ಬೆಂಗಳೂರಿನಲ್ಲಿ ಸಿಕ್ಕ ಮಹಿಳೆಯ ಅಸ್ಥಿಪಂಜರದ ರಹಸ್ಯ ಬಯಲು! ಪ್ರೀತಿಸಿ ಮದುವೆಯಾದ ಐದೇ ತಿಂಗಳಲ್ಲಿ ದುರಂತ! ಎರಡನೇ ಪತಿ ಅರೆಸ್ಟ್!
ಸಿಲಿಕಾನ್ ಸಿಟಿಯ ಕೊಡಿಗೆಹಳ್ಳಿ (Kodigehalli)ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್ ತನಿಖೆಯಲ್ಲಿ ಎರಡನೇ ಗಂಡನಿಂದ ಮಹಿಳೆ ಕೊಲೆಯಾಗಿರುವುದು (Bengaluru Crime) ಬೆಳಕಿಗೆ ಬಂದಿದೆ.
34 ವರ್ಷದ ಸುಜಾತಾ ಕೊಲೆಯಾದ ದುರ್ದೈವಿ. ಈಕೆಯ ಎರಡನೇ ಪತಿ 24 ವರ್ಷದ ಫಯಾಜ್ ಪಾಷಾ ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ಸುಜಾತಾಳ ಮೊದಲ ಗಂಡ ತೀರಿಕೊಂಡು ಐದು ವರ್ಷಗಳಾಗಿತ್ತು. ಬಳಿಕ ತನಗಿಂತ ಹತ್ತು ವರ್ಷ ಚಿಕ್ಕವನಾದ ಫಯಾಜ್ ಪಾಷಾ ಜೊತೆ ಸುಜಾತಾಗೆ ಸಲುಗೆ ಬೆಳೆದಿತ್ತು. ಈ ಪರಿಚಯ ಪ್ರೀತಿಗೆ ತಿರುಗಿ, ಕಳೆದ ಐದು ತಿಂಗಳ ಹಿಂದೆಯಷ್ಟೇ ಇಬ್ಬರೂ ಮದುವೆಯಾಗಿದ್ದರು.
ಮದುವೆಯಾದ ಕೆಲವೇ ದಿನಗಳಲ್ಲಿ ಸುಜಾತಾ ನಡತೆ ಸರಿ ಇಲ್ಲ, ಆಕೆಗೆ ಬೇರೊಬ್ಬರ ಜೊತೆ ಅಕ್ರಮ ಸಂಬಂಧವಿದೆ ಅಂತ ಫಯಾಜ್ ಪದೇ ಪದೇ ಗಲಾಟೆ ಮಾಡುತ್ತಿದ್ದ. ಇದೇ ವಿಚಾರಕ್ಕೆ ಬೇಸತ್ತು ಆತ ಮನೆ ಬಿಟ್ಟು ಹೋಗಿದ್ದ. ಆದ್ರೆ ಸುಜಾತಾ, ಇನ್ಮುಂದೆ ಚೆನ್ನಾಗಿರೋಣ ಅಂತ ಆತನನ್ನ ಮತ್ತೆ ಮನೆಗೆ ಕರೆತಂದಿದ್ಲು.
ಮನೆಗೆ ಮರಳಿದ ಮೇಲೂ ಇಬ್ಬರ ನಡುವಿನ ಜಗಳ ನಿಂತಿರಲಿಲ್ಲ. ಕಳೆದ ಎರಡು ತಿಂಗಳ ಹಿಂದೆ ಇದೇ ವಿಚಾರಕ್ಕೆ ಮತ್ತೆ ದೊಡ್ಡ ಗಲಾಟೆ ನಡೆದಿದ್ದು, ಪಾರ್ಕ್ ಬಳಿ ಸುಜಾತಾಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ ಫಯಾಜ್. ಬಳಿಕ ಯಾರಿಗೂ ಅನುಮಾನ ಬಾರದಂತೆ ಮೃತದೇಹವನ್ನ ನಿರ್ಜನ ಪ್ರದೇಶದಲ್ಲಿ ಬಚ್ಚಿಟ್ಟು ಎಸ್ಕೇಪ್ ಆಗಿದ್ದ.
ಕಳೆದ ನವೆಂಬರ್ 6ರಂದು ಅಸ್ಥಿಪಂಜರ ಪತ್ತೆಯಾದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಕೊಡಿಗೆಹಳ್ಳಿ ಪೊಲೀಸರು, ಕೊನೆಗೂ ಮೃತದೇಹದ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿ ಫಯಾಜ್ ಪಾಷಾನನ್ನ ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.