IPL 2027: ಲಕ್ನೋ ತಂಡಕ್ಕೆ ಹೊಸ ನಾಯಕ ಯಾರು? ನಿಕೋಲಸ್ ಪೂರನ್ ಹೆಸರು ಹೇಳಿ ಸುಳಿವು ಕೊಟ್ಟ ದಿಗ್ವೇಶ್ ರಾಠಿ!
ರಿಷಭ್ ಪಂತ್ ಜಾಗಕ್ಕೆ ವಿಂಡೀಸ್ ಸ್ಫೋಟಕ ಬ್ಯಾಟರ್ ಎಂಟ್ರಿ? ಪೂರನ್ ನಾಯಕನಾಗ್ತಾರಾ?
ಐಪಿಎಲ್ 2027ರ ಸೀಸನ್ ಆರಂಭಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ನಾಯಕತ್ವದ ಚರ್ಚೆ ಜೋರಾಗಿದೆ. ಕಳೆದ ಎರಡು ಸೀಸನ್ಗಳಲ್ಲಿ ತಂಡವನ್ನು ಮುನ್ನಡೆಸಿದ್ದ ರಿಷಭ್ ಪಂತ್ ಇದೀಗ ತಂಡದಿಂದ ಹೊರಬಂದಿದ್ದಾರೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಲಕ್ನೋ ತಂಡದ ನಾಯಕತ್ವ ಯಾರ ಕೈ ಸೇರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ನಡುವೆ ತಂಡದ ಆಟಗಾರ ದಿಗ್ವೇಶ್ ರಾಠಿ ನೀಡಿರುವ ಒಂದು ಸುಳಿವು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಪೂರನ್ ಹೆಸರನ್ನೇ ಹೇಳಿದ ದಿಗ್ವೇಶ್ ರಾಠಿ!
ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಪಂದ್ಯವೊಂದರ ವೇಳೆ ಅಭಿಮಾನಿಯೊಬ್ಬರು ಲಕ್ನೋ ತಂಡದ ಮುಂದಿನ ನಾಯಕ ಯಾರು ಎಂದು ದಿಗ್ವೇಶ್ ರಾಠಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಹೆಚ್ಚು ಯೋಚಿಸದೆ ರಾಠಿ ‘ನಿಕೋಲಸ್ ಪೂರನ್’ ಎಂದು ಉತ್ತರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೂರನ್ ಅವರೇ ಮುಂದಿನ ನಾಯಕನಾಗಬಹುದು ಎಂಬ ಚರ್ಚೆ ಶುರುವಾಗಿದೆ.
₹21 ಕೋಟಿ ಕೊಟ್ಟು ಉಳಿಸಿಕೊಂಡಿದ್ದ ಲಕ್ನೋ!
ವೆಸ್ಟ್ ಇಂಡೀಸ್ನ ಸ್ಫೋಟಕ ಎಡಗೈ ಬ್ಯಾಟರ್ ನಿಕೋಲಸ್ ಪೂರನ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ 2025ರ ಮೆಗಾ ಹರಾಜಿಗೂ ಮುನ್ನ ಬರೋಬ್ಬರಿ ₹21 ಕೋಟಿಗೆ ರಿಟೈನ್ ಮಾಡಿಕೊಂಡಿತ್ತು. 2023ರಿಂದ ಲಕ್ನೋ ತಂಡದ ಭಾಗವಾಗಿರುವ ಪೂರನ್, ಐಪಿಎಲ್ನಲ್ಲಿ ಫ್ರಾಂಚೈಸಿಯ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.
ನಾಯಕತ್ವದ ಅನುಭವವೂ ಇದೆ!
ಪೂರನ್ ಕೇವಲ ಸ್ಫೋಟಕ ಬ್ಯಾಟರ್ ಮಾತ್ರವಲ್ಲ, ನಾಯಕತ್ವದ ಅನುಭವವನ್ನೂ ಹೊಂದಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ಟಿ20 ತಂಡದ ನಾಯಕನಾಗಿ ಕಾರ್ಯನಿರ್ವಹಿಸಿರುವ ಅವರು, ವಿವಿಧ ಫ್ರಾಂಚೈಸಿ ಟಿ20 ಟೂರ್ನಿಗಳಲ್ಲೂ ತಂಡಗಳನ್ನು ಮುನ್ನಡೆಸಿದ್ದಾರೆ.
ಆದರೆ ಪೂರನ್ ಒಬ್ಬರೇ ನಾಯಕತ್ವದ ರೇಸ್ನಲ್ಲಿಲ್ಲ. ಮಿಚೆಲ್ ಮಾರ್ಷ್, ಏಡನ್ ಮಾರ್ಕ್ರಮ್ ಹಾಗೂ ಸ್ಯಾಮ್ ಕರನ್ ಅವರ ಹೆಸರುಗಳೂ ಮುಂಚೂಣಿಯಲ್ಲಿವೆ.
ಸದ್ಯ ಲಕ್ನೋ ತಂಡದ ಮ್ಯಾನೇಜ್ಮೆಂಟ್ ನಾಯಕನ ಹೆಸರನ್ನು ಅಧಿಕೃತವಾಗಿ ಘೋಷಿಸಿಲ್ಲ. ಹೀಗಾಗಿ ದಿಗ್ವೇಶ್ ರಾಠಿ ನೀಡಿರುವ ಸುಳಿವು ನಿಜವಾಗುತ್ತಾ? 2027ರ ಐಪಿಎಲ್ನಲ್ಲಿ ಲಕ್ನೋ ತಂಡದ ನಾಯಕನಾಗಿ ಪೂರನ್ ಕಣಕ್ಕಿಳಿಯುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
IPL 2027: ಲಕ್ನೋ ತಂಡಕ್ಕೆ ಹೊಸ ನಾಯಕ ಯಾರು? ನಿಕೋಲಸ್ ಪೂರನ್ ಹೆಸರು ಹೇಳಿ ಸುಳಿವು ಕೊಟ್ಟ ದಿಗ್ವೇಶ್ ರಾಠಿ!
