No Ads

ರಮ್ಯಾ ಎಂಗೇಜ್ಮೆಂಟ್..? ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ

ಮನರಂಜನೆ 2025-02-12 16:10:26 331
post

ಮೋಹಕತಾರೆ ರಮ್ಯಾ ಸ್ವತಃ ಮದುವೆ ವದಂತಿ ಬಗ್ಗೆ ತೆರೆ ಎಳೆದಿದ್ದಾರೆ. ಸದ್ಯಕ್ಕೆ ಮದುವೆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ. ಕೈಯಲ್ಲಿರುವ ರಿಂಗ್ ಟ್ರೋಲ್ ಆಗಿರುವ ಬಗ್ಗೆ ನಟಿ ಮಾತನಾಡಿ, ನನ್ನ ರಿಂಗ್ ಯಾಕೆ ಟ್ರೋಲ್ ಆಗ್ತಿದೆ ಎಂದಿದ್ದಾರೆ. ನಾನು ಮದುವೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಸಿಹಿ ಊಟ ಹಾಕಿಸಬೇಕು ಅಂದರೆ ಮದುವೆನೇ ಆಗಬೇಕಿಲ್ಲ ಎಂದಿದ್ದಾರೆ.

ಇತ್ತೀಚೆಗೆ ರಕ್ಷಿತಾ ಸಹೋದರ ರಾಣಾ ಮದುವೆಗೆ ರಮ್ಯಾ ಬಂದಿದ್ದರು. ಆಗ ರಕ್ಷಿತಾಗೆ ತಮ್ಮ ಕೈಬೆರಳಿಗೆ ಧರಿಸಿದ ರಿಂಗ್ ಅನ್ನು ತೋರಿಸಿದ್ದರು. ಈ ವೇಳೆ, ರಿಂಗ್ ನೋಡಿ ರಕ್ಷಿತಾ ಸ್ಮೈಲ್ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮದುವೆ ವಿಚಾರಕ್ಕೆ ಪುಷ್ಠಿ ನೀಡಿತ್ತು.

 

No Ads
No Reviews
No Ads

Popular News

No Post Categories
Sidebar Banner
Sidebar Banner