹೊಂದಿ ಪ್ರಕರಣಗಳು ಇದ್ರೆ 2 ಲಕ್ಷ ಹಣ
- ಆಯುಧಗಳನ್ನ ಹಾಜರುಪಡಿಸಿದ್ರೆ ಸರ್ಕಾರದಿಂದ ಹಣ
- ವ್ಯಾಪಾರಕ್ಕಾಗಿ ತರಬೇತಿಗೆ ಸೇರಿದ್ರೆ ತಿಂಗಳಿಗೆ 5000 ಹಣ
Log in to write reviews