ಬಾಗಲಕೋಟೆ: ಬಾಗಲಕೋಟ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು ಇಂದು ನಾಮಪತ್ರ ಸಲ್ಲಿಸಿದರು. ದೇವಸ್ಥಾನ, ಮಠ ಹಾಗೂ ದರ್ಗಾಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಬದಾಮಿಯ ಶ್ರೀ ಬನಶಂಕರಿ ಅಮ್ಮನವರ ದೇವಾಲಯಕ್ಕೆ ಪತಿ ಶಿವಕುಮಾರ ತಾಳಂಪಲ್ಲಿ ಅವರೊಂದಿಗೆ ಭೇಟಿ ನೀಡಿದ ಅವರು ದೇವರ ದರ್ಶನ ಪಡೆದು ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಿದರು. ಬಾಗಲಕೋಟೆ ನಗರದ ಶ್ರೀ ಭರಮದೇವಿ ಜಾತ್ರಾಮಹೋತ್ಸವದ ನಿಮಿತ್ತ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀ ಲಾಲ ಸಾಬ್ ಅಜ್ಜರವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಜಿಲ್ಲೆಯ ಇಳಕಲ್ ವಿಜಯ ಮಹಾಂತೇಶ ಸಂಸ್ಥಾನ ಮಠದ ಚಿತ್ತರಗಿ ಜ್ಯೋತಿ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಗದ್ದುಗೆಗೆ ಭೇಟಿ ನೀಡಿದರು. ಇಳಕಲ್ ಸುಪ್ರಸಿದ್ಧ ಹಜರತ್ ಸೈಯದ್ ಶಹಾ ಮುರ್ತುಜಾ ಖಾದ್ರಿ ದರ್ಗಾಕ್ಕೂ ಭೇಟಿ ನೀಡಿದರು.
ದೇವಸ್ಥಾನ, ದರ್ಗಾ, ಮಠಗಳಿಗೆ ಭೇಟಿ ನೀಡಿದ ಸಂಯುಕ್ತ ಪಾಟೀಲ್
No Ads
Log in to write reviews