ನೂಡಲ್ಸ್ ತಿಂದ 7 ವರ್ಷದ ಬಾಲಕಿ ಸಾ*ವು! ಅಕ್ಕನ ಸ್ಥಿತಿಯೂ ಗಂಭೀರ, ಜೈಪುರದಲ್ಲಿ ದುರಂತ
ಮನೆಯಲ್ಲಿ ತಯಾರಿಸಿದ ನೂಡಲ್ಸ್ ತಿಂದ ಬಳಿಕ ನಿದ್ರೆಗೆ ಜಾರಿದ ಸಹೋದರಿಯರು! ಎಚ್ಚರಿಸಲು ಬಂದ ತಾಯಿಗೆ ಕಾದಿತ್ತು ಆಘಾತಕಾರಿ ದೃಶ್ಯ!
ರಾಜಸ್ಥಾನದ ಜೈಪುರದಲ್ಲಿ ನೂಡಲ್ಸ್ ಸೇವಿಸಿದ ಏಳು ವರ್ಷದ ಬಾಲಕಿಯೊಬ್ಬಳು ಮೃ*ತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಇದೇ ಆಹಾರ ಸೇವಿಸಿದ ಆಕೆಯ ಅಕ್ಕ ಕೂಡ ಅಸ್ವಸ್ಥಳಾಗಿದ್ದು, ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ. ಪ್ರಾಥಮಿಕ ತನಿಖೆಯಲ್ಲಿ ಫುಡ್ ಪಾಯಿಸನ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ನವೆಂಬರ್ 19ರಂದು ಜೈಪುರದ ಕರಧನಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗಳಂ ಸಿಟಿಯಲ್ಲಿ ಈ ಘಟನೆ ನಡೆದಿದೆ. ಪಿಹು ಕುಮಾವತ್ (7) ಮತ್ತು ಆಕೆಯ ಅಕ್ಕ ದಿವ್ಯಾಂಶಿ (18) ಮನೆಯಲ್ಲಿದ್ದಾಗ ನೂಡಲ್ಸ್ ಸೇವಿಸಿದ್ದರು. ವರದಿಗಳ ಪ್ರಕಾರ, ಅಂದು ಬೆಳಗ್ಗೆ ಪೋಷಕರು ಆಸ್ಪತ್ರೆಯಲ್ಲಿದ್ದ ಮಗ ಗೋವಿಂದ್‌ನನ್ನು ನೋಡಲು ತೆರಳಿದ್ದರು. ಈ ವೇಳೆ ಮನೆಯಲ್ಲಿದ್ದ ಮಕ್ಕಳು ನೂಡಲ್ಸ್ ತಯಾರಿಸಿ ತಿಂದಿದ್ದರು.
ಮಧ್ಯಾಹ್ನ ಸುಮಾರು 3 ಗಂಟೆಗೆ ತಾಯಿ ಮನೆಗೆ ಬಂದಾಗ ಇಬ್ಬರೂ ನಿದ್ರಿಸುತ್ತಿದ್ದರು. ತಾಯಿ ಎಬ್ಬಿಸಿದಾಗ ದಿವ್ಯಾಂಶಿ ಎಚ್ಚರಗೊಂಡಿದ್ದಾಳೆ. ಆದರೆ ಪಿಹು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮತ್ತೊಂದೆಡೆ, ದಿವ್ಯಾಂಶಿಗೂ ವಾಂತಿ ಸೇರಿದಂತೆ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡಿದ್ದವು.
ತಕ್ಷಣವೇ ಕುಟುಂಬಸ್ಥರು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಪಿಹು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಅಸ್ವಸ್ಥಳಾಗಿದ್ದ ದಿವ್ಯಾಂಶಿಗೆ ಚಿಕಿತ್ಸೆ ನೀಡಲಾಗಿದ್ದು, ನವೆಂಬರ್ 20ರ ಶುಕ್ರವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ನೂಡಲ್ಸ್‌ನಲ್ಲಿತ್ತೇ ವಿಷಕಾರಿ ಅಂಶ?
ಈ ಪ್ರಕರಣದಲ್ಲಿ ಆಹಾರ ವಿಷಪೂರಿತವಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಬಾಲಕಿಯ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ. ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಕರಧನಿ ಪೊಲೀಸರು ನೂಡಲ್ಸ್‌ನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪ್ರಯೋಗಾಲಯದ ಫಲಿತಾಂಶ ಬಂದ ಬಳಿಕವಷ್ಟೇ ಸಾವಿನ ಹಿಂದಿನ ನಿಜವಾದ ಕಾರಣ ತಿಳಿದುಬರಲಿದೆ.
ಇನ್ನು ಕುಟುಂಬದ ಮೇಲೆ ಈಗಾಗಲೇ ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು. ಮೃತ ಬಾಲಕಿ ಪಿಹುವಿನ ಸಹೋದರ ಗೋವಿಂದ್ ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಸಾಮಾನ್ಯ ಆಹಾರ ಸೇವನೆಯ ಬಳಿಕ ಸಂಭವಿಸಿದ ಈ ದುರಂತ ಇದೀಗ ಆಹಾರದ ಸುರಕ್ಷತೆ ಮತ್ತು ಸ್ವಚ್ಛತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.