ಚಳಿಗಾಲದಲ್ಲಿ, ಕೆಮ್ಮು ಮತ್ತು ಶೀತ ಮಾತ್ರವಲ್ಲದೆ ಇತರ ಅನೇಕ ಸಮಸ್ಯೆಗಳು ಬೇಗನೆ ದಾಳಿ ಮಾಡುತ್ತವೆ.
ಚಳಿಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಮನೆಮದ್ದು ನಮ್ಮ ಅಡುಗೆಮನೆಯಲ್ಲೇ ಇದೆ. ಅಂತಹ ಒಂದು ಅದ್ಭುತ ಸಾಮಾಗ್ರಿಯೆಂದರೆ ಲವಂಗ. ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿದರೆ ಅದರ ಶಕ್ತಿ ಇನ್ನೂ ಹೆಚ್ಚಾಗುತ್ತದೆ. ಲವಂಗ ಮತ್ತು ಬೆಲ್ಲ ತಿನ್ನುವುದರಿಂದ ಉತ್ತಮ ರುಚಿ ಸಿಗುವುದಲ್ಲದೆ, ಆರೋಗ್ಯವೂ ಚೆನ್ನಾಗಿರುತ್ತದೆ ಎನ್ನುತ್ತಾರೆ ತಜ್ಞರು. ಇದನ್ನು ತಿನ್ನುವುದರಿಂದ ಚಳಿಗಾಲದಲ್ಲಿ ಕಾಡುವ ನಾನಾ ರೋಗಗಳಿಂದ ದೇಹವನ್ನು ರಕ್ಷಿಸಬಹುದು. ತಜ್ಞರ ಪ್ರಕಾರ, ಬೆಲ್ಲ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು. ಇದನ್ನು ತಿನ್ನುವುದರಿಂದ ರಕ್ತವೂ ಶುದ್ಧವಾಗುತ್ತದೆ. ಬೆಲ್ಲ ತಿನ್ನುವುದರಿಂದ ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ. ಆದರೆ ಲವಂಗ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಉಸಿರಾಟದ ಸಮಸ್ಯೆಗಳು ದೂರವಾಗುವುದಲ್ಲದೆ, ಹಲ್ಲು ನೋವಿಗೆ ಲವಂಗ ಪ್ರಯೋಜನಕಾರಿ.
ಚಳಿಗಾಲದಲ್ಲಿ ಬೆಲ್ಲ ಮತ್ತು ಲವಂಗವನ್ನು ಒಟ್ಟಿಗೆ ತಿನ್ನುವುದರಿಂದಾಗುವ ಪ್ರಯೋಜನಗಳು
ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ
ಶೀತ ಮತ್ತು ಕೆಮ್ಮಿನಿಂದ ಪರಿಹಾರ
ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ
ನೋವು ನಿವಾರಿಸುತ್ತದೆ
ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ
ಬಾಯಿ ದುರ್ವಾಸನೆಯನ್ನು ನಿವಾರಿಸುತ್ತದೆ
ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ
ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ
Log in to write reviews