No Ads

ಚಿಯಾ ಬೀಜಗಳ ಸೇವನೆಯ ಆರೋಗ್ಯಕರ ಪ್ರಯೋಜನಗಳು

ಕರ್ನಾಟಕ 2024-03-30 14:20:25 43
post

  ಚಿಯಾ ಬೀಜಗಳ ಸೇವನೆಯ ಆರೋಗ್ಯಕರ ಪ್ರಯೋಜನಗಳು ನಾವೆಲ್ಲಾ ಚಿಯಾ ಬೀಜ ಅಥವಾ ಕಾಮಕಸ್ತೂರಿ ಬೀಜವನ್ನು ಫ್ರೂಟ್ ಸಲಾಡ್, ಫಲುಡಾ, ಇನ್ನಿತರ ತಂಪು ಪಾನೀಯಗಳಲ್ಲಿ ಸೇರಿಸಿ ಕೊಡುವುದನ್ನು ನೋಡಿರುತ್ತೇವೆ. ಆದರೆ ಈ ಬೀಜವನ್ನು ನೀರಿನಲ್ಲಿ ನೆನೆಸಿ ಹಾಗೇ ಸೇವನೆ ಮಾಡುವುದರಿಂದ ಎಷ್ಟೆಲ್ಲ ಪ್ರಯೋಜನಗಳು ಆಗುತ್ತೆ ಗೊತ್ತಾ? ಇಂತಹ ಬಿರು ಬಿಸಿಲಿನಲ್ಲಿ ದೇಹಕ್ಕೆ ತಂಪು ನೀಡುವಂತಹ ಪಾನೀಯಗಳನ್ನು ಕುಡಿಯುವುದು ದೇಹಕ್ಕೆ ಇನ್ನೂ ಉಪಯುಕ್ತ ಆಗುತ್ತದೆ. ಇಂತಹ ರಣ ಬಿಸಿಲಿನ ಬೇಗೆಯಲ್ಲಿ ಈ ಚಿಯಾ ಬೀಜ ಅಥವಾ ಕಾಮಕಸ್ತೂರಿ ಬೀಜವಿಲ್ಲದೆ ಬೇಸಿಗೆ ಪೂರ್ಣಗೊಳ್ಳುವುದಿಲ್ಲ. ದೇಹಕ್ಕೆ ತಂಪು ಹಾಗೂ ಆರೋಗ್ಯವನ್ನು ನೀಡುವ ಈ ಬೀಜಗಳನ್ನು ನೀರಿನಲ್ಲಿ ನೆನೆಸಿ ಕುಡಿಯುವುದು ಉತ್ತಮ. ಈ ಬೀಜದಲ್ಲಿ ಅಧಿಕ ಪ್ರಮಾಣದಲ್ಲಿ ನಾರಿನಾಂಶವನ್ನು ಹೊಂದಿದೆ. ಈ ಬೀಜವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಹಾಗೂ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ ಈ ಬೀಜವನ್ನು ಸೇವನೆಯಿಂದ ತೂಕ ಇಳಿಕೆಗೆ ಅಪಾರ ನೆರವು ನೀಡುತ್ತದೆ. ನಾವು ತಿನ್ನುವ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸುತ್ತದೆ. ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ರಂಜಕ ಮೊದಲಾದ ಪೋಷಕಾಂಶಗಳು ಸಮೃದ್ಧವಾಗಿವೆ. ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಬಳಿಕ ಸೇವಿಸಿದರೇ ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ. ದೇಹದ ಅಂಗಾಂಗಗಳ ಉರಿಯೂತ ಕಡಿಮೆಯಾಗುತ್ತದೆ. ಇದು ದೇಹಕ್ಕೆ ಒಳ್ಳೆಯದಾಗಿದೆ. ದೇಹದ ಆರೋಗ್ಯ ಅಷ್ಟೇ ಅಲ್ಲದೇ, ನಮ್ಮ ತಲೆ ಕೂದಲಿನ ಆರೋಗ್ಯಕ್ಕೂ ಈ ಬೀಜಗಳನ್ನು ಬಳಸಬಹುದು. ಇದರ ಸೇವನೆಯಿಂದ ಕೂದಲು ವೇಗವಾಗಿ ಬೆಳೆಯುತ್ತದೆ. ಕೂದಲು ನಯಾವಾಗಿ ಹಾಗೂ ಶೈನ್ ಆಗುತ್ತದೆ. ಮಾತ್ರವಲ್ಲದೆ ಇದು ಕೂದಲ ಉದುರುವಿಕೆ ತಡೆಯುತ್ತದೆ. ಜೊತೆಗೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇನ್ನು, ಮಹಿಳೆಯ ಹಾಗೂ ಪುರುಷರು ನಿಯಮಿತವಾಗಿ ಚಿಯಾ ಬೀಜ ನೆನೆಸಿ ಕುಡಿಯುವುದರಿಂದ ಆರೋಗ್ಯದ ಜೊತೆಗೆ ಹೊಳೆಯುವ ಮತ್ತು ಕಾಂತಿಯುತ ಚರ್ಮ ನಿಮ್ಮದಾಗಿಸಿಕೊಳ್ಳಬಹುದು. ಈ ಬೀಜಗಳನ್ನು ಸೇವಿಸುವುದು ನಿಮ್ಮ ಚರ್ಮಕ್ಕೆ ಸಹಕಾರಿಯಾಗಿದೆ. ಏಕೆಂದರೆ ಅದರಲ್ಲಿ ಕ್ಯಾಲ್ಸಿಯಂ, ಖನಿಜಗಳು, ಉತ್ಕರ್ಷಣ ನರೋಧಕಗಳು, ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಚಿಯಾ ಬೀಜ ಅಥವಾ ಕಾಮಕಸ್ತೂರಿ ಬೀಜದಿಂದ ಎಷ್ಟೆಲ್ಲಾ ಪ್ರಯೋಜನಗಳು ಇದೆ ಅಲ್ವಾ ಹಾಗಾದರೆ ತಡ ಮಾಡದೇ ಇಂದಿನಿಂದ ಬೀಜವನ್ನು ನೆನೆಸಿಟ್ಟು ಸೇವನೆ ಮಾಡಿ.    

No Ads
No Reviews
No Ads

Popular News

No Post Categories
Sidebar Banner
Sidebar Banner