**ಫಿನಾಲೆ ಹೊಸ್ತಿಲಲ್ಲಿ ಐವರಿಗೆ ಬಿಗ್ ಶಾಕ್!ಯಶಸ್‌ಗೆ ಗುಳ್ಳೆನರಿ ಪಟ್ಟ ಕೊಟ್ಟ ಬಿಗ್ ಬಾಸ್..ಆಟದ ದಿಕ್ಕೇ ಬದಲಾಗುತ್ತಾ?**

**ಫಿನಾಲೆ ಹೊಸ್ತಿಲಲ್ಲಿ ಐವರಿಗೆ ಬಿಗ್ ಶಾಕ್!ಯಶಸ್‌ಗೆ ಗುಳ್ಳೆನರಿ ಪಟ್ಟ ಕೊಟ್ಟ ಬಿಗ್ ಬಾಸ್..ಆಟದ ದಿಕ್ಕೇ ಬದಲಾಗುತ್ತಾ?**

**ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಕಾವು ಜೋರಾಗಿದೆ. ಈ ವಾರ ಐವರು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಎಲಿಮಿನೇಷನ್ ಭೀತಿ ಎದುರಿಸುತ್ತಿದ್ದಾರೆ. ಇದರ ನಡುವೆಯೇ ಯಶಸ್‌ಗೆ ಬಿಗ್ ಬಾಸ್ ಕೊಟ್ಟಿರುವ ಸೀಕ್ರೆಟ್ ಟಾಸ್ಕ್ ಇಡೀ ಆಟದ ಲೆಕ್ಕಾಚಾರವನ್ನೇ ತಲೆಕೆಳಗಾಗಿಸುವ ಸಾಧ್ಯತೆ ಇದೆ.**

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ 79 ದಿನಗಳು ಕಳೆದಿವೆ. ಫಿನಾಲೆಗೆ ಕೆಲವೇ ವಾರಗಳು ಬಾಕಿ ಉಳಿದಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ನಾಮಿನೇಷನ್‌ನಿಂದ ಪಾರಾಗಲು ಸ್ಪರ್ಧಿಗಳು ಎಷ್ಟೇ ಸರ್ಕಸ್ ಮಾಡಿದರೂ ಅಂತಿಮವಾಗಿ ಐವರಿಗೆ ಎಲಿಮಿನೇಷನ್ ಭೀತಿ ಎದುರಾಗಿದೆ.

**ಈ ವಾರ ನಾಮಿನೇಟ್ ಆದ ಐವರು ಯಾರು?**

– ಸೌಂದರ್ಯಾ ಶೆಟ್ಟಿ
– ಆಸಿಯಾ
– ಕಿರಣ್ ಶಾಸ್ತ್ರಿ
– ಜಗದೀಶ್
– ಯಶಸ್

ಈ ಐವರಲ್ಲಿ ಯಾರು ಮನೆಯಿಂದ ಹೊರಹೋಗಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

**ಜೋಕರ್ ಕಾರ್ಡ್‌ನಿಂದ ಬದಲಾಯ್ತು ಲೆಕ್ಕಾಚಾರ!**

ಈ ವಾರ ಧನುಷ್ ಕೈಯಲ್ಲಿರುವ ಜೋಕರ್ ಕಾರ್ಡ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮತ್ತೊಂದೆಡೆ, ಜಗದೀಶ್ ಅವರನ್ನು ಮನವೊಲಿಸಿ ನಾಮಿನೇಷನ್‌ನಿಂದ ಪಾರಾಗಲು ಸೌಂದರ್ಯಾ ಶೆಟ್ಟಿ ಪ್ರಯತ್ನಿಸಿದ್ದರು. ಆದರೆ ಅವರ ಲೆಕ್ಕಾಚಾರ ಕೈಕೊಟ್ಟಿದೆ.

**ಯಶಸ್‌ಗೆ ಪ್ರತಿ ವಾರವೂ ಅಗ್ನಿಪರೀಕ್ಷೆ!**

ಕ್ಯಾಪ್ಟನ್ ಗಗನ್ ಚಿನ್ನಪ್ಪ ತೆಗೆದುಕೊಂಡ ನಿರ್ಧಾರದಿಂದ ಯಶಸ್ ಈ ವಾರ ಮಾತ್ರವಲ್ಲದೆ ಮುಂದಿನ ಎಲ್ಲ ವಾರಗಳಿಗೂ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಫಿನಾಲೆ ತಲುಪಬೇಕಾದರೆ ಪ್ರತಿ ವಾರವೂ ಯಶಸ್ ವೀಕ್ಷಕರ ಬೆಂಬಲ ಪಡೆಯಬೇಕಿದೆ.

ಇಷ್ಟು ದಿನ ಸೌಂದರ್ಯಾ ಜೊತೆ ಆಪ್ತವಾಗಿದ್ದ ಯಶಸ್, ಇನ್ಮುಂದೆ ಸ್ನೇಹಕ್ಕಿಂತ ಆಟಕ್ಕೆ ಹೆಚ್ಚು ಆದ್ಯತೆ ನೀಡ್ತಾರಾ ಎಂಬ ಕುತೂಹಲವೂ ಮೂಡಿದೆ.

**ಗುಳ್ಳೆನರಿ ಪಾತ್ರದಲ್ಲಿ ಯಶಸ್!**

ನಿರಂತರ ನಾಮಿನೇಷನ್ ಸಂಕಷ್ಟದಲ್ಲಿರುವ ಯಶಸ್‌ಗೆ ಬಿಗ್ ಬಾಸ್ ಮತ್ತೊಂದು ಅವಕಾಶ ನೀಡಿದ್ದಾರೆ. ಗುಳ್ಳೆನರಿಯ ಪಾತ್ರ ನೀಡಿ ಸೀಕ್ರೆಟ್ ಟಾಸ್ಕ್ ವಹಿಸಿದ್ದಾರೆ. ತಂಡದೊಳಗೇ ಇದ್ದುಕೊಂಡು ಯಾರಿಗೂ ಅನುಮಾನ ಬಾರದಂತೆ ತಂಡದ ಆಟವನ್ನು ಕೆಡಿಸುವ ಜವಾಬ್ದಾರಿ ಯಶಸ್ ಹೆಗಲೇರಿದೆ.

ಈ ಟಾಸ್ಕ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ವಿಶೇಷ ಅಧಿಕಾರ ಸಿಗಲಿದೆ. ಬಿಗ್ ಬಾಸ್ ಕೊಟ್ಟಿರುವ ಈ ಟಾಸ್ಕ್ ಬಗ್ಗೆ ಯಶಸ್ ಕೂಡ ಸಖತ್ ಎಕ್ಸೈಟ್ ಆಗಿದ್ದಾರೆ.

**ಗುಳ್ಳೆನರಿ ಆಟದಿಂದ ಯಶಸ್ ಅದೃಷ್ಟ ಬದಲಾಗುತ್ತಾ?**

ಸದ್ಯ ಬಿಗ್ ಬಾಸ್ ಮನೆಯಲ್ಲಿ 10 ಮಂದಿ ಸ್ಪರ್ಧಿಗಳಿದ್ದಾರೆ. ಎಲ್ಲರ ಕಣ್ಣು ಟಾಪ್ 5 ಸ್ಥಾನದ ಮೇಲಿದೆ. ಇಂತಹ ಸಮಯದಲ್ಲೇ ಯಶಸ್‌ಗೆ ಸಿಕ್ಕಿರುವ ಸೀಕ್ರೆಟ್ ಟಾಸ್ಕ್ ಹೊಸ ಸಂಚಲನ ಮೂಡಿಸಿದೆ.

ಅಷ್ಟಕ್ಕೂ ಯಶಸ್ ಗುಳ್ಳೆನರಿ ಅನ್ನೋದು ಮನೆಯವರಿಗೆ ಗೊತ್ತಾಗುತ್ತಾ? ಸೀಕ್ರೆಟ್ ಟಾಸ್ಕ್‌ನಲ್ಲಿ ಗೆದ್ದು ವಿಶೇಷ ಅಧಿಕಾರ ಪಡೆದುಕೊಳ್ತಾರಾ? ಈ ವಾರ ಐವರಲ್ಲಿ ಯಾರ ಬಿಗ್ ಬಾಸ್ ಪಯಣ ಅಂತ್ಯವಾಗಲಿದೆ ಎಂಬುದೇಸದ್ಯದ ಕುತೂಹಲ

Leave a Reply

Your email address will not be published. Required fields are marked *