*8 ವರ್ಷಗಳಿಂದ ಮನಸ್ಸಲ್ಲೇ ಉಳಿದಿತ್ತು ಆ ನೋವು!
ಗಗನ್ ಬದುಕಿನ ಕಹಿ ಘಟನೆ ಬಯಲು;₹500 ನೋಟಿನಲ್ಲಿತ್ತು ಗೆಳೆಯನ ಸಂದೇಶ!**
**ಬಿಗ್ ಬಾಸ್ ಮನೆಯಲ್ಲಿ ಸೀಕ್ರೆಟ್ ಟಾಸ್ಕ್ ಆಟಕ್ಕೆ ಭಾವುಕ ತಿರುವು ಸಿಕ್ಕಿದೆ. ಗಾನವಿ ತೆಗೆದುಕೊಂಡ ಒಂದು ನಿರ್ಧಾರದಿಂದ ಗಗನ್ ಚಿನ್ನಪ್ಪ ಅವರ ಬದುಕಿನಲ್ಲಿ ಎಂಟು ವರ್ಷಗಳ ಹಿಂದೆ ನಡೆದ ಕಹಿ ಘಟನೆಯೊಂದು ಎಲ್ಲರ ಮುಂದೆ ಅನಾವರಣಗೊಂಡಿದೆ. ಆತ್ಮೀಯ ಗೆಳೆಯನನ್ನು ಕಳೆದುಕೊಂಡ ನೋವನ್ನು ಹಂಚಿಕೊಂಡ ಗಗನ್ ಮಾತುಗಳು ಮನೆಮಂದಿಯನ್ನು ಭಾವುಕವಾಗಿಸಿವೆ.**
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಫಿನಾಲೆ ಹತ್ತಿರವಾಗುತ್ತಿದ್ದಂತೆ ಆಟ ಮತ್ತಷ್ಟು ರೋಚಕವಾಗುತ್ತಿದೆ. ಸ್ಪರ್ಧಿಗಳಿಗೆ ಬಿಗ್ ಬಾಸ್ ದಿನಕ್ಕೊಂದು ಟ್ವಿಸ್ಟ್ ನೀಡುತ್ತಿದ್ದಾರೆ. ಆದರೆ ನವೆಂಬರ್ 25ರ ಸಂಚಿಕೆಯಲ್ಲಿ ನಡೆದ ಟಾಸ್ಕ್ ಮಾತ್ರ ಸ್ಪರ್ಧಿಗಳನ್ನು ಭಾವುಕರನ್ನಾಗಿಸಿತು.
ಇಷ್ಟು ದಿನ ನಗು, ಜಗಳ, ಟಾಸ್ಕ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಗಗನ್ ಚಿನ್ನಪ್ಪ ಅವರ ಬದುಕಿನ ನೋವಿನ ಅಧ್ಯಾಯವೊಂದು ತೆರೆದುಕೊಂಡಿದೆ.
**ಸೀಕ್ರೆಟ್ ಸೇಫ್ ಎಂದಿದ್ದ ಬಿಗ್ ಬಾಸ್ ಕೊಟ್ರು ಟ್ವಿಸ್ಟ್!**
ಮನೆಯಲ್ಲಿರುವ ಪ್ರತಿಯೊಬ್ಬ ಸ್ಪರ್ಧಿಗೂ ತಮ್ಮ ಜೀವನದ ಯಾವುದಾದರೂ ಒಂದು ರಹಸ್ಯವನ್ನು ಹಂಚಿಕೊಳ್ಳುವಂತೆ ಬಿಗ್ ಬಾಸ್ ಸೂಚಿಸಿದ್ದರು. ಸ್ಪರ್ಧಿಗಳು ಹೇಳುವ ವಿಚಾರಗಳು ಸುರಕ್ಷಿತವಾಗಿರುತ್ತವೆ ಎಂಬ ಭರವಸೆಯನ್ನೂ ನೀಡಿದ್ದರು.
ಆದರೆ ಆ ಬಳಿಕ ಬಿಗ್ ಬಾಸ್ ಆಟಕ್ಕೆ ಅನಿರೀಕ್ಷಿತ ತಿರುವು ನೀಡಿದರು. ಗಾನವಿ ಮತ್ತು ಆಸಿಯಾ ನಡುವೆ ಬಜರ್ ಒತ್ತುವ ಸ್ಪರ್ಧೆ ನಡೆಯಿತು. ಆಸಿಯಾಗಿಂತ ವೇಗವಾಗಿ ಬಜರ್ ಒತ್ತಿದ ಗಾನವಿ ಗೆಲುವು ಸಾಧಿಸಿದರು.
ಗೆದ್ದ ಗಾನವಿಗೆ ಮನೆಯಲ್ಲಿರುವ ಯಾರಾದರೂ ಒಬ್ಬರ ಸೀಕ್ರೆಟ್ ಬಹಿರಂಗಪಡಿಸುವ ಅವಕಾಶ ಸಿಕ್ಕಿತು. ಈ ವೇಳೆ ಗಾನವಿ ಆಯ್ಕೆ ಮಾಡಿದ್ದು ಗಗನ್ ಚಿನ್ನಪ್ಪ ಅವರನ್ನು.
**ಎಂಟು ವರ್ಷಗಳ ಹಿಂದೆ ಗಗನ್ ಬದುಕಿನಲ್ಲಿ ನಡೆದಿದ್ದೇನು?**
ಗಾನವಿ ಅವರ ಆಯ್ಕೆಯಂತೆ ಬಿಗ್ ಬಾಸ್ ಗಗನ್ ಅವರ ವಿಡಿಯೋ ಪ್ಲೇ ಮಾಡಿದರು. ಈ ವೇಳೆ ಗಗನ್ ತಮ್ಮ ಬದುಕಿನಲ್ಲಿ ಎಂಟು ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡರು.
ಗಗನ್ ತಮ್ಮ ಆತ್ಮೀಯ ಗೆಳೆಯನ ಜೊತೆಗೂಡಿ ಹೊಸದೊಂದು ಉದ್ಯಮ ಆರಂಭಿಸಿದ್ದರಂತೆ. ಆರಂಭದಲ್ಲಿ ಎಲ್ಲವೂ ಅಂದುಕೊಂಡಂತೆಯೇ ನಡೆಯುತ್ತಿತ್ತು. ಆದರೆ ಒಂದು ದಿನ ಏಕಾಏಕಿ ಅವರ ಗೆಳೆಯ ಯಾರಿಗೂ ಹೇಳದೆ ಕಾಣೆಯಾಗಿದ್ದರು.
ಗೆಳೆಯನಿಗಾಗಿ ಹುಡುಕಾಟ ನಡೆಸಿದ ಗಗನ್ಗೆ ಆತ ಆತ್ಮಹತ್ಯೆಯಿಂದ ಮೃತಪಟ್ಟಿರುವ ಸುದ್ದಿ ತಿಳಿಯಿತು. ಈ ಘಟನೆ ಗಗನ್ ಅವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತ್ತಂತೆ.
**₹500 ನೋಟಿನ ಮೇಲೆ ಕ್ಷಮೆ ಕೋರಿದ್ದ ಗೆಳೆಯ!**
ತಮ್ಮ ಗೆಳೆಯ 500 ರೂಪಾಯಿ ನೋಟಿನ ಮೇಲೆ ಕ್ಷಮೆ ಕೋರುವ ಸಂದೇಶವೊಂದನ್ನು ಬರೆದಿಟ್ಟಿದ್ದಾಗಿ ಗಗನ್ ಹೇಳಿಕೊಂಡಿದ್ದಾರೆ.
ಆತ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದು ಇಂದಿಗೂ ತಿಳಿದಿಲ್ಲ ಎಂದು ಗಗನ್ ತಿಳಿಸಿದ್ದಾರೆ. ಗೆಳೆಯನನ್ನು ಕಳೆದುಕೊಂಡ ಆಘಾತದಿಂದ ಹೊರಬರಲು ಸಾಕಷ್ಟು ಸಮಯ ಬೇಕಾಯಿತು ಎಂದಿದ್ದಾರೆ.
**ಗಗನ್ ಮಾತು ಕೇಳಿ ಭಾವುಕರಾದ ಮನೆಮಂದಿ!**
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಎಷ್ಟೇ ಪೈಪೋಟಿ, ಜಗಳಗಳಿದ್ದರೂ ಪ್ರತಿಯೊಬ್ಬರ ಬದುಕಿನ ಹಿಂದೆಯೂ ಹೇಳಿಕೊಳ್ಳದ ಅನೇಕ ನೋವುಗಳಿರುತ್ತವೆ. ಗಗನ್ ಹಂಚಿಕೊಂಡ ಈ ಘಟನೆ ಕೇಳಿ ಸಹಸ್ಪರ್ಧಿಗಳೂ ಭಾವುಕರಾದರು.
ಆಟದ ಭಾಗವಾಗಿ ಆರಂಭವಾದ ಸೀಕ್ರೆಟ್ ಟಾಸ್ಕ್ ಕೊನೆಗೆ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.