ತಮ್ಮನ ಮದುವೆಯ ಸಡಗರದಲ್ಲಿರುವ ರಕ್ಷಿತಾ, ಸಹೋದರನಿಗೆ ಅರಿಶಿನ ಶಾಸ್ತ್ರ ಮಾಡಿದ್ರು. ನಿರ್ದೇಶಕ ಪ್ರೇಮ್ ಕೂಡ ಬಾಮೈದುನನಿಗೆ ಅರಿಶಿನ ಹಚ್ಚಿದ್ರು. ರಾಣಾ ಮದುವೆ ಶಾಸ್ತ್ರಗಳು ಸಿಂಪಲ್ ಆಗಿಯೇ ನಡೆದಿದೆ. ಮನೆಯಲ್ಲೇ ಶಾಸ್ತ್ರ ಮುಗಿಸಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಡಲು ನಟ ರಾಣ ತುದಿಗಾಲಿನಲ್ಲಿ ನಿಂತಿದ್ದಾರೆ. ಫೆಬ್ರವರಿ 7 ಮತ್ತು 8ರಂದು ಅರಮನೆ ಮೈದಾನದಲ್ಲಿ ಮದುವೆ ನಡೆಯಲಿದೆ. ರಕ್ಷಿತಾ ಸಹೋದರ ಮದುವೆ ಆಗ್ತಿರೋ ಹುಡುಗಿಯ ಹೆಸರು ಕೂಡ ರಕ್ಷಿತಾ ಅಂತಿದೆ
ರಾಣಾ ಮತ್ತು ರಕ್ಷಿತಾ ಕಳೆದ ವರ್ಷ ಎಂಗೇಜ್ ಆಗಿದ್ದರು. ನವೆಂಬರ್
ತಿಂಗಳಲ್ಲಿಯೇ ಈ ಜೋಡಿ ಸರಳವಾಗಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಅರಮನೆ ಮೈದಾನದಲ್ಲಿ ನಡೆಯುವ ರಾಣಾ ಮದುವೆಗೆ ನಟ ಶಿವಣ್ಣ, ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ.
Log in to write reviews