ಅಂದು ಅಪಹಾಸ್ಯ, ಅವಮಾನ.ಇಂದು ಪ್ರೀತಿಸಿದವನ ಜೊತೆ ಮದುವೆ!ರೇಬತಿ ಬದುಕಿನ ಭಾವುಕ ಕಥೆ
ಒಡಿಶಾ: ಬಾಲ್ಯದಿಂದಲೂ ಅಪರೂಪದ ಆನುವಂಶಿಕ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ. ಸಮಾಜದ ಅಪಹಾಸ್ಯ, ಅವಮಾನಗಳ ನಡುವೆಯೇ ಬದುಕು ಸಾಗಿಸಿದ್ದ ಆಕೆಯ ಜೀವನದಲ್ಲಿ ಇದೀಗ ಹೊಸ ಅಧ್ಯಾಯ ಆರಂಭವಾಗಿದೆ.
ಒಡಿಶಾ: ಬಾಲ್ಯದಿಂದಲೂ ಅಪರೂಪದ ಆನುವಂಶಿಕ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ. ಸಮಾಜದ ಅಪಹಾಸ್ಯ, ಅವಮಾನಗಳ ನಡುವೆಯೇ ಬದುಕು ಸಾಗಿಸಿದ್ದ ಆಕೆಯ ಜೀವನದಲ್ಲಿ ಇದೀಗ ಹೊಸ ಅಧ್ಯಾಯ ಆರಂಭವಾಗಿದೆ.
ವೈದ್ಯಕೀಯ ಚಿಕಿತ್ಸೆಯ ಬಳಿಕ ಹೊಸ ಆತ್ಮವಿಶ್ವಾಸದೊಂದಿಗೆ ಬದುಕು ಕಟ್ಟಿಕೊಂಡ ರೇಬತಿ ಕನ್ಹರ್, ಇದೀಗ ಪ್ರೀತಿಸಿದ ವ್ಯಕ್ತಿಯ ಕೈಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಾಲ್ಯದಿಂದಲೂ ನೋವಿನ ಬದುಕು!
ಬಾಲ್ಯದಿಂದಲೂ ನೋವಿನ ಬದುಕು!
31 ವರ್ಷದ ರೇಬತಿ ಕನ್ಹರ್ ಅವರು ಹೈಪರ್‌ಟ್ರೈಕೋಸಿಸ್ ಎಂಬ ಅಪರೂಪದ ವೈದ್ಯಕೀಯ ಸ್ಥಿತಿಯಿಂದ ಬಳಲುತ್ತಿದ್ದರು. ಮುಖ ಸೇರಿದಂತೆ ದೇಹದಾದ್ಯಂತ ಅತಿಯಾಗಿ ಕೂದಲು ಬೆಳೆಯುತ್ತಿತ್ತು. ವಸಡಿನ ಅತಿಯಾದ ಬೆಳವಣಿಗೆಯಿಂದ ಮುಖದ ಆಕಾರದಲ್ಲಿಯೂ ಬದಲಾವಣೆಯಾಗಿತ್ತು.
ಇದರಿಂದ ಬಾಲ್ಯದಲ್ಲಿಯೇ ಸಾಕಷ್ಟು ಅವಮಾನ ಹಾಗೂ ಸಾಮಾಜಿಕ ಬಹಿಷ್ಕಾರ ಎದುರಿಸಿದ್ದರು.ಪತ್ರಿಕೆಯ ವರದಿಯಿಂದ ಬದಲಾಯ್ತು ಬದುಕು!
ಇದರಿಂದ ಬಾಲ್ಯದಲ್ಲಿಯೇ ಸಾಕಷ್ಟು ಅವಮಾನ ಹಾಗೂ ಸಾಮಾಜಿಕ ಬಹಿಷ್ಕಾರ ಎದುರಿಸಿದ್ದರು.ಪತ್ರಿಕೆಯ ವರದಿಯಿಂದ ಬದಲಾಯ್ತು ಬದುಕು!
2008ರಲ್ಲಿ ರೇಬತಿ ಅವರ ಸಂಕಷ್ಟದ ಕುರಿತು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ವಿಶೇಷ ವರದಿ ಪ್ರಕಟಿಸಿತ್ತು. ಆಗ ಅವರಿಗೆ ಕೇವಲ 13 ವರ್ಷ ವಯಸ್ಸಾಗಿತ್ತು. ವರದಿಯ ಬಳಿಕ ರಾಜ್ಯ ಸರ್ಕಾರ ಚಿಕಿತ್ಸೆಗೆ ನೆರವು ನೀಡಲು ಮುಂದಾಗಿತ್ತು.
ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೇಬತಿ ಅವರ ಬದುಕಿನಲ್ಲಿ ಮಹತ್ವದ ಬದಲಾವಣೆ ಆರಂಭವಾಯಿತು.
ಪರಿಚಯ ಪ್ರೀತಿಯಾಯ್ತು, ಪ್ರೀತಿ ಮದುವೆಯಲ್ಲಿ ಅಂತ್ಯವಾಯ್ತು!
ಸಣ್ಣ ಪ್ರಮಾಣದ ವ್ಯಾಪಾರ ನಡೆಸುತ್ತಿದ್ದ ಪಿಟಾಬಾಸ್ ಸಾಹು ಅವರೊಂದಿಗೆ ರೇಬತಿಗೆ ಪರಿಚಯವಾಗಿತ್ತು. ದಿನಗಳು ಕಳೆದಂತೆ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಇದೀಗ ಇಬ್ಬರೂ ಸಾಂಪ್ರದಾಯಿಕ ವಿಧಿವಿಧಾನಗಳಂತೆ ಮದುವೆಯಾಗಿದ್ದಾರೆ.
ಅಂದು ಅಣಕಿಸಿದ್ದ ಸಮಾಜದ ನಡುವೆ ಇಂದು ಮದುವೆಯ ಸಂಭ್ರಮ!
ಖಾಲಿಸಾಹಿಯಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಸ್ಥಳೀಯ ಹಿರಿಯರು ಹಾಗೂ ಗ್ರಾಮಸ್ಥರು ಆಗಮಿಸಿ ನವದಂಪತಿಗೆ ಶುಭ ಹಾರೈಸಿದ್ದಾರೆ.
ಹಲವು ವರ್ಷಗಳ ಸಂಕಷ್ಟಗಳನ್ನು ಎದುರಿಸಿದ ರೇಬತಿ ಅವರ ಬದುಕಿನಲ್ಲಿ ಇದೀಗ ಹೊಸ ಭರವಸೆ ಮೂಡಿದೆ. ಅವರ ಜೀವನದ ಪಯಣ ಮಾನವೀಯತೆ, ಆತ್ಮವಿಶ್ವಾಸ ಮತ್ತು ಪ್ರೀತಿಯ ಮಹತ್ವವನ್ನು ಸಾರುತ್ತದೆ.
