ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು ಇಂದು ಹಲವೆಡೆ ಭರ್ಜರಿ ಪ್ರಚಾರ ನಡೆಸಿದರು. ಬಾಗಲಕೋಟೆಯ ವಿದ್ಯಾಗಿರಿಯ ಕ್ರಾಸ್ ಹತ್ತಿರ ಮನೆಗಳಿಗೆ ತೆರಳಿ ಮತಯಾಚಿಸಿದರು. ಎಪಿಎಂಸಿಯ ತರಕಾರಿ ಹರಾಜು ಮಾರುಕಟ್ಟೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ಮುಚಖಂಡಿ ತಾಂಡದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಯುಕ್ತ ಅವರು ಮಾತನಾಡಿ, ಜನರಿಗಾಗಿ ಪ್ರಾಮಾಣಿಕವಾಗಿ ದುಡಿಯುವ ಇಚ್ಛಾಶಕ್ತಿಯಿಂದ ಸ್ಪರ್ಧಿಸಿದ್ದೇನೆ. ಜಿಲ್ಲೆಗೆ ಸಾಕಷ್ಟು ಕೈಗಾರಿಕೆಗಳು ಬರಬೇಕು. ಇಲ್ಲಿನ ಜನರಿಗೆ ಕೆಲಸ ಸಿಗಬೇಕು. ದುಡಿಯುವ ಕೈಗಳು ಬರಿದಾಗಬಾರದು. ಬಂಜಾರ ಸಮುದಾಯದವರು ಶ್ರಮ ಜೀವಿಗಳು. ಅವರಿಗೆ ಸಾಕಷ್ಟು ಸೌಲಭ್ಯಗಳು ಸಿಗಬೇಕು ಎಂದು ಹೇಳಿದರು. ಈ ಬಾರಿ ಒಂದು ಅವಕಾಶ ನೀಡಿ. ನಿಮ್ಮ ಸೇವೆ ಮಾಡುತ್ತೇನೆ. ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು. ಎಪಿಎಂಸಿ ಯಾರ್ಡ್‌ನಲ್ಲಿ ಪ್ರಚಾರ ಸಭೆ ಬಾಗಲಕೋಟೆಯ ಎಪಿಎಂಸಿಯ ತರಕಾರಿ ಹರಾಜು ಮಾರ್ಕೆಟ್ ಯಾರ್ಡ್‌ನಲ್ಲಿ ನಡೆದ ಸಭೆಯಲ್ಲಿ ಸಂಯುಕ್ತ ಪಾಟೀಲ್ ಅವರು ಭಾಗವಹಿಸಿದ್ದರು. ಈ ಸಭೆಯಲ್ಲಿ ವಿಧಾನಸಭೆ ಉಪಾಧ್ಯಕ್ಷರಾದ ಶ್ರೀ ರುದ್ರಪ್ಪ ಲಮಾಣಿ, ಮಾಜಿ ಸಚಿವರಾದ ಶ್ರೀ ಎಸ್ ಆರ್ ಪಾಟೀಲ್, ಶಾಸಕರಾದ ಶ್ರೀ ಜಿ ಟಿ ಪಾಟೀಲ್, ಶ್ರೀ ಎಚ್ ವೈ ಮೇಟಿ, ಮಾಜಿ ಸಂಸದರಾದ ಶ್ರೀ ಅಜಯ್ ಕುಮಾರ್ ಸರ್ ನಾಯಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ನಂಜಯ್ಯನಮಠ, ಅಭ್ಯರ್ಥಿ ಸಂಯುಕ್ತ ಪಾಟೀಲ್, ಪಕ್ಷದ ಮುಖಂಡರಾದ ಮಲ್ಲು ಚರಂತಿಮಠ, ಬಾಯಕ್ಕ ಮೇಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಂತೋಷ್ ಹೊಕ್ರಾಣಿ, ಸಿಕಂದರ್ ಗೊಳಸಂಗಿ ಹೊನವಾಡ, ಮಮದಾಪುರ ಸರ್, ಎಚ್ ಡಿ ಚೌಧರಿ, ವಿ ಬಿ ಚೌಧರಿ, ಆರ್ ಎಂ ಭಾಗವಾನ್, ಅಜೀಜ್ ಬಾಳೆಕಾಯಿ, ಅಲ್ತಾಫ್ ದೊಡಮನಿ ಮತ್ತಿತರರು ಉಪಸ್ಥಿತರಿದ್ದರು. ಮಳೆಯ ಸಿಂಚನದ ನಡುವೆ ಪ್ರಚಾರ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬಾಗಲಕೋಟೆಗೆ ಕಳೆದ ಹಲವಾರು ದಿನಗಳಿಂದ ವರುಣನ ಸಿಂಚನವಾಗುತ್ತಿದೆ. ಇಂದೂ ಕೂಡ ಬಾಗಲಕೋಟೆಯಲ್ಲಿ ಮಳೆಯಾಯಿತು. ಮಳೆಯ ನಡುವೆಯೂ ಸಂಯುಕ್ತ ಅವರು ಮನೆಮನೆಗೆ ಭೇಟಿ ನೀಡಿ ಪ್ರಚಾರ ನಡೆಸಿದರು. ಜನರನ್ನು ಖುದ್ದು ಮಾತನಾಡಿಸಿ ಮತ ನೀಡುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಭರ್ಜರಿ ಪ್ರಚಾರ, ಹಿರಿಯ ಮುಖಂಡರ ಸಾಥ್
No Ads
Log in to write reviews