ಕನ್ನಡತಿ ಮೂಲಕ ಕಿರುತೆರೆಯ ಸೂಪರ್ ಸ್ಟಾರ್ ಆಗಿ ಮಿಂಚಿದವ್ರು ನಟ ಕಿರಣ್ ರಾಜ್. ಸಾಲು ಸಾಲು ಸಿನಿಮಾಗಳ ಆಫರ್ ನಡುವೆಯೂ ಡಾಕ್ಟರ್ ಕರ್ಣ ಆಗಿ ಟಿವಿ ಪರೆದೆ ಮೇಲೆ ಮಿಂಚೋಕೆ ಮತ್ತೇ ಬರ್ತಿದ್ದಾರೆ. ಮಹಿಳಾ ಪ್ರಧಾನ ಕಥೆಗಳೇ ಹೆಚ್ಚು. ಧಾರಾವಾಹಿ ಟೈಟಲ್ ಕೂಡ ನಾಯಕಿಯ ಮೂಲಕ ಶುರುವಾಗ್ತಿರುತ್ತೆ. ಎಲ್ಲೋ ಬೆರಳಿಣಿಕೆಯಷ್ಟು ನಾಯಕನನ್ನ ಒಳಗೊಂಡ ಶೀರ್ಷಿಕೆಗಳು ಬರುತ್ತೆ. ಕರ್ಣ ಟೋಟಲಿ ವಿಭಿನ್ನ ಧಾರಾವಾಹಿ. ನಾಯಕನ ಪಾತ್ರ ಹಲವು ಆಯಾಮಗಳಲ್ಲಿ ಸಾಗುತ್ತೆ. ತೂಕ ಇರೋ ಪಾತ್ರ. ಸದ್ಯ ಕಿರಣ್ಗೆ ನಾಯಕಿ ಆಗೋರು ಯಾರು ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಕರ್ಣ ಪ್ರೋಮೋ ರಿಲೀಸ್ ಆಗುತ್ತಿದ್ದಂತೆ, ಕಿರಣ್ ರಾಜ್ ಅವರಿಗೆ ಶುಭಾಶಯಗಳ ಮಾಹಾಪೂರವೇ ಹರಿದು ಬಂದಿದೆ. ಜೊತೆಗೆ ಇವರಿಗೆ ನಾಯಕಿ ಯಾರಾಗ್ತಾರೆ? ಅವರಾ? ಇವರಾ? ಅನ್ನೋ ಚರ್ಚೆಗಳು ಕೂಡ ಶುರುವಾಗಿತ್ತು. ಅದರಲ್ಲೂ ಮುಖ್ಯವಾಗಿ ಕೇಳಿ ಬಂದಿರೋ ಹೆಸರುಗಳು ರಂಜಿನಿ ರಾಘವನ್, ಮೋಕ್ಷಿತಾ ಪೈ ಹಾಗೂ ಭವ್ಯಾ ಗೌಡ.
ಕಿರಣ್ ಫ್ಯಾನ್ಸ್ ಸೇರಿದಂತೆ ಮೂವರು ನಾಯಕಿರ ಅಭಿಮಾನಿಗಳೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಮಾಡಿದ್ರು. ಸದ್ಯ ಫೈನಲಿ ನಾಯಕಿ ಯಾರು ಅನ್ನೋದು ರಿವೀಲ್ ಆಗಿದೆ. ಅವ್ರು ಬೇರೆ ಯಾರು ಅಲ್ಲ, ಅಭಿಮಾನಿಗಳ ಆಶಯಂತೆ ಎಂಟ್ರಿ ಕೊಡ್ತಿದ್ದಾರೆ ಭವ್ಯಾ ಗೌಡ.
ಹೌದು, ಕರ್ಣ ಧಾರಾವಾಹಿಯಲ್ಲಿ ಇಬ್ಬರೂ ನಾಯಕಿಯರು ಇರಲಿದ್ದಾರೆ. ಅವರಲ್ಲಿ ಭವ್ಯಾ ಗೌಡ ಕೂಡ ಒಬ್ರು. ಕಿರಣ್ ರಾಜ್ಗೆ ಜೋಡಿ ಆಗಿ ಭವ್ಯಾ ಅಭಿನಯಿಸಲಿದ್ದಾರೆ. ಇದು ಪಕ್ಕಾ ಕನ್ಫರ್ಮ್ ಮಾಹಿತಿ ಇದಾಗಿದೆ. ಈ ಹಿಂದೆ ಹೊಸ ಹುಡುಗಿರನ್ನ ಆಯ್ಕೆ ಮಾಡಿಕೊಳ್ಳಲಾಗಿತ್ತು. ಎಲ್ಲಾ ಫೈನಲ್ ಕೂಡ ಆಗಿತ್ತಂತೆ ಆದ್ರೇ ಕೊನೆ ಕ್ಷಣದಲ್ಲಿ ಭವ್ಯ ಗೌಡ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರೂ ನಾಯಕಿಯರು ಬದಲಾಗಿದ್ದಾರೆ. ಮತ್ತೋರ್ವ ನಾಯಕಿ ಯಾರು ಎಂಬ ಕುತೂಹಲ ಹೆಚ್ಚಿದೆ. ಸದ್ಯ ಟ್ರೆಂಡಿಂಗ್ನಲ್ಲಿರೋ ನಟಿಯನ್ನೇ ಕರೆತರುವ ಪ್ಲಾನ್ನಲ್ಲಿದೆಯಂತೆ ಸೀರಿಯಲ್ ತಂಡ. ಒಂದು ಮೂಲದ ಪ್ರಕಾರ ಮೋಕ್ಷಿತಾ ಪೈ ಎಂದು ಹೇಳಲಾಗ್ತಿದೆ.
ಈ ಹಿಂದೆ ಜೀ ಕನ್ನಡದಲ್ಲಿ ಪಾರು ಮಾಡಿದ್ರು. ಮತ್ತೊಮ್ಮೆ ಜೀ ವಾಹಿನಿಯಲ್ಲಿಯೇ ಮಿಂಚೋಕೆ ಸಜ್ಜಾಗಿದ್ದಾರೆ ಎಂಬ ಮಾತು ಕೇಳಿಬರ್ತಿದೆ. ಕರ್ಣ ಧಾರಾವಾಹಿ ನಿರ್ಮಾಣ ಮಾಡ್ತಿರೋದು ಜನಪ್ರಿಯ ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡು. ಫ್ಯಾನ್ಸ್ಗಳ ಅಭಿಲಾಶೆಯಂತೆ ಸದ್ಯದ ಪಾಪ್ಯೂಲರ್ ನಟಿಯರನ್ನ ಕರ್ಣನಿಗೆ ಜೋಡಿಯಾಗಿ ಆಯ್ಕೆ ಮಾಡಿದ್ದಾರೆ. ಕರ್ಣ ತೆರೆಗೆ ಬರೋದು ಯಾವಾಗ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಇದೇ ತಿಂಗಳು ಕೊನೆ ವಾರದಲ್ಲಿ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಪ್ರೈಮ್ ಸ್ಲಾಟ್ನಲ್ಲಿ ಕರ್ಣ ಮನೆ ಮನೆಗೂ ಕಾಲಿಡ್ತಿದ್ದಾನೆ. ಒಟ್ಟಾರೆಯಾಗಿ ದೊಡ್ಡ ತಾರಾಬಳಗ ಸ್ಟಾರ್ ನಿರ್ಮಾಪಕಿ, ಸ್ಟಾರ್ ನಟ-ನಟಿಯರು ಇರೋದ್ರಿಂದ ಕರ್ಣನ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ
Log in to write reviews