ಪ್ರೀತಿ ಮಾಡದಂತೆ ಎಚ್ಚರಿಸಿದರೂ ಕೇಳದ ಮಗಳನ್ನು ತಂದೆಯೇ ದೊಣ್ಣೆಯಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ನಡೆದಿದೆ.
ಮೃತಳನ್ನು 18 ವರ್ಷದ ಮೋನಿಕಾ ಮೋತಿರಾಮ ಜಾಧವ್ ಎಂದು ಗುರುತಿಸಲಾಗಿದೆ. ತಂದೆ ಮೋತಿರಾಮ ಮಗಳನ್ನು ಕೊಲೆ ಮಾಡಿ ಸದ್ಯ ತಲೆಮರೆಸಿಕೊಂಡಿದ್ದಾರೆ. ನಿನಗೆ ಒಳ್ಳೆಯ ಹುಡುಗನನ್ನ ನೋಡಿ ಮದುವೆ ಮಾಡುತ್ತೇನೆ. ಈ ಪ್ರೀತಿ-ಪ್ರೇಮದಿಂದ ದೂರವಿರುವಂತೆ ಮಗಳಿಗೆ ತಂದೆ ತಿಳುವಳಿಕೆ ಹೇಳಿದ್ದರು. ಆದರೆ ಅದಕ್ಕೆ ಒಪ್ಪದ ಮೋನಿಕಾ ನಾನು ಮದುವೆಯಾದರೆ ಅವನನ್ನೇ ಆಗುತ್ತೇನೆ ಎಂದು ಪಟ್ಟು ಹಿಡಿದ್ದಿದ್ದಳು. ಇದರಿಂದ ಕೋಪಗೊಂಡ ತಂದೆ ಮಗಳ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ.
ಮಾರಾಣಾಂತಿಕ ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಮೋನಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಗಳ ಹತ್ಯೆ ಕುರಿತಂತೆ ತಾಯಿ ಭಾಗುಬಾಯಿ ಸಂತಪೂರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೋತಿರಾಮನ ಬಂಧನಕ್ಕೆ ಬಲೆ ಬಿಸಿದ್ದಾರೆ.
Log in to write reviews