ಕುಡಿದ ಮತ್ತಿನಲ್ಲಿ ಮಸಣಶೆಟ್ಟಿ ಎಂಬ ಯುವಕ ಹೈಟೆನ್ಷನ್ ವಿದ್ಯುತ್ ಕಂಬ ಏರಿ ಪ್ರಾಣಬಿಟ್ಟ ದಾರುಣ ಘಟನೆ ಕೊಳ್ಳೇಗಾಲ ತಾಲೂಕಿನ ಟಿ.ಸಿ.ಹುಂಡಿ ಬಳಿ ನಡೆದಿದೆ. ವಿದ್ಯುತ್ ಕಂಬದಿಂದ ಇಳಿಯುವಾಗ ವೈರ್ ತಗುಲಿ ಮಸಣಶೆಟ್ಟಿ ಸಾವಿಗೀಡಾಗಿದ್ದಾನೆ. ವಿದ್ಯುತ್ ಕಂಬ ಏರಿದ್ದನ್ನು ನೋಡಿ ಅಲ್ಲಿಗೆ ಧಾವಿಸಿದ್ದ ಸ್ಥಳೀಯರು ಕಂಬದಿಂದ ಕೆಳಗಿಳಿಯುವಂತೆ ಒತ್ತಾಯಿಸಿದ್ದರು. ಆಗ ಆತ ಇಳಿಯಲು ಮುಂದಾಗಿದ್ದಾನೆ. ಇಳಿಯುವ ವೇಳೆ ವಿದ್ಯುತ್ ತಂತಿ ತಗುಲಿ ಮಸಣಶೆಟ್ಟಿ ಸಾವಿಗೀಡಾಗಿದ್ದಾನೆ.
ಕುಡಿದ ಮತ್ತಲ್ಲಿ ಹೈಟೆನ್ಷನ್ ವಿದ್ಯುತ್ ಕಂಬ ಏರಿದ; ವೈರ್ ತಗುಲಿ ಪ್ರಾಣಬಿಟ್ಟ

No Ads
Log in to write reviews