No Ads

ಸೀರಿಯಲ್ನಲ್ಲಿ ಮದುಮಗನಾಗಿದ್ದ ಹೀರೋಗೆ ರಿಯಲ್ ಮದುವೆ ಫಿಕ್ಸ್ ; ಕೀರ್ತಿ, ಲಕ್ಷ್ಮೀಯಿಂದ ರಿಲೀಫ್.

ಮನರಂಜನೆ 2025-04-04 16:38:39 182
post

ಇಷ್ಟು ದಿನ ಸೀರಿಯಲ್​ನಲ್ಲಿ ಮದುಮಗನಾಗಿ ಮಿಂಚುತ್ತಿದ್ದ ಹೀರೋ ಈಗ ರಿಯಲ್​ ಲೈಫ್​ನಲ್ಲಿ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಈಗ ಮದುವೆಗೆ ಡೇಟು.. ಟೈಮೂ.. ಫಿಕ್ಸ್ ಆಗಿದೆ. ಶಮಂತ್​ ಧಾರಾವಾಹಿ ಪ್ರಿಯರಿಗೆ ಮುದ್ದಿನ ವೈಷ್ಣವ್​. ಮ್ಯೂಜಿಕ್​ ಲವರ್ಸ್​ಗೆ ಬ್ರೋ ಗೌಡ. ಮೇಘನಾಗೆ ಲವರ್ ಬಾಯ್​.. ಮಿಸ್ಟರ್​ ಪರ್ಫೆಕ್ಟ್​. ಈ ವರ್ಷ ಶಮಂತ್​ಗೆ ಲಕ್ಕಿ. ಹಲವು ಒಳ್ಳೊಳ್ಳೆ ಕೆಲಸಗಳು ಆಗ್ತಿವೆ. ಇತ್ತೀಚಿಗೆ ಹೊಸ ಮ್ಯೂಜಿಕ್​ ಸ್ಟುಡಿಯೋ ಓಪನ್​ ಮಾಡಿದ್ದಾರೆ. ಸಿನಿಮಾಗಳಿಗೆ ಸೈನ್​ ಮಾಡಿದ್ದಾರೆ. ಜೊತೆಗೆ ಮದುವೆ ಖುಷಿ ಸಂಭ್ರಮ.

ಪ್ರೀತಿಸಿದ ಹುಡುಗಿಯನ್ನು ಮದುವೆ ಆಗ್ತಿರೋದು ದುಪ್ಪಟ್ಟು ಸಡಗರ ತಂದಿದೆ. ಬಹುಕಾಲದ ಗೆಳತಿ ಮೇಕಪ್​ ಆರ್ಟಿಸ್ಟ್​ ಮೇಘನಾ ಕೈ ಹಿಡಿಯುತ್ತಿದ್ದಾರೆ ಶಮಂತ್​. ಬಿಗ್​ ಬಾಸ್​ ಹೋಗೋಕು ಮೊದಲೇ ಇವರ ಲವ್​ ಸ್ಟೋರಿ ಶುರುವಾಗಿತ್ತು. ಇನ್​ಫ್ಯಾಕ್ಟ್​ ಬಿಗ್​ ಬಾಸ್​ನಲ್ಲಿ ಶಮಂತ್​ ಧರಿಸುತ್ತಿದ್ದ ಪ್ರತಿ ಕಾಸ್ಟ್ಯೂಮ್​ನಲ್ಲೂ ಮೇಘನಾ ಕೈಚಳಕ ಇತ್ತು. ಅವರ ಸೋಷಿಯಲ್​ ಮೀಡಿಯಾ ಪೇಜ್​ಗಳನ್ನು ಮೇಘನಾ ಅವರೇ ಹ್ಯಾಂಡಲ್​​ ಮಾಡ್ತಿದ್ರು. ಪ್ರತಿಯೊಂದು ಹೆಜ್ಜೆಯಲ್ಲೂ ಮೇಘನಾ ಶಮಂತ್​ಗೆ ಸಾಥ್​ ಕೊಟ್ಟಿದ್ದಾರೆ.

ಯಶಸ್ಸಿ ಪುರುಷನ ಹಿಂದೆ ಮಹಿಳೆ ಇರ್ತಾರಂತೆ. ಶಮಂತ್​ ಸಕ್ಸಸ್​ ಹಿಂದಿನ ಶಕ್ತಿ ಗೆಳತಿ ಪ್ರಿಯತಮೆ ಮೇಘನಾ.
ಈ ಜೋಡಿ ಪ್ರೀತಿಗೆ ಮೇ ತಿಂಗಳಲ್ಲಿ ಮದುವೆ ಮುದ್ರೆ ಬಿಳುತ್ತಿದೆ. ಹೌದು, ಗುರುಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮೇ 21ರಂದು ಬೆಂಗಳೂರಿನ ಜೆ.ಪಿ ನಗರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಮೇಘನಾ-ಶಮಂತ್​. ಮೇಘನಾ ಮರಾಠಿ ಕುಟುಂಬದ ಹುಡುಗಿ, ಶಮಂತ್ ಪಕ್ಕಾ ಗೌಡ್ರ ಹುಡುಗ. ಹೀಗಾಗಿ ಎರಡೂ ಸಂಪ್ರದಾಯದಲ್ಲಿ ಮದುವೆಯ ಶುಭ ಕಾರ್ಯಗಳು ಜರುಗಲಿವೆ.

 

No Ads
No Reviews
No Ads

Popular News

No Post Categories
Sidebar Banner
Sidebar Banner