No Ads

ಕೋರ್ಟ್ ಆದೇಶ: 1 ಮತ್ತು 2 ರೂ. ಚಿಲ್ಲರೆ ರೂಪದಲ್ಲಿ ಪತ್ನಿಗೆ 80 ಸಾವಿರ ರೂ. ಜೀವನಾಂಶ ಹಣ ನೀಡಿದ ಪತಿರಾಯ

India 2024-12-23 12:28:01 217
post

ಇಲ್ಲೊಂದು ವಿಚ್ಛೇದನ ಪ್ರಕರಣ ಸಖತ್‌ ಸುದ್ದಿಯಾಗುತ್ತಿದ್ದು, ವ್ಯಕ್ತಿಯೊಬ್ಬರು ಪತ್ನಿಗೆ ಜೀವನಾಂಶ ಪಾವತಿಸಲು 80 ಸಾವಿರ ರೂ. ಮೌಲ್ಯದ 1-2 ರೂಪಾಯಿ  ನಾಣ್ಯದ ಚೀಲವನ್ನ ಕೋರ್ಟ್‌ಗೆ ಹೊತ್ತು ತಂದಿದ್ದಾರೆ. ನಿಮ್ಮ ಪತ್ನಿಗೆ 2 ಲಕ್ಷ ರೂ. ಜೀವನಾಂಶ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದ್ದು, ಇದಕ್ಕಾಗಿ ಈ ವ್ಯಕ್ತಿ 1 ಮತ್ತು 2 ರೂ. ಚಿಲ್ಲರೆ ಹಣದ ರೂಪದಲ್ಲಿ ಪತ್ನಿಗೆ 80 ಸಾವಿರ ರೂ. ಪರಿಹಾರ ಹಣವನ್ನು ನೀಡಿದ್ದಾರೆ. ಈ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬರು ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಲು ಸುಮಾರು 80 ಸಾವಿರ ಮೌಲ್ಯದ 1 ಮತ್ತು ಎರಡು ರೂಪಾಯಿ ಚಿಲ್ಲರೆ ಹಣದ ಕಟ್ಟನ್ನು ಕೋರ್ಟ್‌ಗೆ ತಂದಿದ್ದಾರೆ. ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ 37 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಪತ್ನಿ ಕಳೆದ ವರ್ಷ ಕೊಯಮತ್ತೂರು ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್‌ 2 ಲಕ್ಷ ರೂ. ಜೀವನಾಂಶ ನೀಡಬೇಕೆಂದು ಆ ವ್ಯಕ್ತಿಗೆ ಆದೇಶ ನೀಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಮಾಜಿ ಪತ್ನಿಗೆ ಪರಿಹಾರ ಹಣ ನೀಡುವ ಸಲುವಾಗಿ ಆ ವ್ಯಕ್ತಿ ಸುಮಾರು 80 ಸಾವಿರ ಮೌಲ್ಯದ 1 ಮತ್ತು ಎರಡು ರೂಪಾಯಿ ನಾಣ್ಯಗಳ 20 ಕಟ್ಟುಗಳನ್ನು ನ್ಯಾಯಾಲಯಕ್ಕೆ ತಂದಿದ್ದಾರೆ. ನಾಣ್ಯಗಳ ರೂಪದಲ್ಲಿಯೇ ವಿಚ್ಛೇದಿತ ಪತ್ನಿಗೆ ಪರಿಹಾರ ಹಣ ನೀಡಿದ್ದು, ಈ ಹಣವನ್ನು ನಗದು ರೂಪದಲ್ಲಿಯೇ ನೀಡಬೇಕು ಎಂದು ಕೋರ್ಟ್‌ ಹೇಳಿದ್ದಕ್ಕೆ ಆ ವ್ಯಕ್ತಿ ಮರುದಿನ ಕರೆನ್ಸಿ ನೋಟು ರೂಪದಲ್ಲಿ ಹಣ ನೀಡಿದ್ದಾರೆ. ಮತ್ತು ಬಾಕಿ ಉಳಿದ 1.2 ಲಕ್ಷ ರೂ ಹಣವನ್ನು ಆದಷ್ಟು ಬೇಗ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.    

No Ads
No Reviews
No Ads

Popular News

No Post Categories
Sidebar Banner
Sidebar Banner