ಇಡ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಆಹಾರ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಪರೀಕ್ಷೆಯಿಂದ ತಿಳಿದು ಬಂದಿದೆ. ಇಡ್ಲಿ ಗುಣಮಟ್ಟ ಪರೀಕ್ಷೆಯಲ್ಲಿ ಈ ವಿಚಾರ ಬಹಿರಂಗಗೊಂಡಿದ್ದು ಇಡ್ಲಿ ಪ್ರಿಯರು ಶಾಕ್ ಆಗಿದ್ದಾರೆ.
ಬಹುತೇಕ ಜನ ಬೆಳಗಿನ ತಿಂಡಿಗೆ ಇಂಡ್ಲಿಯನ್ನೇ ತಿನ್ನುತ್ತಾರೆ. ಆದರೆ ಈ ಇಡ್ಲಿಯಿಂದ ಕ್ಯಾನ್ಸರ್ ಬರುತ್ತದೆ ಎಂದು ಆಹಾರ ಇಲಾಖೆ ಹೇಳಿದೆ. ಇತ್ತೀಚೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಆಹಾರ ಇಲಾಖೆ ಜಂಟಿಯಾಗಿ ಬೆಂಗಳೂರಿನ ವಿವಿದೆಡೆ ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿತು. 15 ದಿನಗಳ ಕಾಲ ದಾಳಿ ಮಾಡಿ 500 ಇಡ್ಲಿ ಸ್ಯಾಂಪಲ್ಸ್ ಸಂಗ್ರಹಿಸಲಾಗಿತ್ತು. ಇದರಲ್ಲಿ 35ಕ್ಕೂ ಹೆಚ್ಚು ಇಡ್ಲಿ ಡೇಂಜರ್ ಎಂದು ವರದಿ ಬಂದಿದೆ. ಅಲ್ಲದೆ ಈ ಇಡ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇಡ್ಲಿ ತಯಾರಿಸಲು ತಯಾರಕರು ಪ್ಲ್ಯಾಸ್ಟಿಕ್ ಹಾಗೂ ಬಟ್ಟೆಗಳನ್ನು ಬಳಸುತ್ತಾರೆ. ಇದರ ಬಳಕೆಯಿಂದಾಗಿ ಇಡ್ಲಿಯಲ್ಲಿ ಕ್ಯಾನ್ಸರ್ ಅಂಶ ಸೇರಿಕೊಳ್ಳುತ್ತದೆ ಎಂದು ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಇದರಿಂದಾಗಿ ಹಲವೆಡೆ ತಯಾರಾಗುವ ಇಡ್ಲಿಗಳಲ್ಲಿ ಕ್ಯಾನ್ಸರ್ ಹರಡುವ ಅಂಶ ಪತ್ತೆಯಾಗಿದೆ. ಇದು ಸೇವನೆಗೆ ಯೋಗ್ಯವಲ್ಲ, ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವುದು ಮಾತ್ರವಲ್ಲದೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವರದಿಯಿಂದ ತಿಳಿದು ಬಂದಿದೆ.
ಬೆಂಗಳೂರಿನ ಐದು ಕಡೆ ಈ ಇಡ್ಲಿ ಸ್ಯಾಂಪಲ್ಸ್ ಅನ್ನು ತೆಗೆದುಕೊಳ್ಳಲಾಗಿತ್ತು. ಪರೀಕ್ಷೆಯ ಬಳಿಕ ಇದೀಗ ಈ ಇಡ್ಲಿ ಸೇವನೆಗೆ ಯೋಗ್ಯವಲ್ಲವೆಂದು ಪರೀಕ್ಷಾ ವರದಿ ಬಂದಿದೆ.
500 ಇಡ್ಲಿ ಸ್ಯಾಂಪಲ್ಸ್ ನಲ್ಲಿ ಇನ್ನೂ 250ಕ್ಕೂ ಹೆಚ್ಚು ಇಡ್ಲಿಯ ವರದಿ ಬರಬೇಕಿದೆ. ಹೀಗಾಗಿ ಸಂಪೂರ್ಣ ವರದಿ ಬಂದ ಬಳಿಕ ಈ ವರದಿಯನ್ನು ಸರ್ಕಾರಕ್ಕೆ ಆಹಾರ ಇಲಾಖೆಯ ಅಧಿಕಾರಿಗಳು ನೀಡಲಿದ್ದಾರೆ. ಆಗ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಗಳೊಂದಿಗೆ ಜನರಿಗೆ ಎಚ್ಚರಿಕೆ ನೀಡಲಿದೆ. ಹೀಗಾಗಿ ಸಂಪೂರ್ಣ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ.
ಮನೆಯಲ್ಲಿ ಶುಚಿಯಾಗಿ ಇಡ್ಲಿ ತಯಾರಿಸುವುದರಿಂದ ಯಾವುದೇ ರೀತಿಯಿಂದಲೂ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಆದರೆ ಬೀದಿ ಬದಿ, ಫುಡ್ ಸ್ಟ್ರೀಟ್ ಹಾಗೂ ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಸಲು ಬಳಸುವ ಪೇಪರ್ ಹಾಗೂ ಬಟ್ಟೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
ತ್ತೀಚೆಗೆ ಕಬಾಬ್, ಗೋಬಿ, ಪಾನಿಪೂರಿ ಗುಣಮಟ್ಟವನ್ನು ಪರಿಶೀಲನೆ ಮಾಡಿ ಆಹಾರ ಮತ್ತು ಗುಣಮಟ್ಟ ಇಲಾಖೆ ಕಲಬೆರಕೆ ಮಾಡಲಾಗಿದೆ ಎಂದು ವರದಿ ನೀಡಿತ್ತು. ಇದೀಗ ಇಡ್ಲಿ ಸರದಿ ಬಂದಿದೆ. ಕೆಲ ಕಡೆ ಇಡ್ಲಿ ತಯಾರಕರು ಬಟ್ಟೆ ಹಾಗೂ ಪೇಪರ್ ಬಳಕೆ ಮಾಡಿ ಇಡ್ಲಿ ತಯಾರಿಸುತ್ತಿರುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ಈ ಬಗ್ಗೆ ಜಾಗರೂಕತೆ ಮೂಡಿಸಲು ಎಲ್ಲಾ ವರದಿ ಬರಲು ಇಲಾಖೆಯ ಅಧಿಕಾರಿಗಳು ಕಾಯುತ್ತಿದ್ದಾರೆ.
ಇಡ್ಲಿ ತಿಂದ್ರೆ ಬರುತ್ತೆ ಡೆಡ್ಲಿ ಕ್ಯಾನ್ಸರ್; ತಜ್ಞರ ವಾರ್ನಿಂಗ್

No Ads
Log in to write reviews