**ಲಕ್ಷ್ಮೀ ಪೂಜೆ ಮಾಡಿದ್ರೆ ಹಣದ ಮಳೆ ಸುರಿಯುತ್ತಂತೆ! ಯುವತಿಯರಿಗೆ ಆಮಿಷವೊಡ್ಡಿದ್ದ ಆರೋಪದಲ್ಲಿ ಅರ್ಚಕ ಅರೆಸ್ಟ್!**
**ಬಳ್ಳಾರಿ:** ವಿಶೇಷ ಲಕ್ಷ್ಮೀ ಪೂಜೆ ಮಾಡಿದರೆ ಹಣದ ಮಳೆಯೇ ಸುರಿಯುತ್ತದೆ, ಅದೃಷ್ಟದ ಬಾಗಿಲು ತೆರೆಯುತ್ತದೆ ಎಂಬ ಆಮಿಷ. ಧಾರ್ಮಿಕ ನಂಬಿಕೆಯನ್ನೇ ದುರುಪಯೋಗಪಡಿಸಿಕೊಂಡು ಯುವತಿಯರನ್ನು ವಂಚಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪ ಕೇಳಿಬಂದಿದ್ದ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ.

ಎರಡು ವಾರಗಳಿಂದ ಪ್ರಮುಖ ಆರೋಪಿಗಾಗಿ ಬಲೆ ಬೀಸಿದ್ದ ಬಳ್ಳಾರಿ ಪೊಲೀಸರು ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಕಮ್ಮಾರ ಕೃಷ್ಣಮಾಚಾರಿ (47) ಎಂಬಾತನನ್ನು ಬಂಧಿಸಿ ಬಳ್ಳಾರಿಗೆ ಕರೆತಂದಿದ್ದಾರೆ.
**ಹಣದ ಮಳೆಯ ಹೆಸರಿನಲ್ಲಿ ವಂಚನೆಯ ಜಾಲ!**
ಆಂಧ್ರಪ್ರದೇಶದ ಅನಂತಪುರ ಸಮೀಪದ ಆಕತೋಟಪಲ್ಲಿಯ ಮಹಾಕಾಳಿ ದೇವಸ್ಥಾನದ ಅರ್ಚಕನಾಗಿರುವ ಕೃಷ್ಣಮಾಚಾರಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಕೈ-ಕಾಲುಗಳ ಮೇಲೆ ಯಾವುದೇ ಕಲೆಗಳಿಲ್ಲದ ಕನ್ಯೆಯರು ವಿಶೇಷ ಲಕ್ಷ್ಮೀ ಪೂಜೆ ಮಾಡಿದರೆ ಹಣದ ಮಳೆಯಾಗುತ್ತದೆ ಎಂದು ನಂಬಿಸುತ್ತಿದ್ದ ಎನ್ನಲಾಗಿದೆ. ಇದೇ ಆಮಿಷವೊಡ್ಡಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪ ಈತನ ಮೇಲಿದೆ. ಅಲ್ಲದೆ, ಯುವತಿಯರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿ ವಂಚಿಸುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.
**ಯುವತಿಯರ ವೇಷದಲ್ಲಿ ಕಾರ್ಯಾಚರಣೆಗೆ ಇಳಿದ ಅಕ್ಕ ಪಡೆ!**
ಎರಡು ವಾರಗಳ ಹಿಂದೆ ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಬಳ್ಳಾರಿ ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್ ಅವರ ನಿರ್ದೇಶನದಂತೆ ಅಕ್ಕ ಪಡೆ ಮಹಿಳಾ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಇಳಿದಿದ್ದರು.
ಮಹಿಳಾ ಪೊಲೀಸ್ ಸಿಬ್ಬಂದಿಯೇ ಯುವತಿಯರ ವೇಷ ಧರಿಸಿ ಕಾರ್ಯಾಚರಣೆ ನಡೆಸಿದ್ದರು. ಆರಂಭದಲ್ಲೇ 11 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.
**ಶ್ರೀಶೈಲಂನಲ್ಲಿ ಸಿಕ್ಕಿಬಿದ್ದ ಪ್ರಮುಖ ಆರೋಪಿ!**
ಕೃಷ್ಣಮಾಚಾರಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಕೊನೆಗೂ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬಳ್ಳಾರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.
**15 ಮಂದಿ ಅರೆಸ್ಟ್, ಇನ್ನೆಷ್ಟು ಮಂದಿ ಈ ಜಾಲದಲ್ಲಿದ್ದಾರೆ?**
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 15 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಕ ಪಡೆ ಮಹಿಳಾ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ವಂಚನೆಯ ಜಾಲ ಎಷ್ಟು ವಿಸ್ತಾರವಾಗಿದೆ? ಹಣದ ಆಸೆಗೆ ಬಿದ್ದು ಇನ್ನೆಷ್ಟು ಯುವತಿಯರು ವಂಚನೆಗೆ ಒಳಗಾಗಿದ್ದಾರೆ? ಈ ಜಾಲದಲ್ಲಿ ಮತ್ತಷ್ಟು ಜನರ ಕೈವಾಡವಿದೆಯೇ? ಎಂಬ ಪ್ರಶ್ನೆಗಳಿಗೆ ಪೊಲೀಸರ ಮುಂದಿನ ತನಿಖೆಯಿಂದ ಉತ್ತರ ಸಿಗಬೇಕಿದೆ.