**ಮಗನ ಸಾವಿಗೆ ಕಣ್ಣೀರಿಟ್ಟ ತಾಯಿ..! ಸಿಸಿಟಿವಿ ದೃಶ್ಯ ನೋಡಿದ ಪೊಲೀಸರಿಗೆ ಕಾದಿತ್ತು ಬಿಗ್ ಶಾಕ್!**
**ತುಮಕೂರು:** ಮನೆಯ ಹೊರಗೆ ಮಲಗಿದ್ದ ಯುವಕ ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದ. ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಯಾರೋ ಅಪರಿಚಿತರು ಮಗನನ್ನು ಕೊಲೆ ಮಾಡಿದ್ದಾರೆ ಎಂದು ಗೋಳಾಡಿದ್ದಳು. ಆದರೆ ಪೊಲೀಸರ ಕೈಗೆ ಸಿಕ್ಕ ಸಿಸಿಟಿವಿ ದೃಶ್ಯವೊಂದು ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿದೆ. ಮಗನ ಸಾವಿನ ಹಿಂದೆ ತಾಯಿಯ ಕೈವಾಡವೇ ಇದೆ ಎಂಬ ಆರೋಪ ಕೇಳಿಬಂದಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ತುಮಕೂರು ತಾಲೂಕಿನ ಜಕ್ಕೇನಹಳ್ಳಿ ಗ್ರಾಮದ ಮುತ್ತುರಾಜ್ ಕೊಲೆ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಮಗನ ಕೊಲೆ ಆರೋಪದ ಮೇಲೆ ತಾಯಿ ಶಿವಮ್ಮಳನ್ನು ತುಮಕೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
**ಪ್ರೀತಿಯ ವಿಚಾರಕ್ಕೆ ತಾಯಿ-ಮಗನ ನಡುವೆ ಮನಸ್ತಾಪ!**
ಮುತ್ತುರಾಜ್ ಅದೇ ಗ್ರಾಮದ ಅನ್ಯಜಾತಿಯ ವಿವಾಹಿತ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳೂ ಇದ್ದರು. ಆದರೂ ಆಕೆಯನ್ನೇ ಮದುವೆಯಾಗುವುದಾಗಿ ಮುತ್ತುರಾಜ್ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಮಗನ ಈ ನಿರ್ಧಾರದಿಂದ ತಾಯಿ ಶಿವಮ್ಮ ತೀವ್ರ ಅಸಮಾಧಾನಗೊಂಡಿದ್ದಳು ಎಂದು ತಿಳಿದುಬಂದಿದೆ.
**ಬುದ್ಧಿ ಕಲಿಸಲು ಹೋಗಿ ಮಗನ ಪ್ರಾಣವನ್ನೇ ತೆಗೆದಳಾ?**
ಮಗನ ನಿರ್ಧಾರದಿಂದ ಬೇಸರಗೊಂಡಿದ್ದ ಶಿವಮ್ಮ ಆತನಿಗೆ ಬುದ್ಧಿ ಕಲಿಸಲು ಮುಂದಾಗಿದ್ದಳು ಎನ್ನಲಾಗಿದೆ. ಮನೆಯ ಹೊರಗೆ ಮಲಗಿದ್ದ ಮುತ್ತುರಾಜ್ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ ಆರೋಪ ಶಿವಮ್ಮ ವಿರುದ್ಧ ಕೇಳಿಬಂದಿದೆ. ಹಲ್ಲೆಯ ತೀವ್ರತೆಗೆ ಮುತ್ತುರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
**ಮಗನ ಸಾವಿಗೆ ಕಣ್ಣೀರಿಟ್ಟಿದ್ದ ತಾಯಿ!**
ಮರುದಿನ ಮಗನ ಮೃತದೇಹ ಕಂಡು ಶಿವಮ್ಮ ಗೋಳಾಡಿದ್ದಳು. ತನಗೆ ಏನೂ ತಿಳಿದಿಲ್ಲವೆಂಬಂತೆ ವರ್ತಿಸಿದ್ದಲ್ಲದೆ, ಯಾರೋ ಅಪರಿಚಿತರು ಮಗನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಳು ಎನ್ನಲಾಗಿದೆ. ಆದರೆ ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಬಯಲಾಗಿದೆ.
**ಸಿಸಿಟಿವಿಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ರಹಸ್ಯ!**
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಶಿವಮ್ಮಳ ಕೈವಾಡದ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ. ಈ ಸಾಕ್ಷ್ಯಗಳ ಆಧಾರದ ಮೇಲೆ ಶಿವಮ್ಮಳನ್ನು ಬಂಧಿಸಿರುವ ತುಮಕೂರು ಗ್ರಾಮಾಂತರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಗನ ಮದುವೆ ವಿಚಾರಕ್ಕೆ ಶುರುವಾದ ಮನಸ್ತಾಪ ಕೊಲೆಯಲ್ಲಿ ಅಂತ್ಯವಾಯ್ತಾ? ಈ ಘಟನೆ ಜಕ್ಕೇನಹಳ್ಳಿ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.