ಬಹುತಾರಾಗಣದ ‘ಓಂ’ ಸಿನಿಮಾ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
ಧನುಶ್, ಮಮ್ಮುಟಿ, ಸಾಯಿ ಪಲ್ಲವಿ, ಶ್ರೀಲೀಲಾ ಅವರುಗಳು ಪ್ರಮುಖ ಪಾತ್ರದಲ್ಲಿ ನಟನೆ ಮಾಡಿರುವ ‘ಓಂ’ ಸಿನಿಮಾ ಇಂದು (ನವೆಂಬರ್ 20) ರಿಲೀಸ್ ಆಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಸಖತ್ ಸದ್ದು ಮಾಡಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಜ್ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಿರುವ ಕಾರಣ ನಿರೀಕ್ಷೆ ಹೆಚ್ಚಾಗಿಯೇ ಇತ್ತು. ಇದೀಗ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾ ನೋಡಿದವರು ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸ್ಟಾರ್ ನಟರುಗಳಾದ ಧನುಶ್, ಮಮ್ಮುಟಿ, ಸಾಯಿ ಪಲ್ಲವಿ, ಶ್ರೀಲೀಲಾ ಅವರುಗಳು ಪ್ರಮುಖ ಪಾತ್ರದಲ್ಲಿ ನಟನೆ ಮಾಡಿರುವ ‘ಓಂ’ ಸಿನಿಮಾ ಇಂದು (ನವೆಂಬರ್ 20) ರಿಲೀಸ್ ಆಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಸಖತ್ ಸದ್ದು ಮಾಡಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಜ್ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಿರುವ ಕಾರಣ ನಿರೀಕ್ಷೆ ಹೆಚ್ಚಾಗಿಯೇ ಇತ್ತು. ಇದೀಗ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾ ನೋಡಿದವರು ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಓಂ ಸಿನಿಮಾ ಅದ್ಭುತ ಆರಂಭವನ್ನು ಪಡೆದುಕೊಳ್ಳುತ್ತದೆ. ಇಂಟರ್ವೆಲ್ಗೆ ಮುಂಚೆ ಪಾತ್ರಗಳ ಪರಿಚಯಕ್ಕೆ ಹೆಚ್ಚಿನ ಸಮಯ ಮೀಸಲಿಡಲಾಗಿದೆ. ಇಂಟರ್ವೆಲ್ ಬರುವ ತುಸು ಮುಂಚೆಯಷ್ಟೆ ಸಿನಿಮಾದ ನಿಜವಾದ ಕತೆ ಆರಂಭವಾಗುತ್ತದೆ. ಆದರೆ ಸಿನಿಮಾ ಆಸಕ್ತಿಕರವಾಗಿದೆ. ನಿರ್ದೇಶಕರು ಹಿಡಿದಿಡುವಂಥಹ ಚಿತ್ರಕತೆ ಬರೆದಿದ್ದಾರೆ ಎಂದಿದ್ದಾರೆ ನೆಲ್ಸನ್ ಎಂಬ ಟ್ವಿಟ್ಟರ್ ಬಳಕೆದಾರ.
ಕಾರ್ತಿಕ್ಕು ಎಂಬುವರು ಟ್ವೀಟ್ ಮಾಡಿ, ಸಿನಿಮಾದ ಕೆಲವು ಭಾಗಗಳು ಮನರಂಜನಾತ್ಮಕವಾಗಿವೆ. ಪಾತ್ರಗಳು ಚೆನ್ನಾಗಿವೆ, ಅವುಗಳನ್ನು ಪರಿಚಯ ಮಾಡಿರುವ ರೀತಿಯೂ ಚೆನ್ನಾಗಿದೆ. ಆದರೆ ಸಿನಿಮಾದ ಹಲವು ದೃಶ್ಯಗಳನ್ನು ಮೊದಲೇ ಊಹೆ ಮಾಡಬಹುದು. ಸೆಕೆಂಡ್ ಹಾಫ್ ಸಹ ಚೆನ್ನಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಜಾರ್ಜ್ ಎಂಬುವರು ಸಿನಿಮಾದ ಮೊದಲಾರ್ಧದ ಬಗ್ಗೆ ಟ್ವೀಟ್ ಮಾಡಿದ್ದು, ‘ಸಿನಿಮಾದ ಮೊದಲಾರ್ಧ ಬ್ರಿಲಿಯಂಟ್ ಆಗಿದೆ. ಹಿಡಿದಿಟ್ಟುಕೊಳ್ಳುತ್ತದೆ, ಅಷ್ಟೇ ರೊಚಕವಾಗಿದೆ. ಸಿನಿಮಾದ ನಿರ್ದೇಶಕ ಮಾಡಿರುವ ರಿಸರ್ಚ್ ಚಿತ್ರಕತೆಯಲ್ಲಿ ಕಾಣುತ್ತದೆ. ಧನುಶ್ ಮತ್ತು ಮಮ್ಮುಟಿಯ ಪಾತ್ರ ಅದ್ಭುತವಾಗಿ ಮೂಡಿಬಂದಿದೆ. ಸಾಯಿ ಪಲ್ಲವಿ ನಟನೆಯೂ ಅದ್ಭುತ. ಇಂಟರ್ವೆಲ್ ಅಂತೂ ಯಾರೂ ಊಹಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
ಆಲ್ ಅಬೌಟ್ ಮೂವೀಸ್ ಎಂಬ ಟ್ವಿಟ್ಟರ್ ಪೇಜಿನಲ್ಲಿ ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆ ಹಂಚಿಕೊಳ್ಳಲಾಗಿದೆ. ‘ಓಂ ಎಂಬುದು ಆಪರೇಷನ್ ಮೋಲ್ ಅಲ್ಲ, ಬದಲಿಗೆ ಆಪರೇಷನ್ ಮಿಡ್ ಎಂದಾಗಬೇಕು. ಸಿನಿಮಾನಲ್ಲಿ ಧನುಶ್ ಸಪ್ಪೆಯಾಗಿ ಕಾಣುತ್ತಾರೆ. ಸಾಯಿ ಪಲ್ಲವಿ ನಟನೆ ಸಾಧಾರಣವಾಗಿದೆ. ಶ್ರೀಲೀಲಾ ಪಾತ್ರ ಇರುವುದೇ ಗೊತ್ತಾಗುವುದಿಲ್ಲ. ಇಡೀ ಸಿನಿಮಾನಲ್ಲಿ ಮಮ್ಮುಟಿ ಒಬ್ಬರೇ ಪಾಸಿಟಿವ್’ ಎಂದಿದ್ದಾರೆ.
ಹೇಗಿದೆ ‘ಓಂ’ ಸಿನಿಮಾದ ಕಥೆ?
ಕೆಂಪು ಚಂದನ ಕಳ್ಳಸಾಗಣೆ ಜಾಲದ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಕಾಡಿನೊಳಗೆ ನಡೆಯುವ ಅಕ್ರಮ ವ್ಯವಹಾರ, ಅದನ್ನು ಮಟ್ಟಹಾಕಲು ಪೊಲೀಸರು ನಡೆಸುವ ರಹಸ್ಯ ಕಾರ್ಯಾಚರಣೆ, ಅಪರಾಧ ಜಗತ್ತಿನ ಸಂಘರ್ಷಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಧನುಷ್ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗುವ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಮಮ್ಮುಟ್ಟಿ ಬರ್ಮಾ ಕಾರ್ತಿಕೇಯನ್ ಎಂಬ ಖಳಪಾತ್ರಕ್ಕೆ ಜೀವ ತುಂಬಿದ್ದಾರೆ.
ಧನುಷ್ ಅಭಿನಯಕ್ಕೆ ಅಭಿಮಾನಿಗಳು ಫಿದಾ!
ಧನುಷ್ ಅವರ ಅಭಿನಯ ಹಾಗೂ ಆ್ಯಕ್ಷನ್ ದೃಶ್ಯಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಭಿನ್ನ ಆಯಾಮಗಳನ್ನು ಹೊಂದಿರುವ ಪಾತ್ರದಲ್ಲಿ ಧನುಷ್ ಗಮನ ಸೆಳೆದಿದ್ದಾರೆ. ವಿಶೇಷವಾಗಿ ‘ವೀಳವೀರ’ ಹಾಡಿನೊಂದಿಗೆ ಮೂಡಿಬರುವ ಸಾಹಸ ದೃಶ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮಮ್ಮುಟ್ಟಿ ಡ್ಯಾನ್ಸ್ಗೆ ಅಭಿಮಾನಿಗಳ ಮೆಚ್ಚುಗೆ
ಮಮ್ಮುಟ್ಟಿ ಅವರ ಅದ್ಭುತ ಸ್ಕ್ರೀನ್ ಪ್ರೆಸೆನ್ಸ್ ಪ್ರೇಕ್ಷಕರ ಗಮನ ಸೆಳೆದಿದೆ. ಅವರ ನೃತ್ಯದ ದೃಶ್ಯಕ್ಕೂ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕಡಿಮೆ ಅವಧಿಗೆ ತೆರೆಮೇಲೆ ಕಾಣಿಸಿಕೊಂಡರೂ ತಮ್ಮ ಅಭಿನಯದ ಮೂಲಕ ಮಮ್ಮುಟ್ಟಿ ಪರಿಣಾಮ ಬೀರುತ್ತಾರೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಸಾಯಿ ಪಲ್ಲವಿ ಮಿಂಚಿಂಗ್!
‘ರಾಮಾಯಣ’ ಸಿನಿಮಾದಲ್ಲಿ ಸೀತೆಯ ಪಾತ್ರದ ಮೂಲಕ ಗಮನ ಸೆಳೆದಿದ್ದ ಸಾಯಿ ಪಲ್ಲವಿ ಇದೀಗ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಂಭೀರ ಅಭಿನಯ ಹಾಗೂ ಭಾವನಾತ್ಮಕ ಅಭಿವ್ಯಕ್ತಿಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಸಾಯಿ ಪಲ್ಲವಿ ಅಭಿನಯವೂ ಒಂದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಿನಿಮಾದ ಬಗ್ಗೆ ಅಪಸ್ವರವೂ ಇದೆ!
ಎಲ್ಲ ಪ್ರೇಕ್ಷಕರೂ ಸಿನಿಮಾವನ್ನು ಮೆಚ್ಚಿಕೊಂಡಿಲ್ಲ. ಕೆಲವರು ಚಿತ್ರಕಥೆಯ ವೇಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ದೃಶ್ಯಗಳನ್ನು ಮೊದಲೇ ಊಹಿಸಬಹುದು, ಸಿನಿಮಾ ಕೆಲವೆಡೆ ಎಳೆದಂತೆ ಅನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಯಿ ಅಭ್ಯಂಕರ್ ಅವರ ಹಿನ್ನೆಲೆ ಸಂಗೀತಕ್ಕೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸಂಗೀತವನ್ನು ಮೆಚ್ಚಿಕೊಂಡರೆ, ಮತ್ತೆ ಕೆಲವರು ಹಿನ್ನೆಲೆ ಸಂಗೀತದ ಅಬ್ಬರ ಹೆಚ್ಚಾಗಿದೆ ಎಂದಿದ್ದಾರೆ. ಸಂಕಲನದ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ.