ಈಗಾಗಲೇ ಕಿರುತೆರೆಯಲ್ಲಿ ಹೊಸ, ಹೊಸ ಬಗೆಯ ವಿಭಿನ್ನ ಕಥೆಗಳುಳ್ಳ ಧಾರಾವಾಹಿ ರೂಪ ಪಡೆದುಕೊಂಡಿವೆ. ವೀಕ್ಷಕರು ಕೂಡ ಇಷ್ಟಪಟ್ಟು ಸೀರಿಯಲ್ಗಳನ್ನ ನೋಡುತ್ತಿದ್ದಾರೆ. ನಿಜ ಹೇಳುವುದಾದ್ರೆ ಸಿನಿಮಾಗಳಿಗಿಂತ ಹೆಚ್ಚು ಕಲಾವಿದರು ವೀಕ್ಷಕರಿಗೆ ಹತ್ತಿರ ಆಗೋದು ಸೀರಿಯಲ್ ಮೂಲಕವೇ. ಬೇಗ ಜನಕ್ಕೆ ಕನೆಕ್ಟ್ ಆಗೋ ಅದ್ಭುತವಾದ ಪ್ಲಾಟ್ ಫಾರ್ಮ್ ಧಾರಾವಾಹಿ. ಚಂದನವನದ ಬ್ಯೂಟಿ ಹರಿಪ್ರಿಯಾ ಸೀರಿಯಲ್ಗೆ ಎಂಟ್ರಿ ಕೊಡುತ್ತಿದ್ದಾರೆ. ಸಾಮಾನ್ಯವಾಗಿ ಕಲಾವಿದರು ಸೀರಿಯಲ್ನಿಂದ ಸಿನಿಮಾಗೆ ಎಂಟ್ರಿ ಕೊಟ್ಟಿದ್ದನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಬೆಳ್ಳಿತೆರೆಯಿಂದ ಕಿರುತೆರೆ ಲೋಕಕ್ಕೆ ಬರುವುದು ಅಚ್ಚರಿಯ ವಿಚಾರ. ಅದರಲ್ಲೂ ಸ್ಟಾರ್ ನಟ ನಟಿಯರೇ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಟ್ಟರೆ ಹೇಗಿರುತ್ತೆ. ಇದೀಗ ಸ್ಯಾಂಡಲ್ವುಡ್ ಖ್ಯಾತ ನಟಿ ಹರಿಪ್ರಿಯಾ ಸೀರಿಯಲ್ಗೆ ಬರ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಹೌದು, ಕಲಾವಿದರಿಗೆ ಯಾವ ಮಾಧ್ಯಮ ಆದ್ರೇ ಏನೂ ಉತ್ತಮ ಪಾತ್ರ ಸಿಕ್ಕಿದ್ದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ ಅನ್ಸುತ್ತೆ. ಸದ್ಯ ಅಂತಹದ್ದೇ ಒಂದು ಪವರ್ಫುಲ್ ಪಾತ್ರವನ್ನ ನಿಭಾಯಿಸಲಿದ್ದಾರೆ ನಟಿ ಹರಿಪ್ರಿಯಾ. ಅಹನಾ ಅಗ್ನಿಹೋತ್ರಿ ಎಂಬ ಹೊಸ ಸೀರಿಯಲ್ಗೆ ನಾಯಕಿ ಆಗಿ ಬಣ್ಣ ಹಚ್ಚಿದ್ದಾರೆ. ಖಡಕ್ ಡೈಲಾಗ್, ಖದರ್ ಆಗಿರೋ ಲಾಯರ್ ಪಾತ್ರ ಅಹನಾ. ಡಿಫ್ರೆಂಟ್ ಸ್ಟೋರಿ ಲೈನ್ ಇದ್ದು, ಅಹನಾ ಪಾತ್ರದ ಮೂಲಕ ಹರಿಪ್ರಿಯಾ ಸೀರಿಯಲ್ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು, ಈ ಧಾರಾವಾಹಿ ಸ್ಟಾರ್ ಜಲ್ಸಾ ವಾಹಿನಿಯ ಬೆಂಗಾಲಿ ಭಾಷೆಯ ರಿಮೇಕ್ ಕಥೆ ಆಗಿದ್ದು, ಗೀತಾ ಎಲ್ಎಲ್ಬಿ ಎಂಬ ಟೈಟಲ್ನೊಂದಿಗೆ ಯಶಸ್ವಿಯಾಗಿ ಬೆಂಗಾಲಿ ಪ್ರೇಕ್ಷಕರನ್ನ ರಂಜಿಸುತ್ತಿದೆ. ಅದೇ ಕಥೆಯನ್ನ ಕನ್ನಡದಲ್ಲಿ ಅಹನಾ ಅಗ್ನಿಹೋತ್ರಿ ಎಂಬ ಹೆಸರಿನಲ್ಲಿ ತರಲಾಗುತ್ತಿದೆ. ಸ್ಟಾರ್ ನಟಿ ಹರಿಪ್ರಿಯಾ ಅವರಿಗೆ ನಾಯಕರಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕೂತಹಲವಿದ್ದು, ಅಹನಾ ವೀಕ್ಷಕರ ಮನಸ್ಸು ಗೆಲುವುದರಲ್ಲಿ ಡೌಟ್ ಇಲ್ಲ ಅನಿಸುತ್ತದೆ. ಈಗಾಗಲೇ ನಮ್ಮ ಲಚ್ಚಿ ಸೀರಿಯಲ್ ಮುಕ್ತಾಯವಾಗಿದ್ದು, ಅದೇ ಸ್ಲಾಟ್ನಲ್ಲಿ ಅಹನಾ ಅಗ್ನಿಹೋತ್ರಿ ಸೀರಿಯಲ್ ತರೋ ಪ್ಲ್ಯಾನ್ ನಡೆಯುತ್ತಿರಬಹುದು. ಒಟ್ಟಿನಲ್ಲಿ ನಟಿ ಹರಿಪ್ರಿಯಾ ಅವರು ಶೀಘ್ರದಲ್ಲೇ ಅಹನಾ ಆಗಿ ಪ್ರತಿದಿನ ನಿಮ್ಮ ಮನೆಗೆ ಬರಲಿದ್ದಾರೆ.
ನಟಿ ಹರಿಪ್ರಿಯ ಬೆಳ್ಳಿತೆರೆಯಿಂದ ಕಿರುತೆರೆಗೆ ಎಂಟ್ರಿ
No Ads
Log in to write reviews