ಧಾರವಾಡ, ಫೆಬ್ರವರಿ 10: ಹಣ ನೋಡಿದರೆ ಹೆಣ ಬಾಯಿ ಬಿಡುತ್ತದೆ ಎನ್ನುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು ಹೆಂಡತಿ ಡಾಬಾ ಬಂತು ಊಟ ಮಾಡೋಣ ಎನ್ನುತ್ತಿದ್ದಂತೆ ಸತ್ತಿದ್ದಾನೆ ಎನ್ನಲಾದ ವ್ಯಕ್ತಿ ಎದ್ದು ಕುಳಿತಿದ್ದಾನೆ. ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರನ್ನು ಊರಿಗೆ ಕರೆ ತರುವಾಗ ಕುಟುಂಬಸ್ಥರು ಗೋಳಾಡುತ್ತ ಅಳುತ್ತಿರುವಾಗ ಒಂದೇ ಒಂದು ಮಾತಿಗೆ ಆ ವ್ಯಕ್ತಿ ಬದುಕಿದ ಸಂಗತಿ ನಿಜಕ್ಕೂ ಆಶ್ಚರ್ಯ ತಂದಿದೆ.
ಈ ಘಟನೆ ಧಾರವಾಡದಲ್ಲಿ ನಡೆದಿದ್ದು, ಡಾಬಾ ಹೆಸರು ಕೇಳುತ್ತಿದ್ದಂತೆ ವ್ಯಕ್ತಿ ಎದ್ದು ಕುಳಿತ ಸ್ಟೋರಿಯ ಸಂಪೂರ್ಣ ವಿವರ ಇಲ್ಲಿದೆ. ಹಾವೇರಿ ಜಿಲ್ಲೆಯ ಬಂಕಾಪುರ 45 ವರ್ಷದ ಮಂಜುನಾಥ ಗುಡಿಮನಿ ಉರ್ಫ ಮಾಸ್ತರ್ ಎಂಬುವರು ಮೂರು ನಾಲ್ಕು ದಿನದಿಂದ ಅನಾರೋಗ್ಯದಿಂದಾಗಿ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಭಾನುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ 3-4 ಗಂಟೆ ಮಂಜುನಾಥ ಉಸಿರಾಡದ ಕಾರಣ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಈ ವೇಳೆ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಬಳಿಕ ಅವರ ಪತ್ನಿ ಶೀಲಾ ಹಾಗೂ ಸಂಬಂಧಿಕರು ಮೃತದೇಹ ಎಂದುಕೊಂಡು ಮಂಜುನಾಥ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಬಂಕಾಪುರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಊರು ಹತ್ತಿರ ಬರುತ್ತಿದ್ದಂತೆ ಆಶ್ಚರ್ಯಕರವಾದ ಘಟನೆ ನಡೆದಿದ್ದು, ಪತ್ನಿ ಶೀಲಾ 'ಡಾಬಾ ಬಂತು ನೋಡು ಊಟ ಮಾಡುತ್ತೀಯಾ?' ಎಂದು ಗೋಳಾಡಿ ಕಣ್ಣೀರಿಟ್ಟಾಗ ಮೃತ ವ್ಯಕ್ತಿ ಉಸಿರು ಬಿಟ್ಟಿದ್ದಾನೆ ಎನ್ನಲಾಗಿದೆ. ಆಗ ಜೊತೆಯಲ್ಲಿದ್ದವರು ಗಾಬರಿಯಾಗಿ ಶಿಗ್ಗಾವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಪಾಸಣೆ ಮಾಡಿದ ವೈದ್ಯರು ಬದುಕಿರುವದನ್ನು ದೃಢಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಇನ್ನು ಈ ನಡುವೆ ಧಾರವಾಡ ಆಸ್ಪತ್ರೆಯಲ್ಲಿ ಮಂಜುನಾಥ ಗುಡಿಮನಿ ಉರ್ಫ ಮಾಸ್ತರ್ ಮೃತಪಟ್ಟಿರುವ ವಿಚಾರ ಅವರ ಊರಿಗೂ ತಿಳಿದಿದೆ. ಊರಲ್ಲಿ ಮಂಜುನಾಥ ಮೃತಪಟ್ಟಿದ್ದಾರೆ ಎಂದು ತಿಳಿದು, ಶ್ರದ್ಧಾಂಜಲಿ ಬ್ಯಾನರ್ ಕೂಡ ಹಾಕಿದ್ದು, ಓಂ ಶಾಂತಿ ಎಂದು ವಾಟ್ಸ್ ಆ್ಯಪ್‌ದಲ್ಲಿ ಮೇಸೆಜ್‌ಗಳು ಓಡಾಡುತ್ತಿವೆ. ಈಗ ಜೀವ ಉಳಿದ ಸುದ್ದಿ ಕೇಳಿ 'ಆಯುಷ್ಯ ಕೊಟ್ಟು ದೇವರು ಕಾಪಾಡಲಿ' ಎಂಬ ಹಾರೈಕೆಗಳನ್ನು ಹರಿಬಿಡುತ್ತಿದ್ದಾರೆ. ಈ ವಿಸ್ಮಯ ನಡೆದಿದ್ದು ವೈದ್ಯರು ಕೂಡ ನಿಜಕ್ಕೂ ಆಶ್ಚರ್ಯ ಎಂದಿದ್ದಾರೆ.
'ಡಾಬಾ ಬಂತು ರೀ ಊಟ ಮಾಡುತ್ತೀಯಾ?' ಎಂದು ಹೆಂಡತಿ ಗೋಳಾಟ: ಸತ್ತವನು ಎದ್ದೆಕೂತ

No Ads
Log in to write reviews