**ಗೃಹಲಕ್ಷ್ಮಿಯ 2 ಸಾವಿರ ರೂ. ಉಳಿಸಿ ಉದ್ಯಮಿಯಾದ ಅಂಗನವಾಡಿ ಕಾರ್ಯಕರ್ತೆ! ಶಕುಂತಳಾ ಸಾಧನೆಗೆ ಮೆಚ್ಚುಗೆ**
**ಮಂಗಳೂರು:** ಪ್ರತಿ ತಿಂಗಳು ಸಿಗುವ 2 ಸಾವಿರ ರೂಪಾಯಿಯಿಂದ ಏನು ಮಾಡಲು ಸಾಧ್ಯ ಎಂದು ಯೋಚಿಸುವವರೇ ಹೆಚ್ಚು. ಆದರೆ ಇಲ್ಲೊಬ್ಬ ಅಂಗನವಾಡಿ ಕಾರ್ಯಕರ್ತೆ ಅದೇ ಹಣವನ್ನು ಉಳಿತಾಯ ಮಾಡಿ ತಮ್ಮ ಬಹುಕಾಲದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಉದ್ಯಮಕ್ಕೆ ಬಂಡವಾಳವನ್ನಾಗಿ ಮಾಡಿಕೊಂಡು ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾವಿನಕಟ್ಟೆ ನಿವಾಸಿ ಶಕುಂತಳಾ ಜೆ. ಕುಂದರ್ ಅವರ ಯಶೋಗಾಥೆ ಇತರ ಮಹಿಳೆಯರಿಗೂ ಸ್ಫೂರ್ತಿಯಾಗಿದೆ.
**ತಿಂಗಳಿಗೆ 2 ಸಾವಿರ, ಮೂರು ವರ್ಷಕ್ಕೆ 72 ಸಾವಿರ!**
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುತ್ತಿದ್ದ 2,000 ರೂಪಾಯಿಯನ್ನು ಶಕುಂತಳಾ ಉಳಿತಾಯ ಮಾಡುತ್ತಾ ಬಂದಿದ್ದರು. ಹೀಗೆ ಮೂರು ವರ್ಷಗಳಲ್ಲಿ ಬರೋಬ್ಬರಿ 72 ಸಾವಿರ ರೂಪಾಯಿ ಸಂಗ್ರಹಿಸಿದ್ದರು. ಈ ಹಣಕ್ಕೆ ತಮ್ಮ ಇತರ ಉಳಿತಾಯವನ್ನೂ ಸೇರಿಸಿ ಸುಮಾರು 2.5 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ವಂತ ಜವಳಿ ಅಂಗಡಿ ಆರಂಭಿಸಿದ್ದಾರೆ.

**ಅಂಗಡಿಗೂ ಗೃಹಲಕ್ಷ್ಮಿ ಹೆಸರಿಟ್ಟ ಶಕುಂತಳಾ!**
ತಮ್ಮ ಉದ್ಯಮ ಆರಂಭಿಸಲು ನೆರವಾದ ಯೋಜನೆಯ ನೆನಪಿಗಾಗಿ ಅಂಗಡಿಗೆ ‘ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ಟೈಲ್’ ಎಂದು ಹೆಸರಿಟ್ಟಿದ್ದಾರೆ. ಅಕ್ಟೋಬರ್ 15ರಂದು ಉದ್ಘಾಟನೆಯಾದ ಈ ಅಂಗಡಿಯಲ್ಲಿ ಜವಳಿ, ಫ್ಯಾನ್ಸಿ ವಸ್ತುಗಳ ಮಾರಾಟದ ಜೊತೆಗೆ ಟೈಲರಿಂಗ್ ಸೇವೆಯೂ ಲಭ್ಯವಿದೆ. ಬಹುತೇಕ ಉಡುಪುಗಳನ್ನು ಬೆಂಗಳೂರಿನಿಂದ ಖರೀದಿಸಿ ತಂದಿದ್ದಾರೆ.
**23 ವರ್ಷಗಳಿಂದ ಅಂಗನವಾಡಿ ಸೇವೆ!**
ಕಳೆದ 23 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಶಕುಂತಳಾ ಅವರಿಗೆ ವೇತನದಿಂದಲೇ ಕುಟುಂಬದ ಎಲ್ಲ ಖರ್ಚುಗಳನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು. ಕೆಲವೊಮ್ಮೆ ಮೂರು ತಿಂಗಳವರೆಗೂ ವೇತನ ವಿಳಂಬವಾಗುತ್ತಿತ್ತು. ಸಾಲದ ಕಂತು ಕಟ್ಟುವುದಕ್ಕೂ ಪರದಾಡುವ ಪರಿಸ್ಥಿತಿ ಎದುರಾಗುತ್ತಿತ್ತು.
ಹೀಗಾಗಿ ಹೆಚ್ಚುವರಿ ಆದಾಯಕ್ಕಾಗಿ ಈ ಹಿಂದೆ ಸಾಬೂನು ಮಾರಾಟ, ಗೋಧಿ ಹಿಟ್ಟು ಮಾರಾಟ ಹಾಗೂ ಟೈಲರಿಂಗ್ ಸೇರಿದಂತೆ ಹಲವು ಸಣ್ಣಪುಟ್ಟ ಉದ್ಯಮಗಳನ್ನು ನಡೆಸಿದ್ದರು.
**ಬೆಳಗ್ಗೆ ಅಂಗಡಿ, ಹಗಲು ಅಂಗನವಾಡಿ, ಸಂಜೆ ಮತ್ತೆ ವ್ಯಾಪಾರ!**
ಶಕುಂತಳಾ ಅವರ ದಿನಚರಿಯೂ ವಿಶೇಷವಾಗಿದೆ. ಬೆಳಗ್ಗೆ 7.30ಕ್ಕೆ ಅಂಗಡಿ ತೆರೆಯುವ ಅವರು, 9.30ಕ್ಕೆ ಅಂಗನವಾಡಿಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಾರೆ. ಮಧ್ಯಾಹ್ನ 3.30ಕ್ಕೆ ಅಂಗನವಾಡಿ ಕೆಲಸ ಮುಗಿಸಿ ಮತ್ತೆ ಅಂಗಡಿಗೆ ಬಂದು ವ್ಯಾಪಾರ ಮುಂದುವರಿಸುತ್ತಾರೆ.
ಸಿಕ್ಕ ಹಣವನ್ನು ಸಮರ್ಪಕವಾಗಿ ಬಳಸಿಕೊಂಡರೆ ಸಣ್ಣ ಉಳಿತಾಯದಿಂದಲೂ ದೊಡ್ಡ ಕನಸನ್ನು ನನಸಾಗಿಸಿಕೊಳ್ಳಬಹುದು ಎಂಬುದಕ್ಕೆ ಶಕುಂತಳಾ ಅವರ ಸಾಧನೆಯೇ ಸಾಕ್ಷಿಯಾಗಿದೆ.