ಫ್ರಾನ್ಸ್‌ನ ಮಾಜಿ ಶಸ್ತ್ರಚಿಕಿತ್ಸಕನೊಬ್ಬನ ಮೇಲೆ ಸುಮಾರು 300 ಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊರಿಸಲಾಗಿದ್ದು, ಅವರಲ್ಲಿ ಹೆಚ್ಚಿನವರು ಆ ವೈದ್ಯನ ರೋಗಿಗಳಾಗಿದ್ದಾರೆ. ಕೆಲವು ತನಿಖಾ ದಾಖಲೆಗಳ ಪ್ರಕಾರ, ಆರೋಪಿ ವೈದ್ಯ ಆಸ್ಪತ್ರೆಯ ಕೊಠಡಿಗಳಲ್ಲಿ ಒಂಟಿಯಾಗಿರುವಾಗ ಹುಡುಗರು ಮತ್ತು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ತನಿಖಾಧಿಕಾರಿಗಳು ಆತನ ಮನೆಯನ್ನು ಶೋಧಿಸಿ, ಅವನ ನೋಟ್‌ಬುಕ್‌ಗಳನ್ನು ಪರಿಶೀಲಿಸಿದಾಗ, ಆರೋಪಿಯು ತನ್ನನ್ನು ಶಿಶುಕಾಮಿ ಎಂದು ಬರೆದುಕೊಂಡಿದ್ದಾನೆ, ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿನ್ನೆ (ಫೆಬ್ರವರಿ 24 ರಂದು) 74 ವರ್ಷದ ಶಸ್ತ್ರಚಿಕಿತ್ಸಕ ಲೆ ಸ್ಕೌರ್ನೆಕ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಕೆಲವು ತನಿಖಾ ದಾಖಲೆಗಳ ಪ್ರಕಾರ ವೈದ್ಯ, ಆಸ್ಪತ್ರೆಯ ಕೊಠಡಿಗಳಲ್ಲಿ ಒಂಟಿಯಾಗಿರುವಾಗ ಬಾಲಕ ಮತ್ತು ಬಾಲಕಿಯರು ಇಬ್ಬರ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಮೂರು ದಶಕಗಳಿಂದ ತಾನು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾನೆ. ನಾನು ಅಸಹ್ಯಕರ ಕೃತ್ಯಗಳನ್ನು ಎಸಗಿದ್ದೇನೆ ಎಂದು ಲೆ ಸ್ಕೌರ್ನೆಕ್ ವ್ಯಾನೆಸ್‌ನ ನ್ಯಾಯಾಲಯಕ್ಕೆ ತಿಳಿಸಿದರು. ಎಲ್ಲರೂ ಮಕ್ಕಳಾಗಿದ್ದರು.
ಈ ಗಾಯಗಳನ್ನು ಸರಿಪಡಿಸಲಾಗದು ಎಂಬುದು ನನಗೆ ತಿಳಿದಿದೆ, ನಾನು ಹಿಂದಿನ ಕಾಲಕ್ಕೆ ಹಿಂತಿರುಗಲು ಸಾಧ್ಯವಿಲ್ಲ ಆದರೆ ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಆರೋಪಿಯ ಅಪರಾಧ ಸಾಬೀತಾದರೆ 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ಕೆಲವು ಸಂತ್ರಸ್ತರಿಗೆ ದಾಳಿಗಳ ನೆನಪಿಲ್ಲ, ಆ ಸಮಯದಲ್ಲಿ ಅವರು ಪ್ರಜ್ಞಾಹೀನರಾಗಿದ್ದರು. ಈಗ ಮೂವತ್ತರ ಒಬ್ಬ ವ್ಯಕ್ತಿ 1995 ರಲ್ಲಿ ತಾನು ಚಿಕ್ಕ ಹುಡುಗನಾಗಿದ್ದಾಗಸಮಾಲೋಚನೆಯ ಸಮಯದಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಯಿತು ಎಂದು ಸಾಕ್ಷ್ಯ ಹೇಳಿದ್ದಾನೆ. ನನಗೆ ಕೆಲವೊಂದು ವಿಚಾರ ನೆನಪಿದೆ ನಾನು ಭಯಭೀತನಾಗಿದ್ದೆ ಎಂದು ವಿವರಿಸಿದ್ದಾನೆ.
ಮನೆಯಲ್ಲಿ ತನ್ನ ಲೈಂಗಿಕ ತೃಪ್ತಿಗಾಗಿ ಬಳಸುತ್ತಿದ್ದ ಗೊಂಬೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವರು ಗೊಂಬೆಗಳ ಮೇಲಿನ ತಮ್ಮ ಪ್ರೀತಿಯನ್ನು ಸಹ ಹೇಳಿಕೊಂಡಿದ್ದಾರೆ.
ಸಾಕಷ್ಟು ವರ್ಷಗಳ ಹಿಂದೆ ನನ್ನ ಪತ್ನಿ ಮೇರಿಗೆ ನನ್ನ ಬಗೆಗಿನ ವಿಚಾರ ತಿಳಿಯಿತು. 2020 ರಲ್ಲಿ, ಇಬ್ಬರು ಸೊಸೆಯಂದಿರು ಸೇರಿದಂತೆ ನಾಲ್ಕು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಸ್ಕೌರ್ನೆಕ್ ತಪ್ಪಿತಸ್ಥನೆಂದು ಸಾಬೀತಾಯಿತು ಮತ್ತು 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅವರು 1985-1986 ರ ಮಕ್ಕಳ ಮೇಲಿನ ದೌರ್ಜನ್ಯವನ್ನು ಒಪ್ಪಿಕೊಂಡಿದ್ದಾರೆ, ಕೆಲವು ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗಲಿಲ್ಲ.
Log in to write reviews