‘17 ವರ್ಷಗಳ ಒಡನಾಟದಲ್ಲಿ ಒಂದೇ ಒಂದು ದಿನವೂ ಜಗಳವಾಡಿಲ್ಲ!’ ಶಂಕರ್ ನಾಗ್ ನಿಜ ಜೀವನದಲ್ಲಿ ಹೇಗಿದ್ರು? ಅರುಂಧತಿ ಬಿಚ್ಚಿಟ್ಟ ಅಪರೂಪದ ಪ್ರೇಮಕಥೆ!
ತೆರೆಮೇಲೆ ಖಡಕ್ ಹೀರೋ ಆಗಿ ಮಿಂಚಿದ್ದ ಶಂಕರ್ ನಾಗ್ ನಿಜ ಜೀವನದಲ್ಲಿ ಹೇಗಿದ್ದರು ಗೊತ್ತಾ? ಮನೆಯವರ ವಿರೋಧ, ಆರು ವರ್ಷಗಳ ಪ್ರೀತಿ, ಮದುವೆ ಬೇಡ ಎಂದಿದ್ದ ಅರುಂಧತಿ… ಕೊನೆಗೂ ಒಂದಾದ ಈ ಜೋಡಿಯ ಸುಂದರ ಪ್ರೇಮಕಥೆಯ ಹಿಂದೆ ಇದೆ ಭಾವುಕ ಕಥೆ!
ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸಿದ ಅದ್ಭುತ ಪ್ರತಿಭೆ ಶಂಕರ್ ನಾಗ್. ಸಿನಿಮಾ, ರಂಗಭೂಮಿ, ಕಿರುತೆರೆ, ಬೆಂಗಳೂರಿನ ಮೆಟ್ರೋ ಕನಸು ಹೀಗೆ ತಮ್ಮ ದೂರದೃಷ್ಟಿಯ ಆಲೋಚನೆಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದವರು.
ಆದರೆ ಶಂಕರ್ ನಾಗ್ ಅವರ ಸಾಧನೆಯ ಬದುಕಿನ ಹಿಂದೆ ಅಷ್ಟೇ ಸುಂದರವಾದ ಪ್ರೇಮಕಥೆಯೂ ಇದೆ. ಅರುಂಧತಿ ನಾಗ್ ಅವರೊಂದಿಗೆ ಅರಳಿದ ಪ್ರೀತಿ, ಮದುವೆ ಹಾಗೂ ದಾಂಪತ್ಯ ಜೀವನದ ಹಲವು ಅಪರೂಪದ ಸಂಗತಿಗಳನ್ನು ಸ್ವತಃ ಅರುಂಧತಿ ನಾಗ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಆರಂಭದಲ್ಲಿ ಶಂಕರ್ ಕಡೆ ತಿರುಗಿಯೂ ನೋಡುತ್ತಿರಲಿಲ್ಲವಂತೆ!
ಶಂಕರ್ ನಾಗ್ ಮತ್ತು ಅರುಂಧತಿ ಬೇರೆ ಬೇರೆ ಕಾಲೇಜುಗಳಲ್ಲಿ ಓದುತ್ತಿದ್ದರು. ಎರಡೂ ಕಾಲೇಜುಗಳ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಇತ್ತಂತೆ. ಸ್ಪರ್ಧೆಗಳು ನಡೆದಾಗ ಶಂಕರ್ ನಾಗ್ ಕಡೆ ತಿರುಗಿಯೂ ನೋಡುತ್ತಿರಲಿಲ್ಲ ಎಂದು ಅರುಂಧತಿ ನೆನಪಿಸಿಕೊಂಡಿದ್ದಾರೆ.
ಆದರೆ ಇವರಿಬ್ಬರನ್ನು ಹತ್ತಿರವಾಗಿಸಿದ್ದು ರಂಗಭೂಮಿ!
ಇಂಡಿಯನ್ ನ್ಯಾಷನಲ್ ಥಿಯೇಟರ್ ಆಯೋಜಿಸಿದ್ದ ನಾಟಕವೊಂದರಲ್ಲಿ ಭಾಗವಹಿಸಲು ಗುಜರಾತಿಗೆ ತೆರಳಿದ್ದ ಸಂದರ್ಭದಲ್ಲಿ ಶಂಕರ್ ನಾಗ್ ಅವರನ್ನು ಭೇಟಿಯಾಗಿದ್ದರಂತೆ. ಅಲ್ಲಿಯೇ ಇಬ್ಬರ ನಡುವೆ ಮಾತುಕತೆ ಶುರುವಾಗಿತ್ತು. ಬಹುಶಃ ಆಗಲೇ ಶಂಕರ್ ಮೇಲೆ ಪ್ರೀತಿ ಹುಟ್ಟಿರಬೇಕು ಎಂದು ಅರುಂಧತಿ ಹೇಳಿಕೊಂಡಿದ್ದಾರೆ.
ಒಂದೆರಡು ಬಾರಿ ಮದುವೆಯೇ ಬೇಡ ಎಂದಿದ್ದ ಅರುಂಧತಿ!
ಸುಮಾರು ಆರು ವರ್ಷಗಳ ಪರಿಚಯ ಮತ್ತು ಪ್ರೀತಿಯ ನಂತರ 1980ರಲ್ಲಿ ಶಂಕರ್ ನಾಗ್ ಮತ್ತು ಅರುಂಧತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದಾಗ ಅರುಂಧತಿ ಅವರಿಗೆ 23 ವರ್ಷ ವಯಸ್ಸಾಗಿತ್ತು.
ಆದರೆ ಇವರ ಪ್ರೇಮಕಥೆ ಅಷ್ಟು ಸುಲಭವಾಗಿರಲಿಲ್ಲ. ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಒಂದೆರಡು ಬಾರಿ ಈ ಸಂಬಂಧ ಮುಂದುವರಿಸುವುದು ಬೇಡ ಎಂದು ಅರುಂಧತಿ ಶಂಕರ್ ನಾಗ್ ಅವರಿಗೆ ಹೇಳಿದ್ದರಂತೆ.
ಆದರೆ ತಮ್ಮಿಬ್ಬರ ಸಂಬಂಧದಲ್ಲಿ ಹೆಚ್ಚು ತಿಳುವಳಿಕೆ ಹೊಂದಿದ್ದವರು ಶಂಕರ್ ನಾಗ್. ಅವರು ತುಂಬಾ ಸರಳ ವ್ಯಕ್ತಿಯಾಗಿದ್ದರು ಎಂದು ಅರುಂಧತಿ ನೆನಪಿಸಿಕೊಂಡಿದ್ದಾರೆ.
‘ಇದನ್ನು ಯಾರೂ ನಂಬುವುದಿಲ್ಲ!’ ಶಂಕರ್ ಬಗ್ಗೆ ಅರುಂಧತಿ ಹೇಳಿದ್ದೇನು?
ತೆರೆಮೇಲೆ ಹೊಡೆದಾಟ, ಖಡಕ್ ಡೈಲಾಗ್, ಸಿಡುಕಿನ ಸ್ವಭಾವದ ಪಾತ್ರಗಳ ಮೂಲಕ ಶಂಕರ್ ನಾಗ್ ಜನಪ್ರಿಯರಾಗಿದ್ದರು. ಆದರೆ ನಿಜ ಜೀವನದಲ್ಲಿ ಅವರ ಸ್ವಭಾವ ಅದಕ್ಕೆ ಸಂಪೂರ್ಣ ವಿರುದ್ಧವಾಗಿತ್ತಂತೆ.
“ನನಗೆ ಅವನು ಹದಿನೇಳು ವರ್ಷಗಳಿಂದ ಗೊತ್ತಿತ್ತು. ಒಂದು ದಿನವೂ ನಮ್ಮಿಬ್ಬರ ಮಧ್ಯೆ ಜಗಳ ಆಗಿಲ್ಲ. ಇದನ್ನು ಯಾರೂ ನಂಬುವುದಿಲ್ಲ” ಎಂದು ಅರುಂಧತಿ ಹೇಳಿಕೊಂಡಿದ್ದಾರೆ.
ತೆರೆಮೇಲೆ ಆ್ಯಕ್ಷನ್ ಹೀರೋ ಆಗಿದ್ದ ಶಂಕರ್ ನಾಗ್, ನಿಜ ಜೀವನದಲ್ಲಿ ಸರಳತೆ ಮತ್ತು ತಿಳುವಳಿಕೆ ಹೊಂದಿದ್ದ ವ್ಯಕ್ತಿಯಾಗಿದ್ದರು ಎಂಬುದನ್ನು ಅರುಂಧತಿ ಅವರ ಮಾತುಗಳು ತೆರೆದಿಡುತ್ತವೆ.
ಪ್ರೀತಿಯಲ್ಲಷ್ಟೇ ಅಲ್ಲ, ಕಲೆಯಲ್ಲೂ ಒಂದಾಗಿದ್ದ ಜೋಡಿ!
ಮದುವೆಯ ನಂತರ ಬೆಂಗಳೂರಿಗೆ ಬಂದ ಶಂಕರ್ ನಾಗ್ ಮತ್ತು ಅರುಂಧತಿ ಸಿನಿಮಾ ಹಾಗೂ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.
‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಪರಮೇಶಿ ಪ್ರೇಮ ಪ್ರಸಂಗ’, ‘ಆಕ್ಸಿಡೆಂಟ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಪ್ರೀತಿ, ಕಲೆ ಹಾಗೂ ಕನಸುಗಳೊಂದಿಗೆ ಸಾಗುತ್ತಿದ್ದ ಈ ಜೋಡಿಯ ಬದುಕಿನಲ್ಲಿ 1990ರಲ್ಲಿ ಮರೆಯಲಾಗದ ದುರಂತವೊಂದು ಸಂಭವಿಸಿತು.
ಸುಂದರ ಪ್ರೇಮಕಥೆಗೆ ದುರಂತ ಅಂತ್ಯ ತಂದ ಆ ಕರಾಳ ದಿನ!
1990ರ ಸೆಪ್ಟೆಂಬರ್ 30ರಂದು ‘ಜೋಕುಮಾರಸ್ವಾಮಿ’ ಸಿನಿಮಾದ ಪೂಜೆಗಾಗಿ ಶಂಕರ್ ನಾಗ್ ಕುಟುಂಬ ಸಮೇತ ಬಾಗಲಕೋಟೆಯ ಲೋಕಾಪುರಕ್ಕೆ ತೆರಳುತ್ತಿದ್ದರು. ಪತ್ನಿ ಅರುಂಧತಿ ಹಾಗೂ ಮಗಳು ಕಾವ್ಯ ಕೂಡ ಅವರೊಂದಿಗೆ ಪ್ರಯಾಣಿಸುತ್ತಿದ್ದರು.
ದಾವಣಗೆರೆ ಸಮೀಪದ ಆನಗೋಡು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಂಕರ್ ನಾಗ್ ಹಾಗೂ ಕಾರು ಚಾಲಕ ಲಿಂಗಣ್ಣ ಸ್ಥಳದಲ್ಲೇ ಮೃತಪಟ್ಟಿದ್ದರು.
ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆಯೊಂದು ಕಣ್ಮರೆಯಾಗಿತ್ತು. ಅರುಂಧತಿ ತಮ್ಮ ಪ್ರೀತಿಯ ಸಂಗಾತಿಯನ್ನು ಕಳೆದುಕೊಂಡಿದ್ದರು.
ಶಂಕರ್ ನಾಗ್ ನಮ್ಮನ್ನಗಲಿ ದಶಕಗಳೇ ಕಳೆದಿವೆ. ಆದರೆ ಅವರ ಸಿನಿಮಾಗಳು, ದೂರದೃಷ್ಟಿಯ ಕನಸುಗಳು ಹಾಗೂ ಅರುಂಧತಿ ಅವರೊಂದಿಗಿನ ಅಪರೂಪದ ಪ್ರೇಮಕಥೆ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿದೆ.