ಪಾಕಿಸ್ತಾನಕ್ಕೆ ರಾಹುಲ್ ಗಾಂಧಿ ಹಾಕಿದ್ರು ಬಿಗ್ ಕಂಡೀಷನ್! ಇಸ್ಲಾಮಾಬಾದ್ ಉಗ್ರರಿಗೆ ಬೆಂಬಲ ನಿಲ್ಲಿಸಿದ್ರೆ ಮಾತ್ರ ಮಾತುಕತೆಗೆ ಅವಕಾಶ!

ಪಾಕಿಸ್ತಾನಕ್ಕೆ ರಾಹುಲ್ ಗಾಂಧಿ ಹಾಕಿದ್ರು ಬಿಗ್ ಕಂಡೀಷನ್! ಇಸ್ಲಾಮಾಬಾದ್ ಉಗ್ರರಿಗೆ ಬೆಂಬಲ ನಿಲ್ಲಿಸಿದ್ರೆ ಮಾತ್ರ ಮಾತುಕತೆಗೆ ಅವಕಾಶ!

ಇಸ್ಲಾಮಾಬಾದ್‌ಗೆ ರಾಹುಲ್ ಗಾಂಧಿ ಖಡಕ್ ಎಚ್ಚರಿಕೆ! ಭಯೋತ್ಪಾದನೆ ನಿಲ್ಲಿಸಿದ್ರೆ ಮಾತ್ರ ಮಾತುಕತೆ!

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತೆ ಸುಧಾರಿಸಬೇಕಾದರೆ ಇಸ್ಲಾಮಾಬಾದ್ ಮೊದಲು ತನ್ನ ನಿಲುವು ಬದಲಿಸಿಕೊಳ್ಳಬೇಕು. ಭಾರತದ ವಿರುದ್ಧ ನಡೆಯುತ್ತಿರುವ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮಾತುಕತೆಗೆ ಯಾವುದೇ ಅವಕಾಶವಿಲ್ಲ! ಹೀಗಂತ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಖಡಕ್ ಸಂದೇಶ ನೀಡಿದ್ದಾರೆ.

ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ಮಹತ್ವದ ಹೇಳಿಕೆ ನೀಡಿದ್ದಾರೆ. ವಿಶೇಷವೆಂದರೆ, ಈ ಪ್ರಶ್ನೆಯನ್ನು ಕೇಳಿದ್ದು ಪಾಕಿಸ್ತಾನದಿಂದ ಬಂದಿದ್ದ ವ್ಯಕ್ತಿಯೊಬ್ಬರು.

ಭಾರತ ಮತ್ತು ಪಾಕಿಸ್ತಾನ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು, ಎರಡೂ ದೇಶಗಳ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಲು ಸಾಧ್ಯವೇ ಎಂದು ಅವರು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಉತ್ತಮ ಸಂಬಂಧಕ್ಕೆ ಅವಕಾಶವಿದೆ. ಆದರೆ ಪಾಕಿಸ್ತಾನದಿಂದ ಭಾರತದಲ್ಲಿ ಭಯೋತ್ಪಾದನೆಗೆ ಸಿಗುತ್ತಿರುವ ಬೆಂಬಲವೇ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಭಾರತದ ಅಮಾಯಕ ನಾಗರಿಕರು ಭಯೋತ್ಪಾದಕ ದಾಳಿಗೆ ಬಲಿಯಾಗುತ್ತಿರುವಾಗ ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ರೀತಿಯ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದ ಕ್ಷಣದಿಂದ ಮಾತುಕತೆ ಆರಂಭಿಸುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಂದರೆ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಉಗ್ರವಾದಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ಮಾತ್ರ ಭಾರತದ ಜೊತೆಗಿನ ಮಾತುಕತೆಗೆ ಹಾದಿ ಸುಗಮವಾಗಲಿದೆ ಎಂಬುದು ರಾಹುಲ್ ಗಾಂಧಿಯವರ ಮಾತಿನ ಸಾರವಾಗಿದೆ.

ಒಟ್ಟಿನಲ್ಲಿ, ಪಾಕಿಸ್ತಾನದ ಜೊತೆ ಶಾಂತಿಯುತ ಸಂಬಂಧಕ್ಕೆ ವಿರೋಧವಿಲ್ಲ. ಆದರೆ ಭಾರತದ ಭದ್ರತೆ ಮತ್ತು ನಾಗರಿಕರ ಜೀವದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶವನ್ನು ರಾಹುಲ್ ಗಾಂಧಿ ನೀಡಿದ್ದಾರೆ.

Leave a Reply

Your email address will not be published. Required fields are marked *